Massive Asteroids Nearing Earth: ಭೂಮಿಯತ್ತ ಧಾವಿಸುತ್ತಿವೆ 'ಬಾಹ್ಯಾಕಾಶದ ಬೆಟ್ಟಗಳು', ಕ್ಷುದ್ರಗ್ರಹಗಳ ಈ ಸುರಿಮಳೆ ವಿನಾಶಕಾರಿಯೇ?

Massive Asteroids Nearing Earth: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ಭೂಮಿಯ ಸಮೀಪವಿರುವ ಕ್ಷುದ್ರಗ್ರಹಗಳ (Asteroids)ಮೇಲೆ ನಿರಂತರವಾಗಿ ತನ್ನ ಗಮನ ಕೇಂದ್ರೀಕರಿಸಿದೆ. ಮುಂದಿನ ದಿನಗಳಲ್ಲಿ, ಈ ಕ್ಷುದ್ರಗ್ರಹಗಳು ಭೂಮಿಗೆ (Earth) ಅತ್ಯಂತ ಸಮೀಪದಲ್ಲಿ ಹಾದು ಹೋಗಲಿವೆ. 

Written by - Nitin Tabib | Last Updated : Oct 19, 2021, 09:23 PM IST
  • ಇದಕ್ಕೂ ಮೊದಲು ಕ್ಷುದ್ರಗ್ರಹ 2021 SM3 ಭೂಮಿಗೆ ಅತ್ಯಂತ ಸಮೀಪದಲ್ಲಿ ಹಾದುಹೋಗಿತ್ತು.
  • ಈ ಕ್ಷುದ್ರಗ್ರಹವನ್ನು ಸೆಪ್ಟೆಂಬರ್‌ನಲ್ಲಿ ಕಂಡುಹಿಡಿಯಲಾಗಿತ್ತು.
  • ದೈತ್ಯ ಕ್ಷುದ್ರಗ್ರಹದ ವ್ಯಾಸವು 525 ಅಡಿಗಳಷ್ಟಾಗಿತ್ತು.
Massive Asteroids Nearing Earth: ಭೂಮಿಯತ್ತ ಧಾವಿಸುತ್ತಿವೆ 'ಬಾಹ್ಯಾಕಾಶದ ಬೆಟ್ಟಗಳು', ಕ್ಷುದ್ರಗ್ರಹಗಳ ಈ ಸುರಿಮಳೆ ವಿನಾಶಕಾರಿಯೇ? title=
Massive Asteroids Nearing Earth (Representational Image)

ವಾಷಿಂಗ್ಟನ್:  Massive Asteroids Nearing Earth - ಬಾಹ್ಯಾಕಾಶದಲ್ಲಿ ಹಲವು ದೈತ್ಯ ಕ್ಷುದ್ರಗ್ರಹಗಳು ನಿರಂತರವಾಗಿ ಭೂಮಿಯ ಕಡೆಗೆ ಚಲಿಸುತ್ತಿವೆ. ಮುಂಬರುವ ಕೆಲವು ದಿನಗಳಲ್ಲಿ, ಅವು ಭೂಮಿಗೆ ಅತ್ಯಂತ ಹತ್ತಿರದಿಂದ ಹಾದುಹೊಗಳಿವೆ. ಅವುಗಳಲ್ಲಿ ಕೆಲವು ಗಾತ್ರದಲ್ಲಿ ಪಿರಮಿಡ್‌ಗಿಂತ ದೊಡ್ಡದಾಗಿವೆ. 

ಇದಕ್ಕೂ ಮೊದಲು  2021 SM3 ಕ್ಷುದ್ರಗ್ರಹ ಭೂಮಿಗೆ ಅತ್ಯಂತ ಸಮೀಪದಲ್ಲಿ ಹಾದುಹೋಗಿತ್ತು, ಅದರ ಬಗ್ಗೆ ನಾಸಾ ಮಾಹಿತಿ ನೀಡಿತ್ತು. ಈ ಕ್ಷುದ್ರಗ್ರಹವನ್ನು ಸೆಪ್ಟೆಂಬರ್‌ನಲ್ಲಿ ಕಂಡುಹಿಡಿಯಲಾಗಿತ್ತೂ. ದೈತ್ಯ ಕ್ಷುದ್ರಗ್ರಹದ ವ್ಯಾಸವು 525 ಅಡಿಗಳಾಗಿತ್ತು. 

ಭೂಮಿಯ ಸಮೀಪದಿಂದ ಹಾದುಹೋಗಿತ್ತು ಈ ಅಸ್ಟ್ರಾಯಿಡ್ 
2021 SM3 ಅನ್ನು ನಿಯರ್ ಅರ್ಥ ಆಬ್ಜೆಕ್ಟ (Near Earth Objects) ರೂಪದಲ್ಲಿ ಪತ್ತೆಹಚ್ಚಲಾಗಿತ್ತು. ನಾಸಾ ಹೇಳುವ ಪ್ರಕಾರ ಈ ಕ್ಷುದ್ರಗ್ರಹ ಭೂಮಿಗೆ 3.6 ಮಿಲಿಯನ್ ಮೈಲು ದೂರದಿಂದ ಹಾದುಹೋಗಿತ್ತು. ಆದರೆ, ಇಷ್ಟೊಂದು ದೂರವಿರುವ ಕಾರಣ ಅದರಿಂದ ಭೂಮಿಗೆ ಯಾವುದೇ ರೀತಿಯ ಹಾನಿಯಾಗಿರಲಿಲ್ಲ. ಈ ಅಸ್ಟ್ರಾಯಿಡ್ ಭೂಮಿ (Earth) ಮತ್ತು ಶುಕ್ರಗ್ರಹದ ನಡುವಿನ ಅಂತರಕ್ಕಿಂತ ಕಡಿಮೆ ಅಂತರದಲ್ಲಿತ್ತು. ಶುಕ್ರ ಗ್ರಹ ಭೂಮಿಯನಿಯ 25 ಮಿಲಿಯನ್ ಮೈಲು ದೂರದಲ್ಲಿದೆ. 

ವಿಜ್ಞಾನಿಗಳ ಪ್ರಕಾರ, 2021 ಎಸ್‌ಎಂ 3 ಭೂಮಿಗೆ ಹತ್ತಿರವಾಗಿ ಹಾದುಹೋಗುವ ಏಕೈಕ ಬೃಹತ್ ಕ್ಷುದ್ರಗ್ರಹವಾಗಿಲ್ಲ. 

ಅಪಾಯದ ಮೇಲೆ ನಾಸಾ ಕಣ್ಣು
ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ ಭೂಮಿಯ ಸಮೀಪವಿರುವ ಕ್ಷುದ್ರಗ್ರಹಗಳ ಮೇಲೆ ನಿರಂತರವಾಗಿ ಕಣ್ಣಿಟ್ಟಿದೆ. ಕ್ಷುದ್ರಗ್ರಹಗಳಿಗೆ ಸಂಬಂಧಿಸಿದ ಅಪಾಯವನ್ನು ತಪ್ಪಿಸಲು, ಯುಎಸ್ ಬಾಹ್ಯಾಕಾಶ ಸಂಸ್ಥೆ 'ಡಾರ್ಟ್ ಮಿಷನ್' ಅನ್ನು ಆರಂಭಿಸಲಿದೆ. 

ಇದನ್ನೂ ಓದಿ-Moon Latest News: ಭೂವಿಯಿಂದ ಮುನಿಸಿಕೊಳ್ಳುತ್ತಿದ್ದಾನೆಯೇ ಚಂದಿರ? ಹೌದು ಎನ್ನುತ್ತೆ ಈ ವರದಿ

ಎಲ್ಲಕ್ಕಿಂತ ಹತ್ತಿರದಲ್ಲಿದೆ ಈ ಕ್ಷುದ್ರಗ್ರಹ
MM3 ಗಿಂತ ಗಾತ್ರದಲ್ಲಿ ದೊಡ್ಡದಾದ ಏಳು ಕ್ಷುದ್ರಗ್ರಹಗಳು ನವೆಂಬರ್ ಅಂತ್ಯದ ವೇಳೆಗೆ ಭೂಮಿಯ ಹತ್ತಿರ ಹಾದು ಹೋಗಲಿವೆ. ಇವುಗಳಲ್ಲಿ ಅತ್ಯಂತ ಹತ್ತಿರವಾದದ್ದು 1996 ವಿಬಿ 3, ಇದು ಅಕ್ಟೋಬರ್ 20 ರಂದು ಭೂಮಿಯಿಂದ 2.1 ಮಿಲಿಯನ್ ಮೈಲಿಗಳಷ್ಟು ದೂರದಿಂದ ಹಾದುಹೋಗಲಿದೆ. 1996 VB3 ಕ್ಷುದ್ರಗ್ರಹದ ವ್ಯಾಸವು ಸುಮಾರು 754 ಅಡಿಗಳಾಗಿದೆ. 

ಇದನ್ನೂ ಓದಿ-Monday Remedies: ಜಾತಕದಲ್ಲಿ ಅಶುಭ ಚಂದ್ರ ಒತ್ತಡ ಹಾಗೂ ಕಾಯಿಲೆಯ ಕಾರಕ, ಸೋಮವಾರ ಈ ಉಪಾಯಗಳನ್ನು ಅನುಸರಿಸಿ

ಇದೇ ವೇಳೆ ಭೂಮಿಯ ಕಡೆಗೆ ಚಲಿಸುವ ಕ್ಷುದ್ರಗ್ರಹಗಳಲ್ಲಿ ದೊಡ್ಡದು 2004 UE, ಇದು 1,246 ಅಡಿ ವ್ಯಾಸವನ್ನು ಹೊಂದಿದೆ. ನವೆಂಬರ್ 13 ರಂದು 2004UE ಭೂಮಿಯಿಂದ 2.6 ಮಿಲಿಯನ್ ಮೈಲಿಗಳಷ್ಟು ದೂರದಿಂದ ಹಾದುಹೋಗಲಿದೆ. 

ಇದನ್ನೂ ಓದಿ-Viral Video: ಭೂಮಿಗಪ್ಪಳಿಸಿದ Asteroid, ಬಾಹ್ಯಾಕಾಶ ತಲುಪಿದ ಡೈನೋಸಾರ್ಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News