ಕಾರಿನ ವೈಶಿಷ್ಟ್ಯತೆಗಳೊಂದಿಗೆ ಬಂದಿದೆ ಈ ಸ್ಕೂಟರ್ ! ಬೆಲೆ ಕೂಡಾ ಭಾರೀ ಕಡಿಮೆ

ಹೋಂಡಾ ಡಿಯೋ  ವೈಶಿಷ್ಟ್ಯಗಳನ್ನು ವೆಬ್‌ಸೈಟ್‌ನಲ್ಲಿ ಬಹಿರಂಗಪಡಿಸಲಾಗಿಲ್ಲ. ಡಿಯೊ ಎಚ್-ಸ್ಮಾರ್ಟ್ ವೈಶಿಷ್ಟ್ಯಗಳು ಆಕ್ಟಿವಾ ಎಚ್-ಸ್ಮಾರ್ಟ್‌ನಂತೆಯೇ ಇರಬಹುದೆಂದು ನಿರೀಕ್ಷಿಸಲಾಗಿದೆ. 

Written by - Ranjitha R K | Last Updated : Jun 10, 2023, 11:22 AM IST
  • ಸ್ಮಾರ್ಟ್ ಕೀ ವೈಶಿಷ್ಟ್ಯವನ್ನು ಸ್ಕೂಟರ್‌ಗೆ ಸೇರಿಸಲಾಗಿದೆ.
  • ಸ್ಮಾರ್ಟ್ ಕೀಯೊಂದಿಗೆ ಬರುತ್ತಿದೆ ಹೋಂಡಾ ಡಿಯೋ
  • ಏನಿರಲಿದೆ ಹೋಂಡಾ ಡಿಯೋ ಹೆಚ್ ವೈಶಿಷ್ಟ್ಯಗಳು
ಕಾರಿನ ವೈಶಿಷ್ಟ್ಯತೆಗಳೊಂದಿಗೆ ಬಂದಿದೆ ಈ ಸ್ಕೂಟರ್ !  ಬೆಲೆ ಕೂಡಾ ಭಾರೀ ಕಡಿಮೆ  title=

ಬೆಂಗಳೂರು : ಹೋಂಡಾ ತನ್ನ ಆಕ್ಟಿವಾ ಸ್ಕೂಟರ್‌ನ H-ಸ್ಮಾರ್ಟ್ ರೂಪಾಂತರವನ್ನು ಕೆಲವು ಸಮಯದ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. H-Smart ಸರಣಿಯ ಅಡಿಯಲ್ಲಿ ಸ್ಮಾರ್ಟ್ ಕೀ ವೈಶಿಷ್ಟ್ಯವನ್ನು ಸ್ಕೂಟರ್‌ಗೆ ಸೇರಿಸಲಾಗಿದೆ. ಈಗ ಕಂಪನಿಯು ತನ್ನ ಹೋಂಡಾ ಡಿಯೋ ಸ್ಕೂಟರ್‌ಗೆ ಅದೇ ವೈಶಿಷ್ಟ್ಯವನ್ನು ಸೇರಿಸಲು ಹೊರಟಿದೆ. ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಡಿಯೋ ಹೆಚ್ ಸ್ಮಾರ್ಟ್ ಬೆಲೆಯನ್ನು ಲಿಸ್ಟ್ ಮಾಡಿದೆ. ಇದರ ಪ್ರಕಾರ ಸ್ಕೂಟರ್‌ನ ಮೂಲ ಮಾದರಿಯ ಬೆಲೆ 70,211 ರೂ.  ಹೊಸ ಟಾಪ್ ಎಂಡ್ ರೂಪಾಂತರದ ಬೆಲೆ  77,712 ರೂಪಾಯಿ. ಪ್ರಸ್ತುತ, ಹೊಸ ಹೋಂಡಾ ಡಿಯೊ ಬುಕ್ಕಿಂಗ್ ಕೂಡಾ ಆರಂಭವಾಗಿದೆ. 

ಏನಿರಲಿದೆ ಹೋಂಡಾ ಡಿಯೋ ವೈಶಿಷ್ಟ್ಯಗಳು : 
ಹೋಂಡಾ ಡಿಯೋ  ವೈಶಿಷ್ಟ್ಯಗಳನ್ನು ವೆಬ್‌ಸೈಟ್‌ನಲ್ಲಿ ಬಹಿರಂಗಪಡಿಸಲಾಗಿಲ್ಲ. ಡಿಯೊ ಎಚ್-ಸ್ಮಾರ್ಟ್ ವೈಶಿಷ್ಟ್ಯಗಳು ಆಕ್ಟಿವಾ ಎಚ್-ಸ್ಮಾರ್ಟ್‌ನಂತೆಯೇ ಇರಬಹುದೆಂದು ನಿರೀಕ್ಷಿಸಲಾಗಿದೆ. ಅಂದರೆ, ಇದರಲ್ಲಿ ಫ್ಯುಯೆಲ್ ಎಫ್ಫಿಶಿಯೆಂಟ್ ಟೈರ್ ಮತ್ತು ಸ್ಮಾರ್ಟ್ ಕೀಯನ್ನು ನೀಡಲಾಗುತ್ತದೆ. ಸ್ಮಾರ್ಟ್ ಕೀ ಜೊತೆಗೆ ಈ ಸ್ಕೂಟರ್ ನಲ್ಲಿ ಆಂಟಿ ತೆಫ್ಟ್ ಸಿಸ್ಟಮ್ ಅಳವಡಿಸಲಾಗಿದೆ. ಈ ವೈಶಿಷ್ಟ್ಯದ ಮೂಲಕ ಸ್ಕೂಟರ್  2 ಕಿ. ಮೀಟರ್‌ಗಿಂತ ಹೆಚ್ಚು ದೂರದಲ್ಲಿರುವಾಗ ಸ್ಕೂಟರ್ ಅನ್ನು ಲಾಕ್ ಮಾಡುತ್ತದೆ. 

ಇದನ್ನೂ ಓದಿ : ICC World Cup 2023 ಹಾಗೂ Asia Cup ಗಳ ಉಚಿತ ವೀಕ್ಷಣೆಗೆ ಅವಕಾಶ ಕಲ್ಪಿಸಲಿದೆ ಡಿಸ್ನಿ+ ಹಾಟ್ ಸ್ಟಾರ್

ಸ್ಕೂಟರ್‌ನ ಹ್ಯಾಂಡಲ್, ಫ್ಯುಯೆಲ್ ಕ್ಯಾಪ್ ಮತ್ತು ಸೀಟ್ ಕೀ ಹತ್ತಿರ ಬಂದ ತಕ್ಷಣ ಅನ್‌ಲಾಕ್ ಮಾಡಬಹುದು. ಇಗ್ನಿಶನ್ ಆನ್ ಮಾಡಲು,  ರೋಟರಿ ನಾಬ್ ಅನ್ನು ವ್ಯಾಪ್ತಿಯ ಒಳಗೆ ಪುಶ್ ಮತ್ತು ಟರ್ನ್ ಮಾಡಿದರೆ ಸಾಕಾಗುತ್ತದೆ. ಎಂಜಿನ್ ಅನ್ನು ಸ್ವಿಚ್ ಮೂಲಕ  ಸ್ಟಾರ್ಟ್/ಸ್ಟಾಪ್ ಮಾಡಬಹುದು. ಇದು LED ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳು, ಎಲ್ ಇ ಡಿ ಹೆಡ್ ಲ್ಯಾಂಪ್, ಫ್ರಂಟ್ ಪಾಕೆಟ್, ಸೀಟ್ ಸ್ಟೋರೇಜ್ ಅಡಿಯಲ್ಲಿ, ಫ್ಯುಯೆಲ್ ಫಿಲ್ಲರ್ ಕ್ಯಾಪ್ ಮತ್ತು ಪಾಸಿಂಗ್ ಸ್ವಿಚ್‌ನೊಂದಿಗೆ LED ಹೆಡ್‌ಲ್ಯಾಂಪ್ ಇರುತ್ತದೆ. 

ಎಂಜಿನ್ ಮತ್ತು ಪವರ್ : 
ಪವರ್ ಡಿಯೊ ಹೆಚ್-ಸ್ಮಾರ್ಟ್ ನಲ್ಲಿ ಕೂಡಾ  ಆಕ್ಟಿವಾ ದೊಂದಿಗೆ ನೀಡಲಾದ 109.51 ಸಿಸಿ ಏರ್-ಕೂಲ್ಡ್ ಎಂಜಿನ್ ಬರುತ್ತದೆ. ಇದು 8,000 rpmನಲ್ಲಿ 7.65 bhp ಮತ್ತು 4,750 rpm ನಲ್ಲಿ 9 Nm ನ ಗರಿಷ್ಠ ಟಾರ್ಕ್ ಜನರೇಟ್ ಮಾಡುತ್ತದೆ. ಸಸ್ಪೆನ್ಷನ್ ಮತ್ತು ಬ್ರೇಕಿಂಗ್ ಹಾರ್ಡ್‌ವೇರ್‌ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಇದನ್ನೂ ಓದಿ :  ಬಲು ಅಪಾಯಕಾರಿ ಈ 10 ಅಪ್ಲಿಕೇಶನ್‌ಗಳು ! ಹೆಚ್ಚು ಬಳಕೆಯಲ್ಲಿರುವ ಆಪ್ ಗಳು ಕೂಡಾ ಲಿಸ್ಟ್ ನಲ್ಲಿವೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News