Paytm ಬಳಕೆದಾರರೆ ಎಚ್ಚರ! ಬಳಕೆದಾರರಿಗೆ ಈ ರೀತಿ ಲಕ್ಷಾಂತರ ರೂಪಾಯಿಗಳ ಪಂಗನಾಮ ಹಾಕಲಾಗುತ್ತಿದೆ

Online Payment - ನೀವು Paytm ಬಳಕೆದಾರರಾಗಿದ್ದರೆ ಮತ್ತು ಹಣದ ವಹಿವಾಟುಗಳಿಗಾಗಿ ಅಥವಾ ಶಾಪಿಂಗ್‌ಗಾಗಿ ಅಪ್ಲಿಕೇಶನ್ ಅನ್ನು ವಿವೇಚನೆಯಿಲ್ಲದೆ ಬಳಸುತ್ತಿದ್ದರೆ, ತಕ್ಷಣ ಎಚ್ಚೆತ್ತುಕೊಳ್ಳಿ. ವಂಚಕರ ನೆಕ್ಸ್ಟ್ ಬಲಿಪಶು ನೀವಾಗುವ ಸಾಧ್ಯತೆ ಇದೆ. Paytm ನಲ್ಲಿ ಹೇಗೆ ವಂಚನೆ ನಡೆಸಲಾಗುತ್ತಿದೆ ಮತ್ತು ಹೇಗೆ ಸಾವಿರಾರು-ಲಕ್ಷಾಂತರ ರೂಗಳ ವಂಚನೆಯಾಗುತ್ತಿದೆ, ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.a

Written by - Nitin Tabib | Last Updated : Dec 25, 2021, 04:01 PM IST
  • ನಕಲಿ Paytm ಬಳಸಿ ಲಕ್ಷಾಂತರ ರೂ.ವಂಚನೆ ಎಸಗಲಾಗಿದೆ.
  • ನೀವೂ ಕೂಡ ಆನ್ಲೈನ್ ವಹಿವಾಟಿಗಾಗಿ Paytm ಬಳಸುತ್ತಿದ್ದಾರೆ ತಕ್ಷಣಕ್ಕೆ ಎಚ್ಚೆತ್ತುಕೊಳ್ಳಿ.
  • ಇಂತಹ ವಂಚನೆಯಿಂದ ಪಾರಾಗಲು ಏನ್ ಮಾಡಬೇಕು ತಿಳಿಯಲು ಈ ವರದಿ ಓದಿ.
Paytm ಬಳಕೆದಾರರೆ ಎಚ್ಚರ! ಬಳಕೆದಾರರಿಗೆ ಈ ರೀತಿ  ಲಕ್ಷಾಂತರ ರೂಪಾಯಿಗಳ ಪಂಗನಾಮ ಹಾಕಲಾಗುತ್ತಿದೆ title=
Fake Paytm Spoof App (File Photo)

Online Payment - ನೀವು Paytm ಬಳಕೆದಾರರಾಗಿದ್ದರೆ ಮತ್ತು ಹಣದ ವಹಿವಾಟುಗಳಿಗಾಗಿ ಅಥವಾ ಶಾಪಿಂಗ್‌ಗಾಗಿ ಅಪ್ಲಿಕೇಶನ್ ಅನ್ನು ವಿವೇಚನೆಯಿಲ್ಲದೆ ಬಳಸುತ್ತಿದ್ದರೆ, ತಕ್ಷಣ ಎಚ್ಚೆತ್ತುಕೊಳ್ಳಿ. ವಂಚಕರ ನೆಕ್ಸ್ಟ್ ಬಲಿಪಶು ನೀವಾಗುವ ಸಾಧ್ಯತೆ ಇದೆ. Paytm ನಲ್ಲಿ ಹೇಗೆ ವಂಚನೆ ನಡೆಸಲಾಗುತ್ತಿದೆ ಮತ್ತು ಹೇಗೆ ಸಾವಿರಾರು-ಲಕ್ಷಾಂತರ ರೂಗಳ ವಂಚನೆಯಾಗುತ್ತಿದೆ, ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

Online Fraud - ಭಾರತದಲ್ಲಿ ಆನ್‌ಲೈನ್ ಪಾವತಿ ಹೆಚ್ಚುತ್ತಿರುವ ರೀತಿಯಲ್ಲಿ, ಆನ್‌ಲೈನ್ ವಂಚನೆಯ ಗ್ರಾಫ್ ಕೂಡ ಅಷ್ಟೇ ವೇಗವಾಗಿ ಏರುತ್ತಿದೆ. ಸಾಂಕ್ರಾಮಿಕ ಸಮಯದಲ್ಲಿ, ಜಾಸ್ತಿ ಪ್ರಮಾಣದಲ್ಲಿ ಜನರು ಡಿಜಿಟಲ್ ವಹಿವಾಟುಗಳನ್ನು ನಡೆಸಿದ್ದಾರೆ. ಹೀಗಾಗಿ ಹ್ಯಾಕರ್‌ಗಳು ಮತ್ತು ದಾಳಿಕೋರರು ಈಗ ಸುಲಭವಾಗಿ ಜನರನ್ನು ವಂಚಿಸುತ್ತಿದ್ದಾರೆ ಮತ್ತು ಅವರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ದೊಚುತ್ತಿದ್ದಾರೆ.  ಇಂತಹ ಒಂದು ಇತ್ತೀಚಿನ ಪ್ರಕರಣವು Paytm ಅಪ್ಲಿಕೇಶನ್‌ಗೆ ಸಂಬಂಧಿಸಿದೆ. ನೀವು ಆನ್‌ಲೈನ್ ವಹಿವಾಟುಗಳಿಗೆ ಪೇಟಿಎಂ ಅನ್ನು ನಿರ್ದಾಕ್ಷಿಣ್ಯವಾಗಿ ಬಳಸುತ್ತಿದ್ದರೆ, ತಕ್ಷಣ ಎಚ್ಚೆತ್ತುಕೊಳ್ಳಿ. ಏಕೆಂದರೆ ದೇಶದ ಅನೇಕ ನಗರಗಳಲ್ಲಿ ನಕಲಿ ಪೇಟಿಎಂ ಮೂಲಕ  ಸಾವಿರಾರು ಲಕ್ಷ ರೂ.ಗಳ ಪಂಗನಾಮ ಹಾಕಲಾಗಿದೆ

>> ಹೈದರಾಬಾದ್ ಸೇರಿದಂತೆ ಈ ನಗರಗಳಲ್ಲಿ ಲಕ್ಷಾಂತರ ರೂಪಾಯಿಗಳ ವಂಚನೆಗಳು ನಡೆದಿದೆ
ಜನರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಎಂಟು ಜನರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಆನ್‌ಲೈನ್ ವಂಚನೆ ಪ್ರಕರಣದಲ್ಲಿ ಪೊಲೀಸರು 75,000 ರೂಪಾಯಿ ವಂಚನೆ ಎಸಗಿದ ವ್ಯಕ್ತಿಯನ್ನು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದಾರೆ ಎನ್ನಲಾಗಿದೆ.

ಇಂದೋರ್ ಮತ್ತು ಛತ್ತೀಸ್‌ಗಢದಿಂದ ಇಂತಹದೊಂದು ಘಟನೆ ವರದಿಯಾಗಿದ್ದು, ಈ ವಂಚನೆ ಪ್ರಕರಣದಲ್ಲಿ, ದಾಳಿಕೋರರು ಅಂಗಡಿಯವರಿಂದ ಸಾವಿರಾರು ರೂಪಾಯಿ ಮೌಲ್ಯದ ಸಾಲಮನ್‌ಗಳನ್ನು ಖರೀದಿಸಿದ್ದಾರೆ ಮತ್ತು ನಂತರ ಫೋನ್ ಸಂಖ್ಯೆಗಳು ಮತ್ತು ಇತರ ವಿವರಗಳನ್ನು ನಮೂದಿಸುವ ಮೂಲಕ ಈ ಅಪ್ಲಿಕೇಶನ್‌ನಲ್ಲಿ ನಕಲಿ ಅಧಿಸೂಚನೆಗಳನ್ನು ಬಿತ್ತರಿಸಿದ್ದಾರೆ. ನಂತರ ಈ ಪುಂಡರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. 

>> ಜನರ ಖಾತೆ ಖಾಲಿ ಮಾಡುತ್ತಿದೆ ನಕಲಿ Paytm
ಕಳೆದ ಕೆಲವು ತಿಂಗಳುಗಳಲ್ಲಿ, Paytm ಸ್ಪೂಫ್ (Paytm Spoof Application) ಅಪ್ಲಿಕೇಶನ್ ಬಳಸಿ ನಡೆಸಲಾದ  ವಂಚನೆಯ ಘಟನೆಗಳಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ಈ ಅಪ್ಲಿಕೇಶನ್ (Fake Paytm Application) ಬಳಸುವ ಮೂಲಕ ದಾಳಿಕೋರರು ಜನರನ್ನು ಮೋಸಗೊಳಿಸುತ್ತಿದ್ದಾರೆ ಮತ್ತು ಅವರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಅಪ್ಲಿಕೇಶನ್ ಅದರ ಇಂಟರ್ಫೇಸ್ ಸೇರಿದಂತೆ ಮೂಲ Paytm ಅಪ್ಲಿಕೇಶನ್‌ಗೆ ಹೋಲುತ್ತದೆ, ಆದ್ದರಿಂದ ಜನರಿಗೆ ನಕಲಿ ಮತ್ತು ನಿಜವಾದ Paytm ನಡುವೆ ವ್ಯತ್ಯಾಸ ಗುರುತಿಸಲು ಆಗುತ್ತಿಲ್ಲ.

ಇದನ್ನೂ ಓದಿ-Post Office Super Hit Scheme! ನಿತ್ಯ ಕೇವಲ 50ರೂ.ಹೂಡಿಕೆ ಮಾಡಿ 35 ಲಕ್ಷ ಪಡೆಯಿರಿ

>> Paytm ವಂಚನೆಗಳಿಗೆ ಸಂಬಂಧಿಸಿದ ಹೆಚ್ಚಿನ ಸಂದರ್ಭಗಳಲ್ಲಿ, ವಂಚಕರು ಮೊದಲು ಅಂಗಡಿಯಿಂದ ಏನನ್ನಾದರೂ ಖರೀದಿಸುತ್ತಾರೆ ಮತ್ತು ನಂತರ ಅಂಗಡಿಯವರ ಫೋನ್ ಸಂಖ್ಯೆ, ಅಂಗಡಿ ಹೆಸರು, ಮೊತ್ತ ಮತ್ತು ಇತರ ವಿವರಗಳನ್ನು ನಮೂದಿಸಿ ನಕಲಿ ಪಾವತಿ (Fake Payment Notification) ಅಧಿಸೂಚನೆಗಳನ್ನು ರಚಿಸುತ್ತಾರೆ, ಅವರು ಹಣವನ್ನು ಪಾವತಿಸಿದ್ದಾರೆ ಎಂದು ತೋರಿಸುತ್ತಾರೆ. Paytm ವಂಚನೆಯು ಅಂಗಡಿಯ ಮಾಲೀಕರ ಖಾತೆಗೆ ಪಾವತಿ ಅಧಿಸೂಚನೆಗಳನ್ನು ಸಹ ಕಳುಹಿಸುತ್ತದೆ ಆದರೆ ಮೂಲತಃ ಅಂಗಡಿಯ ಬ್ಯಾಂಕ್ ಖಾತೆಗೆ ಯಾವುದೇ ಹಣವನ್ನು ಕ್ರೆಡಿಟ್ ಆಗುವುದಿಲ್ಲ.

ಇದನ್ನೂ ಓದಿ-ಖ್ಯಾತ ಸ್ಮಾರ್ಟ್ ಫೋನ್ ಬ್ರಾಂಡ್ Xiaomi ಮಾಡಿರುವ ತಪ್ಪೇನು ಗೊತ್ತಾ?

ತಪ್ಪಿಸಿಕೊಳ್ಳಲು ಇದನ್ನು ಮಾಡಿ
ಇಂತಹ ವಂಚನೆಗಳನ್ನು ಗುರುತಿಸಲು, ಪ್ರತಿ ವಹಿವಾಟಿನ ನಂತರ ನೀವು ಯಾವಾಗಲೂ ನಿಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಬೇಕು. ನೀವು ಕ್ರೆಡಿಟ್‌ನ ಮೂಲವನ್ನು ಸಹ ಪರಿಶೀಲಿಸಬೇಕಾಗುತ್ತದೆ, ಅದು ಯಾವಾಗಲೂ ನಿಮ್ಮ ಬ್ಯಾಂಕ್‌ನಿಂದ ಬರಬೇಕು.

ಇದನ್ನೂ ಓದಿ-Prototype Lickable TV:ಟಿವಿ ಪರದೆಯ ಮೇಲೆ ನೀವು ವಿಕ್ಷೀಸುವ ಆಹಾರದ ಟೇಸ್ಟ್ ಮಾಡಿಸುತ್ತಂತೆ ಈ TV

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News