Heating Device: 180 ರೂಪಾಯಿಯಲ್ಲಿ ಮನೆಗೆ ತನ್ನಿ ಈ ಸಾಧನ! ಚಳಿಗೆ ಹೇಳಿ ಗುಡ್‌ ಬೈ

Cheapest Heating Device: ಮಾರುಕಟ್ಟೆಯಲ್ಲಿ ಹಲವಾರು ಹೀಟಿಂಗ್‌ ಸಾಧನಗಳಿವೆ. ಈ ಸಾಧನಗಳ ಬೆಲೆ ಕೆಲವೊಮ್ಮೆ ತುಂಬಾ ಹೆಚ್ಚಾಗಿರುತ್ತದೆ, ಅಂತಹ ಪರಿಸ್ಥಿತಿಯಲ್ಲಿ, ಈ ಶಕ್ತಿಯುತ ತಾಪನ ಸಾಧನವನ್ನು ನೀವು ಬಳಸಬಹುದು. ಇದು ನಿಜವಾಗಿಯೂ ಸಾಕಷ್ಟು ಪ್ರಯೋಜನಕಾರಿಗಾಗಿದೆ.

Written by - Chetana Devarmani | Last Updated : Nov 25, 2022, 01:04 PM IST
  • ಮಾರುಕಟ್ಟೆಯಲ್ಲಿ ಹಲವಾರು ಹೀಟಿಂಗ್‌ ಸಾಧನಗಳಿವೆ
  • ಈ ಸಾಧನಗಳ ಬೆಲೆ ಕೆಲವೊಮ್ಮೆ ತುಂಬಾ ಹೆಚ್ಚಾಗಿರುತ್ತದೆ
  • 180 ರೂಪಾಯಿಯಲ್ಲಿ ಮನೆಗೆ ತನ್ನಿ ಈ ಸಾಧನ
Heating Device: 180 ರೂಪಾಯಿಯಲ್ಲಿ ಮನೆಗೆ ತನ್ನಿ ಈ  ಸಾಧನ! ಚಳಿಗೆ ಹೇಳಿ ಗುಡ್‌ ಬೈ   title=
ಹೀಟಿಂಗ್‌ ಸಾಧನ

Cheapest Heating Device: ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಟ್ಟುಕೊಳ್ಳಲು ಅನೇಕ ರೀತಿಯ ಪ್ರಯತ್ನಗಳನ್ನು ಮಾಡುತ್ತೇವೆ. ಶ್ವೆಟರ್‌, ಮಫ್ಲರ್‌ ಹಾಕಿಕೊಳ್ಳುವುದು, ಬಿಸಿ ಕಾಯಿಸುವುದನ್ನು ಮಾಡುತ್ತೇವೆ. ಇನ್ನೂ ಕೆಲವು ಬಾರಿ ಬಿಸಿ ಬಿಸಿ ಊಟ, ಕಾಫಿ, ಟೀಗಳ ಮೊರೆ ಹೋಗುತ್ತೇವೆ. ಮೈನಸ್‌ ತಾಪಮಾನ ಇರುವ ಪ್ರದೇಶಗಳಲ್ಲಿ ವಾಸಿಸುವ ಜನರು ಮನೆಯನ್ನು ಬಿಸಿಗೊಳಿಸಲು ಹೀಟಿಂಗ್‌ ಸಾಧನಗಳ ಮೊರೆ ಹೋಗುವುದು ಸಾಮಾನ್ಯ. ಇದೀಗ ಮಾರುಕಟ್ಟೆಯಲ್ಲಿ ಅನೇಕ ಹೀಟಿಂಗ್‌ ಸಾಧನಗಳಿವೆ. ಅವು ಕೆಲವರಿಗೆ ದುಬಾರಿ ಎನಿಸಬಹುದು. ಅದಕ್ಕಾಗಿಯೇ ಇಂದು ನಾವು ನಿಮಗೆ ಕೇವಲ 150 ರೂಪಾಯಿಯಲ್ಲಿ ಸಿಗುವ ಒಂದು ಸಾಧನದ ಬಗ್ಗೆ ಹೇಳಲಿದ್ದೇವೆ. 

ಇದನ್ನೂ ಓದಿ : ಸೂರ್ಯನ ಶಾಖಕ್ಕೆ ಚಾರ್ಜ್ ಆಗುತ್ತದೆ ಈ ಸ್ಪೀಕರ್ .! ಬೆಲೆ ಕೂಡಾ ಭಾರೀ ಕಡಿಮೆ

ಮಾರುಕಟ್ಟೆಯಲ್ಲಿ ಹಲವಾರು ಹೀಟಿಂಗ್‌ ಸಾಧನಗಳಿವೆ. ಈ ಸಾಧನಗಳ ಬೆಲೆ ಕೆಲವೊಮ್ಮೆ ತುಂಬಾ ಹೆಚ್ಚಾಗಿರುತ್ತದೆ, ಅಂತಹ ಪರಿಸ್ಥಿತಿಯಲ್ಲಿ, ಈ ಶಕ್ತಿಯುತ ತಾಪನ ಸಾಧನವನ್ನು ನೀವು ಬಳಸಬಹುದು. ಇದು ನಿಜವಾಗಿಯೂ ಸಾಕಷ್ಟು ಪ್ರಯೋಜನಕಾರಿಗಾಗಿದೆ.

ಈಗ ಜನರು ಚಳಿಗಾಲದ ಪರಿಣಾಮವನ್ನು ಕಡಿಮೆ ಮಾಡಲು ತಾಪನ ಸಾಧನಗಳನ್ನು ಖರೀದಿಸುತ್ತಿದ್ದಾರೆ. ನೀವು ಹೆಚ್ಚು ಹಣವನ್ನು ಖರ್ಚು ಮಾಡಲು ಬಯಸದಿದ್ದರೆ ಮತ್ತು ಬಜೆಟ್‌ನಲ್ಲಿ ಸರಿಯಾದ ತಾಪನ ಸಾಧನವನ್ನು ಖರೀದಿಸಲು ಬಯಸಿದರೆ ಈ ಸಾಧನವನ್ನು ಬಳಸಬಹುದು. ಅದು ಕೂಡ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುತ್ತದೆ. ಈ ಸಾಧನದ ಬೆಲೆ 200 ರೂಪಾಯಿಗಿಂತ ಕಡಿಮೆ ಇದೆ. 

ನಾವು ಮಾತನಾಡುತ್ತಿರುವ ಹೀಟಿಂಗ್ ಸಾಧನ EmmEmm Cordless Electric Heating Liquid Filled Heating Pad Pack. ಇದು ಚಳಿಗಾಲದಲ್ಲಿ ಟ್ರೆಂಡಿಂಗ್ ಉತ್ಪನ್ನವಾಗಿದೆ. ಈ  ಸಾಧನವು ನಿಜವಾಗಿಯೂ ಶಕ್ತಿಯುತವಾಗಿದೆ. ಕೆಲವು ನಿಮಿಷಗಳ ವಿದ್ಯುತ್ ಸಂಪರ್ಕದಿಂದ ಇದು ಕಾರ್ಯನಿರ್ವಹಿಸುತ್ತದೆ. ಈ ಸಾಧನವನ್ನು ಯಾರೂ ಬೇಕಾದರೂ ಸುಮಭವಾಗಿ ಬಳಸಬಹುದು. ನೀವು ಅದನ್ನು ನಿಮ್ಮ ಬ್ಯಾಗ್‌ನಲ್ಲಿಯೂ ಇರಿಸಬಹುದು.

ಇದನ್ನೂ ಓದಿ : Vi ನಿಂದ ಛೋಟು ವೈಫೈ ಬಿಡುಗಡೆ, ಏಕಕಾಲಕ್ಕೆ 10 ಡಿವೈಸ್ ಕನೆಕ್ಟ್ ಮಾಡಬಹುದು

ಈ ದಿಂಬು ವಿಶೇಷ ವಸ್ತುಗಳಿಂದ ಮಾಡಲ್ಪಟ್ಟಿದೆ.ಈ ದಿಂಬಿನೊಳಗೆ ವಿಶೇಷ ರೀತಿಯ ಜೆಲ್ ಇದೆ, ಅದು ಗಂಟೆಗಳವರೆಗೆ ಶಾಖವನ್ನು ಹಿಡಿದಿಟ್ಟುಕೊಳ್ಳುತ್ತದೆ. ಆದ ಕಾರಣ ಒಮ್ಮೆ ವಿದ್ಯುತ್ ಮೂಲಕ್ಕೆ ಸಂಪರ್ಕಗೊಂಡರೆ, ಬಳಕೆದಾರರು ಅದನ್ನು ಗಂಟೆಗಳವರೆಗೆ ಬಳಸಬಹುದು. ಚಿಕ್ಕ ಮಕ್ಕಳ ಬಳಿ ಈ ಸಾಧನವನ್ನು ಇಡುವುದರಿಂದ, ಅವರು ಗಂಟೆಗಳ ಕಾಲ ಶಾಖವನ್ನು ಪಡೆಯುತ್ತಾರೆ. ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುವ ಈ ಸಾಧನವನ್ನು ಕೇವಲ 179 ರೂಗಳಿಗೆ ಖರೀದಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News