ಮಹತ್ವಾಕಾಂಕ್ಷೆಯ 'ಪ್ರಾಜೆಕ್ಟ್ ಚೀತಾ' ಭಾಗವಾಗಿ ದಕ್ಷಿಣ ಆಫ್ರಿಕಾದಿಂದ ಸ್ಥಳಾಂತರಿಸಲ್ಪಟ್ಟ ಮತ್ತೊಂದು ಚೀತಾ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬುಧವಾರದಂದು ಸಾವನ್ನಪ್ಪಿದೆ ಎಂದು ವರದಿಯಾಗಿದೆ.
ಇಂದು ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನವನದಲ್ಲಿ ಗಂಡು ಚಿರತೆಯೊಂದು ಸಾವನ್ನಪ್ಪಿದ್ದು, ಸುಮಾರು ನಾಲ್ಕು ತಿಂಗಳಲ್ಲಿ ಎಂಟನೇ ಚಿರತೆ ಬಲಿಯಾಗಿದೆ.ಇಂದು ಮುಂಜಾನೆ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಆಫ್ರಿಕನ್ ಚಿರತೆ ಸೂರಜ್ ಶವವಾಗಿ ಪತ್ತೆಯಾಗಿದೆ.ಸೂರಜ್ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾ ಚಿರತೆ ಜ್ವಾಲಾಗೆ ಜನಿಸಿದ ಎರಡು ಮರಿಗಳು ಬಿಸಿಲಿನ ನಡುವೆ ಗುರುವಾರ ಸಾವನ್ನಪ್ಪಿವೆ. ಇತ್ತೀಚಿನ ಸಾವಿನಿಂದಾಗಿ ಆಫ್ರಿಕನ್ ದೇಶಗಳಿಂದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಗೊಂಡ ಚಿರತೆಗಳ ಸಾವಿನ ಸಂಖ್ಯೆಯನ್ನು ಕಳೆದ ಎರಡು ತಿಂಗಳಲ್ಲಿ ಆರಕ್ಕೇರಿದೆ.ನಿರ್ಜಲೀಕರಣದಿಂದ ಮರಿಗಳ ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
Cheetah Daksha Died: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಚಿರತೆ ಸಾವನ್ನಪ್ಪಿದೆ. ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ದಕ್ಷ ಎಂಬ ಹೆಣ್ಣು ಚಿರತೆ ಮೃತಪಟ್ಟಿರುವುದಾಗಿ ಮಧ್ಯಪ್ರದೇಶದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆ.ಎಸ್.ಚೌಹ್ಹಾಣ್ ತಿಳಿಸಿದ್ದಾರೆ.
ಭಾರತದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚುತ್ತಿದೆ. ಕಳೆದ ವರ್ಷ ನಮೀಬಿಯಾದಿಂದ 8 ಚಿರತೆಗಳು ಭಾರತಕ್ಕೆ ಬಂದಿದ್ದವು. ಇದೀಗ ದಕ್ಷಿಣ ಆಫ್ರಿಕಾದಿಂದ ಮತ್ತೆ 12 ಚಿರತೆಗಳು ಬಂದಿದ್ದಾವೆ. ಜೋಹಾನ್ಸ್ಬರ್ಗ್ನಿಂದ ಚಿರತೆಗಳೊಂದಿಗೆ ಹಾರಿದ C-17 ವಿಮಾನವು ಇಂದು ಬೆಳಿಗ್ಗೆ 10 ಗಂಟೆಗೆ ಗ್ವಾಲಿಯರ್ ಏರ್ಬೇಸ್ನಲ್ಲಿ ಇಳಿಯಿತು. ಅಲ್ಲಿಂದ ಚಿರತೆಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಯಿತು.
Cheetah Return: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪ್ರಾಜೆಕ್ಟ್ ಚೀತಾ ಉದ್ಘಾಟಿಸಿದ್ದಾರೆ. ಇದರ ಅಡಿ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದ 8 ಚಿರತೆಗಳನ್ನು ಬಿಡಲಾಗಿದೆ. ಈ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ, ಇಂದು ಈ ಚಿರತೆಗಳು ಭಾರತಕ್ಕೆ ಅತಿಥಿಯಾಗಿ ಆಗಮಿಸಿವೆ ಎಂದಿದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.