ಪುಸ್ತಕ ಓದಿ ಟೆಲಿಸ್ಕೋಪ್ ತಯಾರಿಸಿದ ಯುವಕ- ನಿತ್ಯ ಗ್ರಹ, ನಕ್ಷತ್ರ ದರ್ಶನ

ಚಾಮರಾಜನಗರದ ಡಿಪ್ಲೊಮ ಪದವೀಧರ ಭರತ್(29 ವರ್ಷ)  ಎಂಬವರು ದುಬಾರಿ ಟೆಲಿಸ್ಕೋಪ್ ಕೊಳ್ಳಲು ಆರ್ಥಿಕ ಶಕ್ತಿ ಇಲ್ಲದ ಕಾರಣ ಸ್ವತಃ ದೂರದರ್ಶಕ  ತಯಾರು ಮಾಡಿದ್ದು ನಿತ್ಯ ಖಗೋಲ ವೀಕ್ಷಣೆ ಮಾಡುವ ಮೂಲಕ ತಮ್ಮ ವಿಜ್ಞಾನಾಸಕ್ತಿಯನ್ನು ತಣಿಸಿಕೊಳ್ಳುತ್ತಿದ್ದಾರೆ.

Written by - Yashaswini V | Last Updated : Jun 29, 2023, 11:27 AM IST
  • ಕೋವಿಡ್ ಎರಡನೇ ಅಲೆಯ ಸಮಯವನ್ನು ಭರತ್ ಸದುಪಯೋಗ ಮಾಡಿಕೊಂಡಿದ್ದಾರೆ.
  • ತಾಳ್ಮೆ, ಪರಿಶ್ರಮದ ಮೂಲಕ ಈ ಟೆಲಿಸ್ಕೋಪ್ ತಯಾರಿಸಿರುವ ಯುವಕ ಭರತ್
  • ದೂರದರ್ಶನದ ಪ್ರಮುಖ ಭಾಗವಾದ ಪ್ರೈಮರಿ ಮಿರರ್ ಗಾಜಿನ್ನು ಉಜ್ಜಿ ತಯಾರು ಮಾಡಬೇಕಿದ್ದು ಪರಿಣತರು ಮಾಡುವ ಕೆಲಸವನ್ನು ಭರತ್ ಶ್ರದ್ಧೆ ವಹಿಸಿ ತಾವೇ ಮಾಡಿದ್ದಾರೆ.
ಪುಸ್ತಕ ಓದಿ ಟೆಲಿಸ್ಕೋಪ್ ತಯಾರಿಸಿದ ಯುವಕ- ನಿತ್ಯ ಗ್ರಹ, ನಕ್ಷತ್ರ ದರ್ಶನ title=
Telescope With the help of Books

ಚಾಮರಾಜನಗರ: ಅತೀವ ಆಸಕ್ತಿ, ಶ್ರದ್ಧೆ ಇದ್ದರೇ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈ ಖಗೋಳ ಪ್ರೇಮಿ ಯುವಕನೇ ನಿದರ್ಶನ. ಪುಸ್ತಕ ಸಹಾಯದಿಂದ ಸ್ವತಃ ಟೆಲಿಸ್ಕೋಪ್ ನ್ನು ತಯಾರಿಸಿ ಖಗೋಳ ವೀಕ್ಷಣೆ ಮಾಡುತ್ತಿದ್ದಾರೆ.

ಹೌದು..., ಚಾಮರಾಜನಗರದ ಡಿಪ್ಲೊಮ ಪದವೀಧರ ಭರತ್(29 ವರ್ಷ)  ಎಂಬವರು ದುಬಾರಿ ಟೆಲಿಸ್ಕೋಪ್ ಕೊಳ್ಳಲು ಆರ್ಥಿಕ ಶಕ್ತಿ ಇಲ್ಲದ ಕಾರಣ ಸ್ವತಃ ದೂರದರ್ಶಕ  ತಯಾರು ಮಾಡಿದ್ದು ನಿತ್ಯ ಖಗೋಲ ವೀಕ್ಷಣೆ ಮಾಡುವ ಮೂಲಕ ತಮ್ಮ ವಿಜ್ಞಾನಾಸಕ್ತಿಯನ್ನು ತಣಿಸಿಕೊಳ್ಳುತ್ತಿದ್ದಾರೆ.

ವಿಜ್ಞಾನಿ ಪಿ.ಎನ್‌.ಶಂಕರ್ ಬರೆದಿರುವ " ಹೌ ಟು ಬಿಲ್ಡ್ ಟೆಲಿಸ್ಕೋಪ್ " ಎಂಬ ಪುಸ್ತಕ ಓದಿಕೊಂಡು ಜೊತೆಗೆ ಫೋನ್ ಕರೆಗಳ ಮೂಲಕ ಹಲವರಿಂದ ಸಲಹೆ ಪಡೆದು ಮೊದಲ ಪ್ರಯತ್ನದಲ್ಲೇ ಟೆಲಿಸ್ಕೋಪ್ ತಯಾರಿಸಿದ್ದಾರೆ. ಇವರು ತಯಾರಿಸುವ ಟೆಲಿಸ್ಕೋಪ್ 8 ಇಂಚು ವ್ಯಾಸದ ನಿಮ್ನ ದರ್ಪಣ ಹೊಂದಿದ್ದು 8.1 ಪೋಕಲ್ ಅನುಪಾತದ 1660 ಮಿ.ಮೀ. ಪೋಕಲ್ ಲೆಂತ್ ಹೊಂದಿದ್ದು ಇಷ್ಟು ದೊಡ್ಡ ದೂರದರ್ಶಕವನ್ನು ಖರೀದಿ ಮಾಡಲು 70-80 ಸಾವಿರ ಬೇಕಾಗಲಿದೆ. ಆದರೆ, ಸ್ವತಃ ಭರತ್ ಅವರೇ ಟೆಲಿಸ್ಕೋಪ್ ಕಿಟ್ ಸಹಾಯದಿಂದ ಸ್ಥಳೀಯವಾಗಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಅಂದಾಜು 20 ಸಾವಿರ ರೂ. ಖರ್ಚು ಮಾಡಿ ದೂರದರ್ಶಕ ತಯಾರಿ ಮಾಡಿದ್ದಾರೆ. 

ಇದನ್ನೂ ಓದಿ- Chandrayaan-3 ಉಡಾವಣೆಗೆ ಮುಹೂರ್ತ ಫಿಕ್ಸ್

ಭರತ್ ತಯಾರಿಸಿರುವ ಟೆಲಿಸ್ಕೋಪ್ ಹೇಗೆ ಪ್ರಯೋಜನಕಾರಿ ಆಗಿದೆ? 
ಟೆಲಿಸ್ಕೋಪ್ ಮೂಲಕ ಸೌರಮಂಡಲದ ಎಲ್ಲಾ ಗ್ರಹಗಳು, ಉಪ ಗ್ರಹಗಳು, ಚಂದ್ರ ಗ್ರಹಣಗಳನ್ನು ಭರತ್ ಕಣ್ತುಂಬಿಕೊಂಡಿದ್ದಾರೆ. ಜೊತೆಗೆ,  ಅಕ್ಕಪಕ್ಕದ ಮನೆಗಳ ಮಕ್ಕಳಿಗೆ, ತಮ್ಮ ಮನೆಯವರಿಗೂ ಗ್ರಹಗಳ ದರ್ಶನ ಮಾಡಿಸಿದ್ದಾರೆ.

ಸೌರಮಂಡಲದ ಅತಿ ದೊಡ್ಡ ಗ್ರಹ ಗುರು, ಶನಿ ಗ್ರಹದ ಸುತ್ತಲಿನ ಉಂಗುರ, ನಕ್ಷತ್ರ ಪುಂಜಗಳು, ಚಂದ್ರ ಹೀಗೆ ಖಗೋಲದ ವೀಕ್ಷಣೆಗೆ ಭರತ್ ಅವರ ಮನೆಯೇ ಪ್ರಯೋಗಾಲಯವಾಗಿದೆ. 8 ನೇ ತರಗತಿಯಲ್ಲಿ ಅಬ್ದುಲ್ ಕಲಾಂ ಅವರು ಸುತ್ತೂರಿಗೆ ಭೇಟಿ ನೀಡಿದ್ದ ವೇಳೆ ಸಣ್ಣದೊಂದು ಟೆಲಿಸ್ಕೋಪ್ ತಯಾರಿಸಿ ಪ್ರದರ್ಶನವನ್ನು ಮಾಡಿದ್ದರು ಭರತ್. 

50 ತಾಸು ತೆಗೆದುಕೊಂಡಿರುವ ಭರತ್: 
ಕೋವಿಡ್ ಎರಡನೇ ಅಲೆಯ ಸಮಯವನ್ನು ಭರತ್ ಸದುಪಯೋಗ ಮಾಡಿಕೊಂಡಿದ್ದು ತಾಳ್ಮೆ, ಪರಿಶ್ರಮದ ಮೂಲಕ ಈ ಟೆಲಿಸ್ಕೋಪ್ ತಯಾರಿಸಿದ್ದಾರೆ.  ದೂರದರ್ಶನದ ಪ್ರಮುಖ ಭಾಗವಾದ ಪ್ರೈಮರಿ ಮಿರರ್ ಗಾಜಿನ್ನು ಉಜ್ಜಿ ತಯಾರು ಮಾಡಬೇಕಿದ್ದು ಪರಿಣತರು ಮಾಡುವ ಕೆಲಸವನ್ನು ಭರತ್ ಶ್ರದ್ಧೆ ವಹಿಸಿ ತಾವೇ ಮಾಡಿದ್ದಾರೆ. 

ಇದನ್ನೂ ಓದಿ- ಆಗಸದಲ್ಲಿನ ಅಪಾಯಗಳು: ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆಯುವುದು ಯಾಕೆ ಗಂಭೀರ ತೊಂದರೆ?

ಹೌ ಟು ಬಿಲ್ಡ್ ಟೆಲಿಸ್ಕೋಪ್ ಎಂಬ ಪುಸ್ತಕ ಓದಿಕೊಂಡು ಅಮೆಚೂರ್ ಟೆಲಿಸ್ಕೋಪ್ ಮೇಕರ್ಸ್ ಎಂಬ ಫೇಸ್ ಬುಕ್ ಪೇಜಿನ ಕೆಲ ಪರಿಣತರ ಸಲಹೆ ಪಡೆದು ದೂರವಾಣಿ ಮೂಲಕ ಮಾರ್ಗದರ್ಶನ ಪಡೆದು  ಈ ದೂರದರ್ಶಕ ರೆಡಿ ಮಾಡಿದ್ದೇನೆ, ಮೊದಲ ಪ್ರಯತ್ನದಲ್ಲೇ ಟೆಲಿಸ್ಕೋಪ್ ಪೂರ್ಣಪ್ರಮಾಣದಲ್ಲಿ ಸಮರ್ಪಕವಾಗಿ ಬಂದಿದ್ದು ಖುಷಿ ತಂದಿದೆ ಎಂದು ಸಂತಸ ಹಂಚಿಕೊಳ್ಳುತ್ತಾರೆ ಭರತ್.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News