ಇಂಗ್ಲೆಂಡ್ ಸಿಂಹಾಸನದ ರಾಣಿ ಎಲಿಜಬೆತ್ II ಅವರು ತಮ್ಮ ಆಳ್ವಿಕೆ ಪ್ರಾರಂಭಿಸಿ 70 ವರ್ಷಗಳು ಕಳೆದಿದೆ. ಈ ಸಂದರ್ಭದಲ್ಲಿ, ಅದರ ಗೌರವಾರ್ಥವಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ರಾಣಿಯ ಪ್ಲಾಟಿನಂ ಜುಬಿಲಿ ಆಚರಣೆಗಳನ್ನು ಗುರುತಿಸಲು ನಡೆಯುತ್ತಿರುವ ನಾಲ್ಕು ದಿನಗಳ ಮೆರವಣಿಗೆಯ ಎರಡನೇ ದಿನದಂದು 'ಥ್ಯಾಂಕ್ಸ್ಗಿವಿಂಗ್' ಕಾರ್ಯಕ್ರಮ ನಡೆಯಲಿದೆ. ಈ ನಿಟ್ಟಿನಲ್ಲಿ 20 ವರ್ಷಗಳ ನಂತರ ರಾಣಿಯ ಈ ವಿಶೇಷ ಚಿನ್ನದ ರಥ ಬೀದಿಗಿಳಿದಿದೆ.
ಬ್ರಿಟನ್ನಲ್ಲಿ ರಾಣಿ ಎಲಿಜಬೆತ್ II ರ ಆಳ್ವಿಕೆಯ 70 ವರ್ಷಗಳ ಆಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಬ್ರಿಟನ್ನ ಬೀದಿಗಳಲ್ಲಿ ಚಿನ್ನದ ರಥವನ್ನು ಓಡಿಸಲಾಗಿತ್ತು. ಇದನ್ನು ಕಂಡ ಜನರು ಆಶ್ಚರ್ಯಚಕಿತರಾಗಿ ನೋಡಿದ್ದಾರೆ. ಅದು 260 ವರ್ಷ ಹಳೆಯ ಚಿನ್ನದ ರಥವಾಗಿದ್ದು, 1953 ರಲ್ಲಿ ಪಟ್ಟಾಭಿಷೇಕದ ದಿನದಂದು ಯುವ ರಾಣಿ ಬಕಿಂಗ್ಹ್ಯಾಮ್ ಅರಮನೆಯಿಂದ ವೆಸ್ಟ್ಮಿನಿಸ್ಟರ್ ಪ್ಯಾಲೇಸ್ಗೆ ಅದೇ ರಥದಲ್ಲಿ ಆಗಮಿಸಿದ್ದರು. ಗೋಲ್ಡ್ ಸ್ಟೇಟ್ ಕೋಚ್ ಎಂಬ ಹೆಸರಿನ ಈ ರಥವು ಈಗ ಲಂಡನ್ನಲ್ಲಿ ಭಾನುವಾರ ನಡೆಯಲಿರುವ ಪ್ಲಾಟಿನಂ ಜುಬಿಲಿ ಪರೇಡ್ ಅನ್ನು ಮುನ್ನಡೆಸಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.