Project Cheetah: ಭಾರತದ ಭೂಮಿಯ ಮೇಲೆ ಚೀತಾಗಳ ವಾಪಸಾತಿ, ಶತಮಾನಗಳ ಹಳೆ ಸಂಬಂಧ ಮರುಸ್ಥಾಪಿಸುವ ಪ್ರಯತ್ನ ಎಂದ ಪ್ರಧಾನಿ

Cheetah Return: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪ್ರಾಜೆಕ್ಟ್ ಚೀತಾ ಉದ್ಘಾಟಿಸಿದ್ದಾರೆ. ಇದರ ಅಡಿ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದ 8 ಚಿರತೆಗಳನ್ನು ಬಿಡಲಾಗಿದೆ. ಈ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ,  ಇಂದು ಈ ಚಿರತೆಗಳು ಭಾರತಕ್ಕೆ ಅತಿಥಿಯಾಗಿ ಆಗಮಿಸಿವೆ ಎಂದಿದಾರೆ.   

Written by - Nitin Tabib | Last Updated : Sep 17, 2022, 01:25 PM IST
  • ನಿಸರ್ಗ ಮತ್ತು ಪರಿಸರವನ್ನು ರಕ್ಷಿಸಿದಾಗ ನಮ್ಮ ಭವಿಷ್ಯವೂ ಸುಭದ್ರವಾಗಿರುವುದು ನಿಜ
  • ಅಭಿವೃದ್ಧಿ ಮತ್ತು ಸಮೃದ್ಧಿಯ ದಾರಿಗಳೂ ತೆರೆದುಕೊಳ್ಳುತ್ತವೆ.
  • ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳು ಮತ್ತೆ ಓಡಿದಾಗ, ಇಲ್ಲಿನ ಹುಲ್ಲುಗಾವಲು ಪರಿಸರ ವ್ಯವಸ್ಥೆಯು ಪುನಃ ಮರುಸ್ಥಾಪನೆಯಾಗುತ್ತದೆ
Project Cheetah: ಭಾರತದ ಭೂಮಿಯ ಮೇಲೆ ಚೀತಾಗಳ ವಾಪಸಾತಿ, ಶತಮಾನಗಳ ಹಳೆ ಸಂಬಂಧ ಮರುಸ್ಥಾಪಿಸುವ ಪ್ರಯತ್ನ ಎಂದ ಪ್ರಧಾನಿ title=
Project Cheetah

Kuno National Park: ಭಾರತದಲ್ಲಿ 70 ವರ್ಷಗಳ ಸುದೀರ್ಘ ನಿರೀಕ್ಷೆಗೆ ಕೊನೆಗೂ ತೆರೆಬಿದ್ದಂತಾಗಿದೆ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಮೀಬಿಯಾದಿಂದ ಬರಮಾಡಿಸಿಕೊಳ್ಳಲಾದ 8 ಚಿರತೆಗಳನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೆ, ಪ್ರಾಜೆಕ್ಟ್ ಚೀತಾ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಚಿರತೆಯನ್ನು ಆವರಣದಲ್ಲಿ ಬಿಟ್ಟ ನಂತರ ಸ್ವತಃ ಪ್ರಧಾನಿ ಮೋದಿ ಅವರೇ ಕ್ಯಾಮೆರಾ ಹಿಡಿದು ಅವುಗಳ ಫೋಟೋ ಕ್ಲಿಕ್ಕಿಸಿದ್ದಾರೆ. ವಿಶೇಷ ಚಾರ್ಟರ್ಡ್ ವಿಮಾನದ ಮೂಲಕ ಈ ಚಿರತೆಗಳನ್ನು ನಮೀಬಿಯಾದಿಂದ ಗ್ವಾಲಿಯರ್‌ಗೆ ತರಲಾಗಿದೆ. ಇದಾದ ಬಳಿಕ ಹೆಲಿಕಾಪ್ಟರ್ ಮೂಲಕ ಚಿರತೆಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿದೆ.

ಪ್ರಾಜೆಕ್ಟ್ ಚೀತಾ ಉದ್ಘಾಟಿಸಿದ ಪ್ರಧಾನಿ ಮೋದಿ
ಪ್ರಾಜೆಕ್ಟ್ ಚೀತಾ ಉದ್ಘಾಟಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ದಶಕಗಳ ನಂತರ ಇಂದು ಚಿರತೆಗಳು ದೇಶಕ್ಕೆ ಮರಳಿವೆ. ಇದಕ್ಕಾಗಿ ನಾನು ನಮೀಬಿಯಾ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅವರಿಂದಾಗಿ ಈ ಕಾಮಗಾರಿ ಪೂರ್ಣಗೊಂಡಿದೆ. 1952ರಲ್ಲಿ ಚಿರತೆಗಳು ದೇಶದಿಂದ ನಿರ್ನಾಮವಾಗಿದೆ ಎಂದು ನಾವು ಘೋಷಿಸಿದ್ದು ದುರದೃಷ್ಟಕರ, ಆದರೆ ಕಳೆದ ಹಲವು ದಶಕಗಳಿಂದ ಅವುಗಳ ಪುನರ್ವಸತಿಗೆ ಯಾವುದೇ ಅರ್ಥಪೂರ್ಣ ಪ್ರಯತ್ನ ನಡೆದಿಲ್ಲ. ಇಂದು, ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಭಾಗವಾಗಿ, ಈಗ ದೇಶವು ಹೊಸ ಶಕ್ತಿಯೊಂದಿಗೆ ಚಿತ್ರತೆಗಳಿಗೆ ಪುನರ್ವಸತಿ ಕಲ್ಪಿಸುವ ಪ್ರಯತ್ನ ನಡೆಸಲಿದೆ ಎಂದಿದ್ದಾರೆ.

ಇದನ್ನೂ ಓದಿ-PM Modi Birthday: ರಾಷ್ಟ್ರಪತಿ, ರಾಹುಲ್ ಹಾಗೂ ಅಮಿತ್ ಶಾ ಸೇರಿದಂತೆ ಹಲವು ಗಣ್ಯರಿಂದ ಪ್ರಧಾನಿ ಮೋದಿಗೆ ಶುಭ ಹಾರೈಕೆ

'ಹುಲ್ಲುಗಾವಲು ಪರಿಸರ ವ್ಯವಸ್ಥೆಯನ್ನು ಮರುಸ್ಥಾಪಿಸಲಾಗುವುದು'
ನಿಸರ್ಗ ಮತ್ತು ಪರಿಸರವನ್ನು ರಕ್ಷಿಸಿದಾಗ ನಮ್ಮ ಭವಿಷ್ಯವೂ ಸುಭದ್ರವಾಗಿರುವುದು ನಿಜ ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಹೇಳಿದ್ದಾರೆ. ಅಭಿವೃದ್ಧಿ ಮತ್ತು ಸಮೃದ್ಧಿಯ ದಾರಿಗಳೂ ತೆರೆದುಕೊಳ್ಳುತ್ತವೆ. ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳು ಮತ್ತೆ ಓಡಿದಾಗ, ಇಲ್ಲಿನ ಹುಲ್ಲುಗಾವಲು ಪರಿಸರ ವ್ಯವಸ್ಥೆಯು ಪುನಃ ಮರುಸ್ಥಾಪನೆಯಾಗುತ್ತದೆ ಮತ್ತು ಜೀವವೈವಿಧ್ಯವು ಹೆಚ್ಚಾಗುತ್ತದೆ. ಅವರು ಹೇಳಿದ್ದಾರೆ, 'ಪ್ರಕೃತಿ ಮತ್ತು ಪರಿಸರ, ಪ್ರಾಣಿಗಳು ಮತ್ತು ಪಕ್ಷಿಗಳು, ಭಾರತಕ್ಕೆ ಇದು ಸುಸ್ಥಿರತೆ ಮತ್ತು ಭದ್ರತೆಯ ಬಗ್ಗೆ ಮಾತ್ರವಲ್ಲ. ನಮಗೆ ಇದು ನಮ್ಮ ಸಂವೇದನೆ ಮತ್ತು ಆಧ್ಯಾತ್ಮಿಕತೆಯ ಆಧಾರವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಇದನ್ನೂ ಓದಿ-PM Modi Fitness: 72ರ ಹರೆಯದಲ್ಲೂ ಪ್ರಧಾನಿ ಮೋದಿ ಹೇಗೆ ಫಿಟ್ ಆಗಿದ್ದಾರೆ ಗೊತ್ತಾ?

'ದೇಶದ ನಿವಾಸಿಗಳು ತಾಳ್ಮೆ ಪ್ರದರ್ಶಿಸಬೇಕು'
ಈ ಸಂದರ್ಭದಲ್ಲಿ ದೇಶದ ನಾಗರಿಕರಿಗೆ ಮನವಿ ಮಾಡಿದ ಪ್ರಧಾನಿ ಮೋದಿ, 'ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಉಳಿದಿರುವ ಚಿರತೆಗಳನ್ನು ನೋಡಲು ದೇಶದ ನಾಗರಿಕರು ತಾಳ್ಮೆ ತೋರಿಸಬೇಕು, ಕೆಲವು ತಿಂಗಳು ಕಾಯಬೇಕು. ಇಂದು ಈ ಚಿರತೆಗಳು ತಮಗರಿವಿಲ್ಲದ ಪ್ರದೇಶದಕ್ಕೆ ಅತಿಥಿಗಳಾಗಿ ಬಂದಿವೆ. ಈ ಚಿರತೆಗಳು ಕುನೊ ರಾಷ್ಟ್ರೀಯ ಉದ್ಯಾನವನವನ್ನು ತಮ್ಮ ಮನೆಯನ್ನಾಗಿ ಮಾಡಿಕೊಳ್ಳಲು, ನಾವು ಈ ಚಿರತೆಗಳಿಗೂ ಕೆಲವು ತಿಂಗಳುಗಳ ಸಮಯವನ್ನು ನೀಡಬೇಕಾಗಿದೆ. ಅಂತರಾಷ್ಟ್ರೀಯ ಮಾರ್ಗಸೂಚಿಗಳನ್ನು ಅನುಸರಿಸಿ, ಭಾರತವು ಈ ಚಿರತೆಗಳನ್ನು ನೆಲೆಗೊಳಿಸಲು ತನ್ನ ಅತ್ಯುತ್ತಮ ಪ್ರಯತ್ನವನ್ನು ನಡೆಸಲಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News