ಕನ್ನಡನಾಡು ಕಂಡು ಅಪರೂಪದ ಸಂತ, ‘ನಡೆದಾಡುವ ದೇವರು’ ಎಂದೇ ಪ್ರಸಿದ್ಧವಾಗಿದ್ದ ಚಿಂತಕ, ಪ್ರವಚನಕಾರ ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಶಿವೈಕ್ಯರಾಗಿದ್ದಾರೆ. ನಿನ್ನೆ ಶೋಕಸಾಗರದ ಮಧ್ಯೆ ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆ ನಡೆಯಿತು. ಪ್ರವಚನಕಟ್ಟೆ ಪಕ್ಕದಲ್ಲೇ ಸರಳವಾಗಿ ಅಂತ್ಯಕ್ರಿಯೆ ನಡೆಯಿತು.
ʻಸತ್ಯವೂ ಇಲ್ಲ, ಅಸತ್ಯವೂ ಇಲ್ಲ ಸಹಜವೂ ಇಲ್ಲ, ಅಸಹಜವೂ ಇಲ್ಲ ನಾನೂ ಇಲ್ಲ, ನೀನೂ ಇಲ್ಲ. ಇಲ್ಲ,ಇಲ್ಲ ಎಂಬುದು ತಾನಿಲ್ಲ ಗುಹೇಶ್ವರನೆಂಬುದು ತಾ ಬಯಲು. ಕೆಲವು ವರ್ಷಗಳ ಹಿಂದೆಯೇ ತಮ್ಮ ಅಂತ್ಯಕ್ರಿಯೆಯ ವಿಧಿವಿಧಾನಗಳ ತಮ್ಮ ಇಚ್ಛೆಯನ್ನು ಸಿದ್ದೇಶ್ವರ ಶ್ರೀಗಳು ಸ್ಪಷ್ಟವಾಗಿ ತಿಳಿಸಿದ್ದರು.
ʻಶತಮಾನದ ಸಂತʼ ಸಿದ್ದೇಶ್ವರ ಸ್ವಾಮೀಜಿ ಇನ್ನಿಲ್ಲ
ನಿನ್ನೆ ರಾತ್ರಿಯಿಂದಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ
ಜ್ಞಾನಯೋಗಿ ಆಶ್ರಮ ಹರಿದು ಬರುತ್ತಿದೆ ಭಕ್ತಸಾಗರ
ನಡೆದಾಡುವ ದೇವರನ್ನು ಕಳೆದುಕೊಂಡ ಭಕ್ತಸಾಗರ
ಇಂದು 50 ಲಕ್ಷ ಜನ ದರ್ಶನ ಪಡೆಯೋ ಸಾಧ್ಯತೆ
ಆಶ್ರಮದಲ್ಲಿ ಆಡಳಿತ ಮಂಡಳಿಯಿಂದ ಸಕಲ ವ್ಯವಸ್ಥೆ
ʻಶತಮಾನದ ಸಂತʼ ಸಿದ್ದೇಶ್ವರ ಸ್ವಾಮೀಜಿ ಅಗಲಿಕೆಗೆ ಸಹಸ್ರಾರು ಭಕ್ತರ ಕಂಬನಿ
ಶತಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿವೈಕ್ಯ. ಕೊನೆಗೂ ಫಲಿಸಲಿಲ್ಲ ಕೋಟಿ ಕೋಟಿ ಭಕ್ತರ ಪ್ರಾರ್ಥನೆ. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ 6.05ಕ್ಕೆ ನಿಧನ. ವೈಕುಂಠ ಏಕಾದಶಿಯ ಪುಣ್ಯ ದಿನವೇ ಇಹಲೋಕ ತ್ಯಾಗ. ಜ್ಞಾನಯೋಗ ಸಿದ್ದೇಶ್ವರ ಸ್ವಾಮೀಜಿ ಶಿವನಲ್ಲಿ ಐಕ್ಯ.
ಯಾವುದೇ ಪಂಥಗಳಿಲ್ಲದ ಗ್ರಂಥಕ್ಕೆ ಅಂಟಿಕೊಳ್ಳದ ಜನರ ಹೃದಯ ಗ್ರಂಥಿಗಳಲ್ಲಿ ಉಳಿದ ಸಂತ-ವಸಂತ, ಮಾಯ ಮುಟ್ಟದ ಕಾಯ ಭ್ರಮೆಯಿಲ್ಲದ ಭಾವ ಲೋಕಾಂತವನ್ನ ಪ್ರೀತಿಸಿ ತಾವು ಏಕಾಂತವಾಗಿ ಉಳಿದವರು ಎಂದು ಸಿದ್ದೇಶ್ವರ ಶ್ರೀಗಳ ಬಗ್ಗೆ ಅದ್ಬುತ ಸಾಲುಗಳನ್ನ ಬರೆದಿದ್ದಾರೆ.
ಕಲಾವಿದ ಮಂಜುನಾಥ ಅವರ ಕುಂಚದಲ್ಲಿ ಎರಡು ಅಡಿ ಸಿದ್ದೇಶ್ವರ ಶ್ರೀಗಳ ಮಣ್ಣಿನ ಮೂರ್ತಿ ಮಾಡಿ ಶ್ರೀಗಳ ನಿಧನಕ್ಕೆ ವಿಶೇಷ ಸಂತಾಪ ಸೂಚಿಸಿದ್ದಾರೆ. ಬಳಿಕ 11 ಗಂಟೆಗೆ ಕೆಲಗೇರಿ ಗ್ರಾಮಸ್ಥರಿಂದ ಸಿದ್ದೇಶ್ವರ ಶ್ರೀಗಳ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.