ಕಲಬುರಗಿಯಲ್ಲಿ ಬಸ್ ಅಪಘಾತ: ಮೃತರಿಗೆ ಪರಿಹಾರದ ಬಗ್ಗೆ ಸಿಎಂ ಜೊತೆ ಚರ್ಚೆ- ಶ್ರೀರಾಮುಲು

ಗೋವಾದಿಂದ ಹೈದರಾಬಾದ್ ತೆರಳುತ್ತಿದ್ದ ಬಸ್ ಅಪಘಾತಕ್ಕೀಡಾಗಿ  ಬೆಂಕಿಗಾಹುತಿ ಆಗಿದೆ. ಕಲಬುರ್ಗಿಯಲ್ಲಿ ನಡೆದ ಘಟನೆಯಲ್ಲಿ ಏಳು ಜನ ಮೃತ ಪಟ್ಟಿದ್ದಾರೆ ಈ ಪೈಕಿ ಇಬ್ಬರು ಮಕ್ಕಳು ಸೇರಿದ್ದಾರೆ  ಎಂದು ವಿವರಿಸಿದರು.

Written by - Zee Kannada News Desk | Last Updated : Jun 3, 2022, 12:14 PM IST
  • ಗೋವಾದಿಂದ ಹೈದರಾಬಾದ್ ಗೆ ಒಂದೇ ಕುಟುಂಬದ ಒಟ್ಟು 35 ಜನ ಪ್ರಯಾಣ ಮಾಡುತ್ತಿದ್ದರು.
  • ಟೆಂಪೋ ಟ್ರಾವೆಲರ್ ಮುಂದೆ ಬಂದಾಗ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು‌ ಹೋಗಿ ಘಟನೆ
  • ಅಪಘಾತದಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡುವ ವಿಚಾರವಾಗಿ ಈ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದ ಸಾರಿಗೆ ಸಚಿವರು
ಕಲಬುರಗಿಯಲ್ಲಿ ಬಸ್ ಅಪಘಾತ: ಮೃತರಿಗೆ ಪರಿಹಾರದ ಬಗ್ಗೆ ಸಿಎಂ ಜೊತೆ ಚರ್ಚೆ- ಶ್ರೀರಾಮುಲು  title=
Kalburgi bus accident

ಬೆಂಗಳೂರು: ಗೋವಾದಿಂದ  ಹೈದರಾಬಾದ್ ತೆರಳುತ್ತಿದ್ದ  ಬಸ್ ಕಲಬುರಗಿಯಲ್ಲಿ ಬೆಂಕಿಗಾಹುತಿ ಆದ ಘಟನೆಯಲ್ಲಿ ಏಳು ಮಂದಿ ಮೃತಪಟ್ಟಿದ್ದು ಈ ಹಿನ್ನೆಲೆಯಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಮಾತನಾಡುತ್ತೇನೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು. 

ವಿಧಾನಸೌಧದಲ್ಲಿ ಶುಕ್ರವಾರ ಮಾತನಾಡಿದ ಸಾರಿಗೆ ಸಚಿವ ಶ್ರೀರಾಮುಲು  ಅವರು, ಬೆಳಗ್ಗೆ 6.30 ಕ್ಕೆ  ಗೋವಾದಿಂದ ಹೈದರಾಬಾದ್ ತೆರಳುತ್ತಿದ್ದ ಬಸ್ ಅಪಘಾತಕ್ಕೀಡಾಗಿ  ಬೆಂಕಿಗಾಹುತಿ ಆಗಿದೆ. ಕಲಬುರ್ಗಿಯಲ್ಲಿ ನಡೆದ ಘಟನೆಯಲ್ಲಿ ಏಳು ಜನ ಮೃತ ಪಟ್ಟಿದ್ದಾರೆ ಈ ಪೈಕಿ ಇಬ್ಬರು ಮಕ್ಕಳು ಸೇರಿದ್ದಾರೆ  ಎಂದು ವಿವರಿಸಿದರು.

ಇದನ್ನೂ ಓದಿ- Bus Fire : ಭೀಕರ ಬಸ್ ದುರಂತ : 8 ರಿಂದ 9 ಜನ ಸಜೀವ ದಹನ ಶಂಕೆ

ಗೋವಾದಿಂದ ಹೈದರಾಬಾದ್ ಗೆ   ಒಂದೇ ಕುಟುಂಬದ ಒಟ್ಟು 35 ಜನ ಪ್ರಯಾಣ ಮಾಡುತ್ತಿದ್ದರು. ಟೆಂಪೋ ಟ್ರಾವೆಲರ್ ಮುಂದೆ ಬಂದಾಗ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು‌ ಹೋಗಿ ಈ‌ ಘಟನೆ ಆಗಿದೆ ಎಂದು ತಿಳಿಸಿದರು.

ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ  ಅಧಿಕಾರಿಗಳನ್ನು ಕಳಿಸಿ ಕೊಟ್ಟಿದ್ದೇನೆ ತನಿಖೆ ನಡೆಯುತ್ತಿದೆ. ಸದ್ಯ ಪ್ರಾಥಮಿಕ ವರದಿ ಬಂದಿದೆ, ತನಿಖೆ ಪೂರ್ಣ ಆದ ಬಳಿಕ ಮಾಹಿತಿ ಸಿಗುತ್ತದೆ ಎಂದರು.

ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ . ಅಪಘಾತದಲ್ಲಿ ಮೃತಪಟ್ಟವರಿಗೆ 
ಪರಿಹಾರ ನೀಡುವ ವಿಚಾರವಾಗಿ ಈ  ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ- ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎಸ್. ರಕ್ಷಾ ರಾಮಯ್ಯ ನೇಮಕ

ಪಾವಗಡ ಅಪಘಾತ ಸಂದರ್ಭದಲ್ಲಿ ರೋಡ್ ಸೇಫ್ಟಿ ಅನುದಾನ ಬಳಕೆ ಮಾಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿತ್ತು. ಆ ಕೆಲಸಗಳು ನಡೆಯುತ್ತಿವೆ ಎಂದ ಅವರು ಇದೇ ಸಂದರ್ಭದಲ್ಲಿ ಖಾಸಗಿ ವಾಹನಗಳು ನಿಯಮ ಮೀರಿ ನಡೆದುಕೊಂಡರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News