ನವದೆಹಲಿ: ಪ್ರಸಿದ್ಧ ಸ್ಮಾರ್ಟ್‍ಫೋನ್ ತಯಾರಕ ಕಂಪನಿ OPPO ಇದೀಗ Find X6 ಮತ್ತು X6 Pro ಬಿಡುಗಡೆ ಮಾಡಲು ಸಜ್ಜಾಗಿದೆ ಎಂದು ವರದಿಯಾಗಿದೆ. ಬಹುಶಃ ಈ ಸ್ಮಾರ್ಟ್‍ಫೋನ್‍ಗಳು ಶೀಘ್ರವೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಈ ಸ್ಮಾರ್ಟ್‍ಫೋನ್‍ಗಳ ಕೆಲವು ಪ್ರಮುಖ ಮಾಹಿತಿಗಳು ಸೋರಿಕೆಯಾಗಿವೆ.
ಮಾಹಿತಿ ಪ್ರಕಾರ OPPOದ ಮುಂಬರುವ ಸರಣಿಯ ಸ್ಮಾರ್ಟ್‍ಫೋನ್‍ಗಳ ಕೆಲ ಪ್ರಮುಖ ವಿಶೇಷಣಗಳು ಮತ್ತು ವೈಶಿಷ್ಟ್ಯಗಳು ಈಗಾಗಲೇ ಬಹಿರಂಗವಾಗಿದೆ. Find X6 Pro ಸ್ಮಾರ್ಟ್‍ಫೋನ್‍ನಲ್ಲಿ 1-ಇಂಚಿನ Sony IMX989 ಸೆನ್ಸಾರ್ ಬಳಸಲಾಗಿದೆ ಎಂಬ ಮಾಹಿತಿ ದೊರೆತಿದೆ.
ಇದನ್ನೂ ಓದಿ: ಸರ್ಕಾರದಿಂದ ಉಚಿತ ಸ್ಮಾರ್ಟ್‌ಫೋನ್! ಮೂರು ವರ್ಷದವರೆಗೆ ಇಂಟರ್ನೆಟ್ ಮತ್ತು ಕರೆ ಸೌಲಭ್ಯ ಕೂಡಾ ಫ್ರೀ
Find X6 Proನಲ್ಲಿ ಇದು ವಿಶೇಷವಾಗಿರುತ್ತದೆ
Oppoದ Find X6 Pro ಸ್ಮಾರ್ಟ್‍ಫೋನ್ ಅತ್ಯುನ್ನತ ಆವೃತ್ತಿಯು 1-ಇಂಚಿನ Sony IMX989 ಸೆನ್ಸಾರ್ ಹೊಂದಿದೆ ಎಂದು ಪ್ರಸಿದ್ಧ ಟಿಪ್‌ಸ್ಟರ್ ಐಸ್ ಯೂನಿವರ್ಸ್ ಟ್ವೀಟ್‌ನಲ್ಲಿ ಬಹಿರಂಗಪಡಿಸಿದೆ. ಈ ಸೆನ್ಸಾರ್ ಎಲ್ಲಾ ISOCELL ಉತ್ತಮ ಗುಣಮಟ್ಟದೊಂದಿಗೆ ಬರಲಿದ್ದು, ಬಳಕೆದಾರರಿಗೆ ಅತ್ಯುತ್ತಮ ಅನುಭವ ನೀಡುತ್ತದೆ ಎಂದು ಹೇಳಲಾಗಿದೆ. DSLR ಕ್ಯಾಮೆರಾಗಳಿಗೆ ಸೆಡ್ಡು ಹೊಡೆಯುವ ರೀತಿ ಈ ಸ್ಮಾರ್ಟ್‍ಫೋನ್‍ಗಳ ಕ್ಯಾಮೆರಾಗಳು ಇರುತ್ತವೆ ಎಂದು ಹೇಳಲಾಗಿದೆ.
Find X6 Pro 1-ಇಂಚಿನ ಕ್ಯಾಮೆರಾ ಸೆನ್ಸಾರ್ ಹೊಂದಿರುತ್ತದೆ
Find X6 Proನ ಮುಖ್ಯ ಕ್ಯಾಮೆರಾವು 1 ಇಂಚಿನ ಸೆನ್ಸಾರ್ ಹೊಂದಿರುತ್ತದೆ. ಇದಲ್ಲದೆ ಮುಂಬರುವ ಹ್ಯಾಂಡ್‌ಸೆಟ್ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಪ್ರಾಥಮಿಕ ಕ್ಯಾಮೆರಾವು 50-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು 32-ಮೆಗಾಪಿಕ್ಸೆಲ್ ಟೆಲಿಫೋಟೋ ಘಟಕದೊಂದಿಗೆ ಇರುತ್ತದೆ ಅನ್ನೋ ಮಾಹಿತಿ ದೊರೆತಿದೆ.
ಇದನ್ನೂ ಓದಿ: iPhone 14 ನ್ನು ಅರ್ಧ ಬೆಲೆಗೆ ಖರೀದಿಸುವ ಸುವರ್ಣಾವಕಾಶ! ಅದೂ ಬ್ರಾಂಡ್ ನ್ಯೂ ಫೋನ್... ಸೆಕೆಂಡ್ ಹ್ಯಾಂಡ್ ಅಲ್ಲ
ಅತ್ಯುತ್ತಮ ಕ್ಯಾಮೆರಾ
ವೆನಿಲ್ಲಾ Find X6 ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಹೊಂದಿದೆ ಎಂದು ವರದಿಯಾಗಿದೆ. ಈ ಸಾಧನವು 50-ಮೆಗಾಪಿಕ್ಸೆಲ್ ಮುಖ್ಯ ಸೆನ್ಸಾರ್, 50-ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಮತ್ತು 50-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಘಟಕವನ್ನು ಒಳಗೊಂಡಿರುವ ಸಾಧ್ಯತೆಯಿದೆ. ಇತ್ತೀಚಿನ ವರದಿಯ ಪ್ರಕಾರ, Find X6 1.5K ಡಿಸ್ಪ್ಲೇ ರೆಸಲ್ಯೂಶನ್‌ನೊಂದಿಗೆ ಬರುತ್ತದೆ ಮತ್ತು ಪ್ರೊ ಮಾದರಿಯು 2K ರೆಸಲ್ಯೂಶನ್ ನೀಡುತ್ತದೆ. ಎರಡೂ ಸ್ಮಾರ್ಟ್‌ಫೋನ್‌ಗಳು ಕ್ವಾಲ್‌ಕಾಮ್‌ನ ಮುಂಬರುವ ಸ್ನಾಪ್‌ಡ್ರಾಗನ್ 8+ Gen2 ನಿಂದ ಕಾರ್ಯನಿರ್ವಹಿಸಬಹುದು. ಮೂಲ ಮಾದರಿಯು ಸ್ನಾಪ್‌ಡ್ರಾಗನ್ 8+ Gen1 ನೊಂದಿಗೆ ಬರುವ ಸಾಧ್ಯತೆಯಿದೆ. OPPO Find X6 ಸರಣಿಯು ಬಹುಶಃ ಮುಂದಿನ ವರ್ಷ(2023) ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.