ಕಳೆದ ಅನೇಕ ವರ್ಷಗಳಿಂದ ತಮಗೂ ಒಂದು ಅಭಿವೃದ್ದಿ ಮಂಡಳಿ ಬೇಕು ಅಂತಾ ಸರ್ಕಾರದ ಮುಂದೆ ಖಾಸಗಿ ಚಾಲಕರು ಬಿಗಿಪಟ್ಟು ಹಿಡಿದಿದ್ದರು. ಜೊತೆಗೆ ಹಲವು ಬಾರಿ ರಸ್ತೆಗಿಳಿದು ಹೋರಾಟವನ್ನೂ ಮಾಡಿದ್ರು. ಆದರೆ ಸರ್ಕಾರ ಮಾತ್ರ ಈ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬಂದಿರಲಿಲ್ಲ.
ಸಾರಿಗೆ ಇಲಾಖೆ ಸಾರಿಗೆ ನೌಕರರ 416 ಕೋಟಿ ರುಪಾಯಿ ನುಂಗಿ ನೀರು ಕುಡಿದ್ರಾ ಸಾರಿಗೆ ಇಲಾಖೆಯ ನಾಲ್ಕು ನಿಗಮದ ಅಧಿಕಾರಿಗಳು..? ಬೀದಿಗೆ ಬಿದ್ದ ನಾಲ್ಕು ನಿಗಮದ ನಿವೃತ್ತ ಸಾರಿಗೆ ನೌಕರರು.. ಸುಮಾರು 3300 ನೌಕರರ ಗ್ರಾಚ್ಯೂಟಿ ಹಣ ಗುಳುಂ ಮಾಡಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ.
ಸರ್ಕಾರದ ವಿರುದ್ಧ ಕೆಂಪಣ್ಣ ಕಮಿಷನ್ ಆರೋಪ ವಿಚಾರದಲ್ಲಿ ಕಾಂಗ್ರೆಸ್ ಪ್ರಚೋದನೆ ಪಡೆದು ಆರೋಪ ಮಾಡುತ್ತಿದ್ದಾರೆ ಎಂದು ಗೌರಿಬಿದನೂರಿನಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ಆರೋಪಗಳು ನಿಜ ಆದರೆ ಸಾಕ್ಷಿ ಕೊಟ್ಟು ದಾಖಲೆ ನೀಡಲಿ. ಈ ರೀತಿಯ ಆರೋಪಗಳಿಂದ ಏನು ಸಿಗುತ್ತದೆ ಎಂದು ಕಿಡಿಕಾರಿದ್ದಾರೆ.
ಗೋವಾದಿಂದ ಹೈದರಾಬಾದ್ ತೆರಳುತ್ತಿದ್ದ ಬಸ್ ಅಪಘಾತಕ್ಕೀಡಾಗಿ ಬೆಂಕಿಗಾಹುತಿ ಆಗಿದೆ. ಕಲಬುರ್ಗಿಯಲ್ಲಿ ನಡೆದ ಘಟನೆಯಲ್ಲಿ ಏಳು ಜನ ಮೃತ ಪಟ್ಟಿದ್ದಾರೆ ಈ ಪೈಕಿ ಇಬ್ಬರು ಮಕ್ಕಳು ಸೇರಿದ್ದಾರೆ ಎಂದು ವಿವರಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC)2018-19ರಲ್ಲಿ 134.93 ಕೋಟಿ ರೂ., 2019-20ರಲ್ಲಿ 157.56 ಕೋಟಿ ರೂ. ಹಾಗೂ 2020-21ರಲ್ಲಿ 581.15 ಕೋಟಿ ರೂ. ನಷ್ಟ ಅನುಭಿಸುತ್ತಿದೆ ಎಂದು ಇಲಾಖೆ ತಿಳಿಸಿದೆ.
ಸಾರಿಗೆ ನಿಗಮಕ್ಕೆ 4 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ಆದ್ರೆ, ನಷ್ಟದಿಂದ ಸಾರಿಗೆ ಸಂಸ್ಥೆ ಮುಚ್ಚಲಿದೆ ಅನ್ನೋ ಭಯ ಬೇಡ. ಅದಕ್ಕೆ ನಾನು ಅವಕಾಶ ನೀಡೋಲ್ಲ ಎಂದ ರಾಜ್ಯ ಸಾರಿಗೆ ಸಚಿವ ಲಕ್ಷ್ಮಣ ಸವದಿ
ಸಾರಿಗೆ ಸಿಬ್ಬಂದಿಗಳೆಂದರೆ ನನಗೆ ನನ್ನ ಕುಟುಂಬವಿದ್ದಂತೆ, ಅವರ ಸಂಕಷ್ಟಗಳಿಗೆ ಸ್ಪಂದಿಸಲು ನಾನು ಸದಾ ಸಿದ್ಧ. ಹಿಂದೆಯೂ ಅನೇಕ ಸಂದರ್ಭಗಳಲ್ಲಿ ಇದನ್ನು ಸಾರಿಗೆ ಸಿಬ್ಬಂದಿಗಳು ಮನಗಂಡಿದ್ದಾರೆ.
ದೇಶಾದ್ಯಂತ 69,000 ಪೆಟ್ರೋಲ್ ಪಂಪ್ಗಳಲ್ಲಿ ಇ-ವೆಹಿಕಲ್ ಚಾರ್ಜಿಂಗ್ ಕಿಯೋಸ್ಕ್ ಅಳವಡಿಸುವ ಯೋಜನೆ ಬಗ್ಗೆ ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.