ನವದೆಹಲಿ : ಜನಪ್ರಿಯ ಆನ್‌ಲೈನ್ ಶಾಪಿಂಗ್ ಸೈಟ್ Amazonನಲ್ಲಿ ವಿಶೇಷ iQOO ರಿಪಬ್ಲಿಕ್ ಡೇ ಸೇಲ್ (iQOO Republic Day Sale) ನಡೆಯುತ್ತಿದೆ. ಈ ಸೇಲ್ ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಸೇಲ್ ನಲ್ಲಿ ರಿಯಾಯಿತಿ ಸಿಗಲಿರುವ iQOOನ ಉತ್ತಮ ಸ್ಮಾರ್ಟ್‌ಫೋನ್‌ಗಳ ಕುರಿತ ಮಾಹಿತಿ ಇಲ್ಲಿದೆ.
23 ಸಾವಿರದ 5ಜಿ ಫೋನ್ ಕೇವಲ 3,500 ರೂ.ಗೆ ಲಭ್ಯ :
iQOO Z3 5G ಫೋನ್ ನ ಮಾರುಕಟ್ಟೆ ಬೆಲೆ 22,979 ರೂ. ಆದರೆ ಈ ಸೇಲ್ ನಲ್ಲಿ ಈ ಸ್ಮಾರ್ಟ್‌ಫೋನ್ (Smartphone) 13% ರಿಯಾಯಿತಿಯ ಬೆಲೆಯಲ್ಲಿ ಲಭ್ಯವಾಗಲಿದೆ. 13% ರಿಯಾಯಿತಿ ಎಂದರೆ 19,999 ರೂ. ಗೆ ಈ ಫೋನ್ ಸಿಗಲಿದೆ. ಈ ಸ್ಮಾರ್ಟ್‌ಫೋನ್ ಖರೀದಿಸುವಾಗ OneCard ಕ್ರೆಡಿಟ್ ಕಾರ್ಡ್ ಬಳಸಿದರೆ, 5% ತ್ವರಿತ ರಿಯಾಯಿತಿ ಅಂದರೆ 1500 ರೂ. ವರೆಗೆ ರಿಯಾಯಿತಿ ಸಿಗಲಿದೆ. ಇನ್ನು ವಿನಿಮಯ ಕೊಡುಗೆಯೊಂದಿಗೆ (exchange offer) 14,950 ರೂ. ವರೆಗೆ ಉಳಿಸಬಹುದು. ಈ ಎರಡೂ ಆಫರ್‌ಗಳ ಸಂಪೂರ್ಣ ಪ್ರಯೋಜನವನ್ನು ಪಡೆಯುವುದು ಸಾಧ್ಯವಾದರೆ ಈ ಸ್ಮಾರ್ಟ್‌ಫೋನ್ ಅನ್ನು 22,979 ರೂ. ಬದಲಿಗೆ ಕೇವಲ 3,540 ರೂಗಳಲ್ಲಿ ಖರೀದಿಸಬಹುದು.
ಇದನ್ನೂ ಓದಿ : ಮಾರುಕಟ್ಟೆಗೆ ಬಂದಿರುವ ಈ ತಂತ್ರಜ್ಞಾನದಿಂದ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ವೆಚ್ಚ ಅರ್ಧದಷ್ಟು ಇಳಿಯಲಿದೆ
ಈ 5G ಸ್ಮಾರ್ಟ್‌ಫೋನ್ ಮೇಲೆ 26 ಸಾವಿರ ರೂಪಾಯಿಗಳ ರಿಯಾಯಿತಿ :
iQOO Z5 5G ಖರೀದಿಸಿದರೆ, ನೀವು ಒಟ್ಟು 26 ಸಾವಿರ ರೂಪಾಯಿಗಳನ್ನು ಉಳಿಸಬಹುದು. 29,966 ರೂ. ಬೆಲೆಯ ಈ ಸ್ಮಾರ್ಟ್‌ಫೋನ್ ಮೇಲೆ ಅಮೆಜಾನ್ ನಲ್ಲಿ (Amazon sale) 5,976ರೂ. ರಿಯಾಯಿತಿಯ ಸಿಗುತ್ತಿದೆ. ಈ ಡೀಲ್ ನಲ್ಲಿ ಎರಡು ಸಾವಿರ ರೂಪಾಯಿಗಳ ಕೂಪನ್ ರಿಯಾಯಿತಿ ಕೂಡಾ ಸಿಗಲಿದೆ. ಇನ್ನು OneCard ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ, 1500 ರೂ.ವರೆಗೆ ತ್ವರಿತ ರಿಯಾಯಿತಿಯನ್ನು ಪಡೆಯುಬಹುದು. ಇನ್ನು ವಿನಿಮಯ ಕೊಡುಗೆಯೊಂದಿಗೆ 17,450 ರೂ. ವರೆಗೆ ಉಳಿಸಬಹುದು. ಈ ಎರಡೂ ಆಫರ್‌ಗಳ ಸಂಪೂರ್ಣ ಪ್ರಯೋಜನವನ್ನು ಸಿಕ್ಕಿದರೆ ಈ ಡೀಲ್‌ನಲ್ಲಿ 26,016 ರೂಪಾಯಿಗಳ ರಿಯಾಯಿತಿಯನ್ನು ಪಡೆಯುವುದು ಸಾಧ್ಯವಾಗುತ್ತದೆ. ಹಾಗಾದರೆ ಈ ಫೋನ್ ಬೆಲೆ 3,950 ರೂಪಾಯಿ ಆದಂತಾಗುತ್ತದೆ.
iQOO 7 5G ನಲ್ಲಿಯೂ ಸಿಗಲಿದೆ ರಿಯಾಯಿತಿ :
iQOO 7 5G ಅನ್ನು 34,989 ರೂ. ಗೆ ಮಾರಾಟ ಮಾಡಲಾಗುತ್ತದೆ. ಆದರೆ ಈ ಸೇಲ್ ನಲ್ಲಿ ಈ ಫೋನ್ ಅನ್ನು 29,990 ರೂ.ಗೆ ಖರೀದಿಸಬಹುದು. ಹಳೆಯ ಸ್ಮಾರ್ಟ್‌ಫೋನ್ ಅನ್ನು ಕೊಟ್ಟು ಹೊಸ ಫೋನ್ ಖರೀದಿಸಲು ಬಯಸಿದರೆ, ಈ ಫೋನ್ ಮೇಲೆ 19,950 ರೂ.ವರೆಗೆ ರಿಯಾಯಿತಿ ಸಿಗಲಿದೆ. ಅಂದರೆ ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನ ಸಿಕ್ಕಿದರೆ, ಫೋನ್ ಬೆಲೆ 10,040 ರೂ ಆದಂತಾಗುತ್ತದೆ. ಈ ಫೋನ್ ಅನ್ನು EMI ನಲ್ಲಿಯೂ ಖರೀದಿಸಬಹುದು.
ಇದನ್ನೂ ಓದಿ : ABS System: ಅಪಘಾತ ಸಂಭವಿಸಿದಾಗ ಪ್ರಾಣ ಉಳಿಸುತ್ತೆ ABS, ಏನಿದು ABS?
ಇದು ರಿಪಬ್ಲಿಕ್ ಡೇ ಸೇಲ್ (republic day sale) ಆಗಿರುವುದರಿಂದ ಸೀಮಿತ ಅವಧಿಗೆ ಮಾತ್ರ ಲೈವ್ ಆಗಿರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.