Motorolaದ ಅತ್ಯಂತ ಶಕ್ತಿಶಾಲಿ ಫೋನ್ ಬಿಡುಗಡೆ: ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ

ಈ ತಿಂಗಳ ಕೊನೆಯಲ್ಲಿ Moto Edge X30 ಸ್ಮಾರ್ಟ್‌ಫೋನ್ ಚೀನಾದಲ್ಲಿ ಮಾರಾಟಕ್ಕೆ ಲಭ್ಯವಿರಲಿದ್ದು, ಶೀಘ್ರವೇ ಭಾರತೀಯ ಮಾರುಕಟ್ಟೆಗೂ ಲಗ್ಗೆ ಇಡಲಿದೆ.

Written by - Zee Kannada News Desk | Last Updated : Dec 10, 2021, 11:26 AM IST
  • ಶೀಘ್ರವೇ ಭಾರತೀಯ ಮಾರುಕಟ್ಟೆಗೆ Motorola Moto Edge X30 ಸ್ಮಾರ್ಟ್‌ಫೋನ್
  • Moto Edge X30 ಸ್ಮಾರ್ಟ್‌ಫೋನ್ Qualcomm Snapdragon K8 Gen1 ಚಾಲಿತವಾಗಲಿದೆ
  • Motorola ಕಂಪನಿಯು Moto Edge X30 ವಿಶೇಷ ಆವೃತ್ತಿಯನ್ನು ಸಹ ಘೋಷಿಸಿದೆ
Motorolaದ ಅತ್ಯಂತ ಶಕ್ತಿಶಾಲಿ ಫೋನ್ ಬಿಡುಗಡೆ: ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ title=
Moto Edge X30 ಸ್ಮಾರ್ಟ್‌ಫೋನ್

ನವದೆಹಲಿ: Motorola ಅಂತಿಮವಾಗಿ ತನ್ನ ಅತ್ಯಂತ ಶಕ್ತಿಶಾಲಿ ಸಾಧನಗಳಲ್ಲಿ ಒಂದಾದ Moto Edge X30 ಸ್ಮಾರ್ಟ್‌ಫೋನ್ ಅನ್ನು ಹೊರತಂದಿದೆ. Moto Edge X30 Qualcomm Snapdragon K8 Gen1ನಿಂದ ಚಾಲಿತವಾಗಲಿರುವ ಮೊದಲ Motorola ಸ್ಮಾರ್ಟ್‌ಫೋನ್ ಆಗಿದೆ. ಈ ಸ್ಮಾರ್ಟ್‌ಫೋನ್ ಮತ್ತೊಂದು ವಿಶೇಷವೆಂದರೆ 2-ಮೆಗಾಪಿಕ್ಸೆಲ್ ಸೆನ್ಸಾರ್ ನಿಂದ ಬೆಂಬಲಿತವಾದ ಡ್ಯುಯಲ್ 50-ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರುವುದು. ಇದು Android 12ನಲ್ಲಿ ಕಾರ್ಯನಿರ್ವಹಿಸಲಿದೆ. ಮೊಟೊರೊಲಾ ಶೀಘ್ರದಲ್ಲೇ ಈ ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

Moto Edge X30ನ ರೆಂಡರ್‌ಗಳು ಬಿಡುಗಡೆಯ ಮುಂಚೆಯೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಸ್ಮಾರ್ಟ್‌ಫೋನ್‌ನಲ್ಲಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಕೇಂದ್ರೀಯವಾಗಿ ಇರುವ ಪಂಚ್-ಹೋಲ್ ಕಟೌಟ್‌ನೊಂದಿಗೆ ಬರಲಿದೆ. ಕಂಪನಿಯು Moto Edge X30 ವಿಶೇಷ ಆವೃತ್ತಿಯನ್ನು ಸಹ ಘೋಷಿಸಿದೆ. ಈ ಫೋನಿನ ವಿಶೇಷಣಗಳು ಮತ್ತು ಬೆಲೆಯ ಕುರಿತ ಮತ್ತಷ್ಟು ಮಾಹಿತಿಗಳು ಇಲ್ಲಿವೆ ನೋಡಿ.

ಇದನ್ನೂ ಓದಿಭಾರತೀಯ ಮಾರುಕಟ್ಟೆಗೆ ಅತ್ಯಂತ ಅಗ್ಗದ ರಾಯಲ್ ಎನ್‌ಫೀಲ್ಡ್!: ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ

Moto Edge X30 ವೈಶಿಷ್ಟ್ಯಗಳು

Moto Edge X30 ಸ್ಮಾರ್ಟ್‌ಫೋನ್ 2400×1080 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.7-ಇಂಚಿನ OLED FHD+ ಡಿಸ್ಪ್ಲೇಯನ್ನು ಹೊಂದಿದೆ. 144Hz ನ ಹೆಚ್ಚಿನ ರಿಫ್ರೆಶ್ ರೇಟ್ ಮತ್ತು 576Hz Touch Sampling Rate ನೊಂದಿಗೆ ಬರುತ್ತದೆ. ಡಿಸ್ಪ್ಲೇ DCI-P3 Color Gamut, HDR10+ ಅನ್ನು ಸಹ ಬೆಂಬಲಿಸುತ್ತದೆ. ಪಂಚ್-ಹೋಲ್ ಕಟೌಟ್ ಮತ್ತು ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸಾರ್ ಅನ್ನು ಹೊಂದಿದೆ. ಸ್ಮಾರ್ಟ್‌ಫೋನ್ Qualcomm Snapdragon 8 Gen1 ಚಿಪ್ ಸೆಟ್ ಜೊತೆಗೆ 12GB RAM ಮತ್ತು 512GB ಸ್ಟೋರೇಜ್ ಅನ್ನು ಹೊಂದಿದೆ. Moto Edge X30 Android 12 OS ನಲ್ಲಿ MyUI 3.0 ಕ್ಲೀನ್ ಸ್ಟಾಕ್ UI ಜೊತೆಗೆ ರನ್ ಆಗುತ್ತದೆ.

Moto Edge X30 ಕ್ಯಾಮೆರಾ ಮತ್ತು ಬ್ಯಾಟರಿ

Moto Edge X30 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 5MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 2MP 3ನೇ ಸೆನ್ಸಾರ್ ನೊಂದಿಗೆ ಡ್ಯುಯಲ್ 50MP ಪ್ರಾಥಮಿಕ OV50A40 ಸೆನ್ಸಾರ್ ಅನ್ನು ಒಳಗೊಂಡಿದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 60 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. 68W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಸ್ಮಾರ್ಟ್‌ಫೋನ್ ಹೊಂದಿದೆ.

ಭಾರತದಲ್ಲಿ Moto Edge X30 ಸ್ಮಾರ್ಟ್‌ಫೋನ್ ಬೆಲೆ

Moto Edge X30 ಸ್ಮಾರ್ಟ್‌ಫೋನ್ ಅನ್ನು ಚೀನಾದಲ್ಲಿ 8GB/128GB ಮಾದರಿಗೆ 38,000 ರೂ., 8GB/256GB ಮಾದರಿಗೆ 40,300 ರೂ. ಮತ್ತು 12GB/256GB ಮಾದರಿಗೆ 42,700 ರೂ. ಇದೆ. ಇದಲ್ಲದೆ ವಿಶೇಷ ಆವೃತ್ತಿಯ Moto Edge X30 ಬೆಲೆ 12GB/256GB ಮಾದರಿಗೆ 47,500 ರೂ. ಇದೆ. ಈ ಫೋನ್ ನೀಲಿ ಮತ್ತು ಬಿಳಿ ಬಣ್ಣಗಳಲ್ಲಿ ಪರಿಚಯಿಸಲಾಗಿದೆ. ಈ ತಿಂಗಳ ಕೊನೆಯಲ್ಲಿ ಚೀನಾದಲ್ಲಿ ಮಾರಾಟಕ್ಕೆ ಲಭ್ಯವಿರಲಿದ್ದು, ಶೀಘ್ರವೇ ಭಾರತೀಯ ಮಾರುಕಟ್ಟೆಗೂ ಲಗ್ಗೆ ಇಡಲಿದೆ.

ಇದನ್ನೂ ಓದಿ: iPhone SE Smartphone: Flipkartನಲ್ಲಿ ಕೇವಲ 13 ಸಾವಿರಕ್ಕೆ ಸಿಗುತ್ತಿದೆ ಐಫೋನ್ SE

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News