Varaha Roopam song : ‘ವರಾಹ ರೂಪಂ’ ಹಾಡನ್ನು ಯೂಟ್ಯೂಬ್ ಸೇರಿದಂತೆ ಯಾವುದೇ ಪ್ಲಾಟ್ಫಾರ್ಮ್ಗಳಲ್ಲಿ ಒಪ್ಪಿಗೆ ಇಲ್ಲದೆ ಬಳಸಬಾರದು ಎಂದು ಕೇರಳದ ಕೋರ್ಟ್ ಆದೇಶ ಹೊರಡಿಸಿತ್ತು. ಇದಕ್ಕೆ ತಲೆ ಬಾಗಿದ್ದ ಚಿತ್ರತಂಡವು, 'ವರಾಹ ರೂಪಂ' ಹಾಡನ್ನು ಚಿತ್ರಮಂದಿರ, ಯೂಟ್ಯೂಬ್ನ ಹೊಂಬಾಳೆ ಫಿಲಂಸ್ನ ಚಾನಲ್, ಮ್ಯೂಸಿಕ್ ಆ್ಯಪ್ಗಳಾದ ಸಾವನ್ ಮುಂತಾದ ಕಡೆಗಳಿಂದ ಹಾಡನ್ನು ಡಿಲೀಟ್ ಮಾಡಿತ್ತು.
ಕಾಪಿರೈಟ್ ಕೇಸ್ ಎದುರಿಸುತ್ತಿದ್ದ ಕಾಂತಾರ ಚಿತ್ರತಂಡಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. ವರಾಹ ರೂಪಂ ಹಾಡನ್ನು ಪ್ರಸಾರ ಮಾಡದಂತೆ ನೀಡಿದ್ದ ಅದೇಶವನ್ನು ನ್ಯಾಯಾಲಯ ರದ್ದುಗೊಳಿಸಿದೆ. ಇದರಿಂದ ಹೊಂಬಾಳೆ ಫಿಲಂಸ್ಗೆ ಗೆಲುವು ಲಭಿಸಿದಂತಾಗಿದೆ.
ಕಾಪಿರೈಟ್ ವಿವಾದ ಬೆನ್ನಲ್ಲೆ ಕಾಂತಾರ ಚಿತ್ರತಂಡ ನ್ಯಾಯಾಲಯದ ಆದೇಶದ ಮೇರೆಗೆ ಯೂಟ್ಯೂಬ್ ಮತ್ತು ಮ್ಯೂಸಿಕ್ ಆಪ್ಗಳಿಂದ ವರಾಹ ರೂಪಂ ಹಾಡನ್ನು ಡಿಲೀಟ್ ಮಾಡಿದೆ. ತೈಕ್ಕುಡಂ ಬ್ರಿಡ್ಜ್ ತಮ್ಮ ʼನವರಸಂʼ ಹಾಡಿನ ಟ್ಯೂನ್ನನ್ನು ಕಾಂತಾರ ಚಿತ್ರತಂಡ ʼವರಾಹ ರೂಪಂʼಗೆ ಬಳಕೆ ಮಾಡಿದೆ ಎಂದು ನ್ಯಾಯಾಲಯದ ಮೇಟ್ಟಿಲೇರಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.