ಕ್ರಿಕೆಟ್ ನಲ್ಲಿ ಆರ್ ಸಿಬಿ ಕಬ್ಬಡಿಯಲ್ಲಿ ಬೆಂಗಳೂರು ಬುಲ್ಸ್ ಎನ್ನುವಂತಿತ್ತು ಇಂದಿನ ಪಂದ್ಯ. ಅಂತೂ ಜೀವ ಬಾಯಿಗೆ ಬರುವಂತೆ ಮಾಡಿ ಪಂದ್ಯ ಸಮಬಲ ಸಾಧಿಸಿತು ಬೆಂಗಳೂರು ಬುಲ್ಸ್. ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಪಾಟ್ನಾ ಪೈರೇಟ್ಸ್ ತಂಡಗಳು 31-31 ಅಂತರದಲ್ಲಿ ಸಮಬಲ ಸಾಧಿಸಿವೆ.
ಬೆಂಗಳೂರು ಬುಲ್ಸ್ ಪರ ಭರತ್ ರೈಡಿಂಗ್ನಲ್ಲಿ 16 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ಇನ್ನೊಂದೆಡೆ ವಿಕಾಸ್ ಕಂಡೋಲಾ 8 ಅಂಕಗಳನ್ನು ಗಳಿಸಿ ಅದ್ಭುತ ಜಯದಲ್ಲಿ ನೆರವಾದರು. ಸಕೆಂಡ್ ಆಫ್ ನಲ್ಲಿ ಬೆಂಗಳೂರು 31 ಅಂಕಗಳನ್ನು ಗಳಿಸಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು.
ರೋಚಕವಾಗಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ತಂಡ ಯುಪಿ ಯೋಧಾಸ್ ವಿರುದ್ಧ 44-42 ಅಂತರದಲ್ಲಿ ಜಯ ಗಳಿಸಿ ಅಜೇಯವಾಗಿ ಮುನ್ನಡೆದಿದೆ. ಆಡಿದ ಸತತ ಮೂರು ಪಂದ್ಯಗಳನ್ನೂ ಡೆಲ್ಲಿ ಜಯ ಗಳಿಸಿ ಹ್ಯಾಟ್ರಿಕ್ ಸಾಧನೆ ಮಾಡಿದೆ.
ತನ್ನ ಸಾಮರ್ಥ್ಯಕ್ಕೆ ತಕ್ಕುದಾದ ಆಟವನ್ನು ಪ್ರದರ್ಶಿಸದ ಬೆಂಗಳೂರು ಬುಲ್ಸ್ ವಿವೋ ಪ್ರೋ ಕಬಡ್ಡಿ ಲೀಗ್ನಲ್ಲಿ ಮೊದಲ ಸೋಲನುಭವಿಸಿದೆ. ನಾಯಕ ಮಣಿಂದರ್ ಸಿಂಗ್ (11) ಅವರ ಸೂಪರ್ ಟೆನ್ ರೈಡಿಂಗ್ ಅಂಕಗಳ ನೆರವಿನಿಂದ ಬೆಂಗಳೂರು ಬುಲ್ಸ್ ವಿರುದ್ಧ 42-33 ಅಂತರದಲ್ಲಿ ಜಯ ಗಳಿಸಿದ ಬೆಂಗಾಲ್ ವಾರಿಯರ್ಸ್ ತಂಡ ಪ್ರೋ ಕಬಡ್ಡಿ ಲೀಗ್ನಲ್ಲಿ ಮತ್ತೊಂದು ಜಯ ದಾಖಲಿಸಿದೆ. ಇದರೊಂದಿಗೆ ಬೆಂಗಾಲ್ ವಾರಿಯರ್ಸ್ ಆಡಿದ ಮೂರು ಪಂದ್ಯಗಳಲ್ಲಿ 2 ಜಯ ಹಾಗೂ 1 ಡ್ರಾ ಸಾಧನೆ ಮಾಡಿದೆ.
ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಕೆಸಿ ತಂಡ ಯು ಮುಂಬಾ ವಿರುದ್ಧ 41-27 ಅಂತರದಲ್ಲಿ ಜಯ ಗಳಿಸುವ ಮೂಲಕ ವಿವೋ ಪ್ರೋ ಕಬಡ್ಡಿ ಲೀಗ್ನ 9ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಜಯದ ಮೂಲಕ ಅಭಿಯಾನ ಆರಂಭಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.