Jio Data Plan: ಒಂದು ವೇಳೆ ನೀವೂ ಕೂಡ ನಿಮ್ಮ ಮೊಬೈಲ್ ನಲ್ಲಿ ಇಂಟರ್ನೆಟ್ ಅನ್ನು ಬಳಸುತ್ತಿದ್ದು ಮತ್ತು ನಿಮ್ಮ ಇಂಟರ್ನೆಟ್ ಡೇಟಾ ಖಾಲಿಯಾದಾಗ ನೀವು ಏನು ಮಾಡುತ್ತೀರಿ? ಎಂಬುದನ್ನೊಮ್ಮೆ ಕಲ್ಪಿಸಿಕೊಳ್ಳಿ, ನಿಸ್ಸಂಶಯವಾಗಿ ನಿಮಗೆ ಸಾಕಷ್ಟು ತೊಂದರೆಗಳು ಉಂಟಾಗುತ್ತವೆ, ಆದರೆ ನೀವು ಜಿಯೋ ಗ್ರಾಹಕರಾಗಿದ್ದರೆ, ನಿಮಗೆ ತ್ವರಿತ ಡೇಟಾವನ್ನು ಒದಗಿಸುವ ಪ್ರಿಪೇಯ್ಡ್ ಯೋಜನೆಯನ್ನು ನೀವು ಪಡೆಯಬಹುದು. ಅದು ಕೂಡ ನಿಮ್ಮ ಊಹೆಗೂ ಮೀರಿದ ಕೈಗೆಟುಕುವ ದರದಲ್ಲಿ. ಹೌದು, ಇಂದು ನಾವು ನಿಮಗಾಗಿ ಜಿಯೋದ ಅಂತಹ ಒಂದು ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯ ಕುರಿತು ಮಾಹಿತಿಯನ್ನು ತಂದಿದ್ದೇವೆ, ಈ ಯೋಜನೆ ನಿಮಗೂ ಇಷ್ಟವಾಗಲಿದ್ದು, ನಿಮ್ಮ ಹಠಾತ್ ಡೇಟಾ ಬೇಡಿಕೆಯ ಸಂದರ್ಭದಲ್ಲಿ, ನೀವು ಅದನ್ನು ರೀಚಾರ್ಜ್ ಮಾಡಬಹುದು ಮತ್ತು ಡೇಟಾ ಸಂಬಂಧಿತ ಅಗತ್ಯಗಳನ್ನು ಪೂರೈಸಬಹುದು.
ಇದನ್ನೂ ಓದಿ-Motorola G32: 17 ಸಾವಿರ ಮೌಲ್ಯದ ಸ್ಮಾರ್ಟ್‌ಫೋನ್ 2 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಲಭ್ಯ
ಈ ರೀಚಾರ್ಜ್ ಯೋಜನೆ ಯಾವುದು
Jio ತನ್ನ ಗ್ರಾಹಕರಿಗೆ ₹ 25 ರ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಜಾರಿಗೆ ತಂದಿದೆ, ನಿಮ್ಮ ಡೇಟಾ ಖಾಲಿಯಾದಾಗ ಮತ್ತು ನೀವು ಇಂಟರ್ನೆಟ್ ಅನ್ನು ಬಳಸಬೇಕಾದರೆ ಈ ಯೋಜನೆಯು ನಿಮಗೆ ಸೂಕ್ತವಾಗಿದೆ. ಡೇಟಾಗಾಗಿ ನೀವು ಬೇರೆಯವರ ಮೇಲೆ ಅವಲಂಬಿತರಾಗಬಾರದು ಎಂಬ ಉದ್ದೇಶದಿಂದ ಜಿಯೋ ಈ ಅತ್ಯಂತ ಉಪಯುಕ್ತ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ, ನೀವು ತ್ವರಿತ ಡೇಟಾವನ್ನು ಪದೆಯುವಿರು ಮತ್ತು ಅದು ಸಹ ಕೈಗೆಟುಕುವ ಬೆಲೆಯಲ್ಲಿ. ಈ ರೀಚಾರ್ಜ್ ಪ್ಲಾನ್‌ನ ವೆಚ್ಚ ₹ 25 ಆಗಿದೆ, ಈ ಸಂದರ್ಭದಲ್ಲಿ ಅದು ನಿಮ್ಮ ಜೇಬಿಗೂ ಹೊರೆಯಾಗುವುದಿಲ್ಲ ಮತ್ತು ನೀವು ಡೇಟಾದ ಪ್ರಯೋಜನವನ್ನು ಸಹ ಪಡೆಯುವಿರಿ.
ಇದನ್ನೂ ಓದಿ-Smart Discount: ಭರ್ಜರಿ ಡಿಸ್ಕೌಂಟ್ ಮೇಳ: ಕೇವಲ 849 ರೂ.ಗೆ ಖರೀದಿಸಿ 32 ಇಂಚಿನ LED ಟಿವಿ
ಜಿಯೋದ ಈ ಡೇಟಾ ಪ್ಲಾನ್‌ನಲ್ಲಿ ಲಭ್ಯವಿರುವ ಪ್ರಯೋಜನಗಳ ಕುರಿತು ಹೇಳುವುದಾದರೆ, ಗ್ರಾಹಕರು ಇದರಲ್ಲಿ 2GB ಡೇಟಾವನ್ನು ಪಡೆಯುತ್ತಾರೆ ಮತ್ತು ಇದು ಸಾಮಾನ್ಯ ಡೇಟಾ ಅಲ್ಲ, ಏಕೆಂದರೆ ಇದು ಹೈಸ್ಪೀಡ್ ಡೇಟಾ ಆಗಿದೆ, ಇದು ಇಂಟರ್ನೆಟ್ ಸಂಬಂಧಿತ ಕೆಲಸವನ್ನು ವೇಗವಾಗಿ ಪೂರ್ಣಗೊಳಿಸಲು ಬಹಳ ಸಹಾಯಕ ಎಂದು ಸಾಬೀತುಪಡಿಸುತ್ತದೆ. . ಹಲವು ಬಾರಿ ಡೇಟಾ ಯೋಜನೆಗಳಲ್ಲಿ ಇಂಟರ್ನೆಟ್ ಏನೋ ಸಿಗುತ್ತದೆ, ಆದರೆ ಇದು ತುಂಬಾ ನಿಧಾನವಾಗಿರುತ್ತದೆ, ಇದರಿಂದಾಗಿ ನೀವು ಸಾಕಷ್ಟು ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸುತ್ತೀರಿ. ಹೀಗಾಗುವುದನ್ನು ನೀವು ತಪ್ಪಿಸಲು ಬಯಸುತ್ತಿದ್ದರೆ, ಈ ಯೋಜನೆ ನಿಮ್ಮ ಪಾಲಿಗೆ ಒಂದು ಉತ್ತಮ ಡೀಲ್ ಸಾಬೀತಾಗಬಹುದು. 2GB ಡೇಟಾವನ್ನು ಬಳಸುವುದರೊಂದಿಗೆ, ನೀವು ಚಲನಚಿತ್ರಗಳನ್ನು ವೀಕ್ಷಿಸಬಹುದು ಮತ್ತು ವೀಡಿಯೊಗಳನ್ನು ಸಹ ಡೌನ್‌ಲೋಡ್ ಮಾಡಬಹುದು ಮತ್ತು ಸಾಮಾಜಿಕ ಮಾಧ್ಯಮವನ್ನು ರನ್ ಮಾಡಬಹುದು, ಇಂತಹ ಪರಿಸ್ಥಿತಿಯಲ್ಲಿ ಈ ಯೋಜನೆಯು ನಿಮಗೆ ಹೆಚ್ಚು ಉಪಯುಕ್ತವಾಗಬಹುದು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.