Elon Musk: ಟ್ವಿಟರ್ ಬ್ಲೂ ಟಿಕ್ ಸಂಬಂಧಿಸಿದಂತೆ ಎಲೋನ್ ಮಸ್ಕ್ ಮಹತ್ವದ ಘೋಷಣೆ

Elon Musk:ಈಗ ಪ್ರತಿ ತಿಂಗಳು ಟ್ವಿಟರ್ ಬ್ಲೂ ಟಿಕ್‌ಗಾಗಿ ನೀವು 8 ಡಾಲರ್‌ಗಳನ್ನು ಪಾವತಿಸಬೇಕಾಗುತ್ತದೆ. ಅಂದರೆ ಭಾರತೀಯ ಕರೆನ್ಸಿ ಪ್ರಕಾರ, ನೀವು ಪ್ರತಿ ತಿಂಗಳು 660 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

Written by - Yashaswini V | Last Updated : Nov 2, 2022, 10:09 AM IST
  • ಮಂಗಳವಾರ "ಟ್ವಿಟರ್ ಬ್ಲೂ" ನ ಹೊಸ ಆವೃತ್ತಿಯನ್ನು ಘೋಷಿಸಿದ ಎಲೋನ್ ಮಸ್ಕ್
  • ಅದರಲ್ಲಿ ಅವರು ಟ್ವಿಟರ್‌ನ ಚಂದಾದಾರಿಕೆ ಸೇವೆಗಾಗಿ ತಿಂಗಳಿಗೆ $8 ಶುಲ್ಕ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
  • ಟ್ವಿಟರ್‌ನಲ್ಲಿ ಬ್ಲೂ ಟಿಕ್‌ಗೆ $19.99 (ಸುಮಾರು 1,600 ರೂ.) ಶುಲ್ಕ ವಿಧಿಸಲು ಈ ಹಿಂದೆ ಪ್ರಸ್ತಾಪಿಸಲಾಗಿತ್ತು.
Elon Musk: ಟ್ವಿಟರ್ ಬ್ಲೂ ಟಿಕ್ ಸಂಬಂಧಿಸಿದಂತೆ ಎಲೋನ್ ಮಸ್ಕ್ ಮಹತ್ವದ ಘೋಷಣೆ  title=
Twitter blue tick

Elon Musk:ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ಟ್ವಿಟರ್ ಖರೀದಿಯೊಂದಿಗೆ ದೊಡ್ಡ ಘೋಷಣೆ ಮಾಡಿದ್ದು, ಟ್ವಿಟರ್ ಬಳಸುವ ಜನರನ್ನು ಬೆಚ್ಚಿಬೀಳಿಸಿದೆ. ಈಗ ಬಳಕೆದಾರರು ಟ್ವಿಟ್ಟರ್‌ನಲ್ಲಿ 'ಬ್ಲೂ ಟಿಕ್' ಚಂದಾದಾರಿಕೆಗಾಗಿ ಪಾವತಿಸಬೇಕಾಗುತ್ತದೆ.   ಎಲೋನ್ ಮಸ್ಕ್ ಅವರ ಪ್ರಕಟಣೆಯ ಪ್ರಕಾರ, ಟ್ವಿಟರ್‌ನಲ್ಲಿನ 'ಬ್ಲೂ ಟಿಕ್' ವೆಚ್ಚವಾಗಿ ಪ್ರತಿ ತಿಂಗಳು ಎಂಟು ಡಾಲರ್‌ ಅಂದರೆ ಭಾರತೀಯ ಕರೆನ್ಸಿ ಪ್ರಕಾರ ಸುಮಾರು 660 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. 

ಮಂಗಳವಾರ "ಟ್ವಿಟರ್ ಬ್ಲೂ" ನ ಹೊಸ ಆವೃತ್ತಿಯನ್ನು ಘೋಷಿಸಿದ ಎಲೋನ್ ಮಸ್ಕ್, ಅದರಲ್ಲಿ ಅವರು ಟ್ವಿಟರ್‌ನ ಚಂದಾದಾರಿಕೆ ಸೇವೆಗಾಗಿ ತಿಂಗಳಿಗೆ $8 ಶುಲ್ಕ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. 

ಟ್ವಿಟರ್ ಬ್ಲೂ ಟಿಕ್‌ಗಾಗಿ ಪಾವತಿಗೆ ಭಾರೀ ವಿರೋಧ:
ಎಲೋನ್ ಮಸ್ಕ್ ಟ್ವಿಟರ್ ಬ್ಲೂ ಟಿಕ್‌ಗಾಗಿ ಶುಲ್ಕ ಪಾವತಿ ಬಗ್ಗೆ ಘೋಷಿಸಿದ ಬಳಿಕ ಸಮಾಜಿಕ ಮಾಧ್ಯಮದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. 

ಇದನ್ನೂ ಓದಿ- ನೋಕಿಯಾದ 17 ಸಾವಿರ ರೂ.ಗಳ ಸ್ಮಾರ್ಟ್‌ಫೋನ್ ಕೇವಲ 849 ರೂ.ಗೆ ಲಭ್ಯ

ಟ್ವಿಟರ್‌ನಲ್ಲಿ ಬ್ಲೂ ಟಿಕ್‌ಗೆ $19.99 (ಸುಮಾರು 1,600 ರೂ.) ಶುಲ್ಕ ವಿಧಿಸಲು ಈ ಹಿಂದೆ ಪ್ರಸ್ತಾಪಿಸಲಾಗಿತ್ತು. ಇದನ್ನು ಜನರು ತೀವ್ರವಾಗಿ ವಿರೋಧಿಸುತ್ತಿದ್ದರು. ಇದು ಸಂಭವಿಸಿದಲ್ಲಿ ನಾನು ವೇದಿಕೆಯನ್ನು ತೊರೆಯುತ್ತೇನೆ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.

ಇದು ಪ್ರತಿ ತಿಂಗಳು ಕೇವಲ $ 8 ಎಂದ ಎಲಾನ್ ಮಸ್ಕ್ :
ಬಳಕೆದಾರರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಎಲಾನ್ ಮಸ್ಕ್, ಟ್ವಿಟರ್‌ನಲ್ಲಿ ಬ್ಲೂ ಟಿಕ್‌ಗೆ ಎಂಟು ಡಾಲರ್ ವೆಚ್ಚವಾಗುತ್ತದೆ, ಟ್ವಿಟ್ಟರ್ ಸಂಪೂರ್ಣವಾಗಿ ಜಾಹೀರಾತುದಾರರ ಮೇಲೆ ಅವಲಂಬಿತವಾಗುವುದಿಲ್ಲ. ಎಂಟು ಡಾಲರ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಬರೆದಿದ್ದಾರೆ.

ಟ್ವಿಟ್ಟರ್‌ನ ಪಾವತಿಸಿದ ಬ್ಲೂ ಟಿಕ್ Twitter Blue ಸದಸ್ಯರಿಗೆ ಮಾತ್ರ ಇರುತ್ತದೆ, ಇದು ಚಂದಾದಾರಿಕೆ ಆಧಾರಿತ ಸೇವೆಯಾಗಿದೆ. Twitter Blue ಗೆ ಚಂದಾದಾರಿಕೆಯನ್ನು ಪಡೆದ ನಂತರ, ಬಳಕೆದಾರರು ಟ್ವೀಟ್ ಎಡಿಟ್ ಸೇರಿದಂತೆ ಹಲವು ವಿಶೇಷ ವೈಶಿಷ್ಟ್ಯಗಳನ್ನು ಪಡೆಯುತ್ತಾರೆ. ಈಗಾಗಲೇ ಖಾತೆಯನ್ನು ವೆರಿಫೈ ಮಾಡಿರುವವರು 90 ದಿನಗಳಲ್ಲಿ ಟ್ವಿಟರ್ ಬ್ಲೂಗೆ ಚಂದಾದಾರರಾಗಬೇಕು, ಇಲ್ಲದಿದ್ದರೆ ಪ್ರೊಫೈಲ್‌ನಿಂದ ಬ್ಲೂ ಟಿಕ್ ಅನ್ನು ತೆಗೆದುಹಾಕಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ- ಹಳೆಯ ಟಿವಿ ಟಿವಿಯಾಗಲಿದೆ ಸಿನೆಮಾ ಹೌಸ್! ಅತಿ ಕಡಿಮೆ ಬೆಲೆಯಲ್ಲಿ ಖರೀದಿಸಿ ಸೌಂಡ್‌ಬಾರ್

ಜಾಹೀರಾತು ಮಾರಾಟ ಮುಖ್ಯಸ್ಥ ಸಾರಾ ಪರ್ಸ್ನೆಟ್ ರಾಜೀನಾಮೆ:
ಟೆಸ್ಲಾ ಸಿಇಒ ಎಲೋನ್ ಮಸ್ಕ್ US$44 ಶತಕೋಟಿ ಟ್ವಿಟರ್ ಸ್ವಾಧೀನ ಒಪ್ಪಂದವನ್ನು ಪೂರ್ಣಗೊಳಿಸಿದ ಮತ್ತು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನ ನಿಯಂತ್ರಣವನ್ನು ತೆಗೆದುಕೊಂಡ ಕೆಲವೇ ಗಂಟೆಗಳ ನಂತರ ತಾನು ಕೆಳಗಿಳಿದಿದ್ದೇನೆ ಎಂದು ಟ್ವಿಟ್ಟರ್‌ನ ಜಾಹೀರಾತು ಮುಖ್ಯಸ್ಥ ಸಾರಾ ಪರ್ಸ್ನೆಟ್ ಮಂಗಳವಾರ ಹೇಳಿದ್ದಾರೆ.

ಟ್ವಿಟ್ಟರ್‌ನಲ್ಲಿ ಮಾಡಿದ ಟ್ವೀಟ್‌ನಲ್ಲಿ, ಪರ್ಸೋನೆಟ್, "ಹಲೋ ಹುಡುಗರೇ, ನಾನು ಶುಕ್ರವಾರ ಟ್ವಿಟರ್‌ಗೆ ರಾಜೀನಾಮೆ ನೀಡಿದ್ದೇನೆ ಮತ್ತು ಮಂಗಳವಾರ ರಾತ್ರಿ ಕೆಲಸ ಮಾಡುವ ನನ್ನ ಹಕ್ಕನ್ನು ಅಧಿಕೃತವಾಗಿ ಕೊನೆಗೊಳಿಸಲಾಗಿದೆ ಎಂದು ಹಂಚಿಕೊಳ್ಳಲು ಬಯಸುತ್ತೇನೆ" ಎಂದು ಹೇಳಿದರು.

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

 

Trending News