ಶೀಘ್ರದಲ್ಲೇ 10,000ರೂ.ಗಳಲ್ಲಿ 5G ಸ್ಮಾರ್ಟ್‌ಫೋನ್ ಪರಿಚಯಿಸಲಿದೆ ಸ್ಯಾಮ್‌ಸಂಗ್

ಜನಪ್ರಿಯ ಫೋನ್ ತಯಾರಕ ಸ್ಯಾಮ್‌ಸಂಗ್ ಶೀಘ್ರದಲ್ಲಿ ಕೈಗೆಟಕುವ ದರದಲ್ಲಿ ತನ್ನ 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ.  ಬಲವಾದ ಬ್ಯಾಟರಿ ಮತ್ತು ಉತ್ತಮ ಕ್ಯಾಮೆರಾದೊಂದಿಗೆ ಲಭ್ಯವಾಗಲಿರುವ ಈ 5ಜಿ ಸ್ಮಾರ್ಟ್‌ಫೋನ್ ಬೆಲೆ ಸುಮಾರು 10,000 ರೂ. ಎಂದು ಹೇಳಲಾಗುತ್ತಿದ

Written by - Yashaswini V | Last Updated : Jul 19, 2022, 09:45 AM IST
  • Samsung Galaxy A04s 5G ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ 5G ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಲಿದೆ
  • ಈ ಸ್ಮಾರ್ಟ್‌ಫೋನ್‌ ಬಲವಾದ ಬ್ಯಾಟರಿ ಮತ್ತು ಉತ್ತಮ ಕ್ಯಾಮೆರಾದೊಂದಿಗೆ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ
  • ಈ ಫೋನ್ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳ ನಡುವೆ ಬಿಡುಗಡೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ.
ಶೀಘ್ರದಲ್ಲೇ 10,000ರೂ.ಗಳಲ್ಲಿ 5G ಸ್ಮಾರ್ಟ್‌ಫೋನ್ ಪರಿಚಯಿಸಲಿದೆ ಸ್ಯಾಮ್‌ಸಂಗ್  title=
Samsung Galaxy A04s 5G

ಸ್ಯಾಮ್‌ಸಂಗ್ ಕಂಪನಿಯು ಶೀಘ್ರದಲ್ಲೇ ಗ್ಯಾಲಕ್ಸಿ ಎ ಸರಣಿಯ ಹಲವು ಪ್ರವೇಶ ಮಟ್ಟದ ಸಾಧನಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈ ಸಾಧನಗಳು Samsung Galaxy A04s 5G, Galaxy A04s ಮತ್ತು Galaxy A04 ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ. . Galaxy A04s ಅನ್ನು ಈಗಾಗಲೇ BIS ಪ್ರಮಾಣೀಕರಣ ಸೈಟ್‌ನಲ್ಲಿ ಗುರುತಿಸಲಾಗಿದೆ. ಈ ಮಧ್ಯೆ, ಜನಪ್ರಿಯ ಫೋನ್ ತಯಾರಕ ಸ್ಯಾಮ್‌ಸಂಗ್ ಶೀಘ್ರದಲ್ಲಿ ಕೈಗೆಟಕುವ ದರದಲ್ಲಿ ತನ್ನ  Samsung Galaxy A04s 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ.  ಬಲವಾದ ಬ್ಯಾಟರಿ ಮತ್ತು ಉತ್ತಮ ಕ್ಯಾಮೆರಾದೊಂದಿಗೆ ಲಭ್ಯವಾಗಲಿರುವ ಈ 5ಜಿ ಸ್ಮಾರ್ಟ್‌ಫೋನ್ ಬೆಲೆ ಸುಮಾರು 10,000 ರೂ. ಎಂದು ಹೇಳಲಾಗುತ್ತಿದೆ.

Samsung Galaxy A04s 5G ಬೆಲೆ: 
ವರದಿಯ ಪ್ರಕಾರ, ಭಾರತದಲ್ಲಿ Samsung Galaxy A04s 5G ಬೆಲೆ 10,000 ರಿಂದ 11,000 ರೂ. ಇರಬಹುದು ಎಂದು ಅಂದಾಜಿಸಲಾಗಿದೆ. ಇದು ನಿಜವಾದರೆ,  Samsung Galaxy A04s 5G  ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ 5G ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಲಿದೆ.

ಇದನ್ನೂ ಓದಿ- ಇನ್ಫಿನಿಕ್ಸ್‌ನ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಬಿಡುಗಡೆ

Samsung Galaxy A04s ವಿನ್ಯಾಸ:
Samsung Galaxy A04s 5G ನ ವಿಶೇಷತೆಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ, ಆದಾಗ್ಯೂ, 4G ರೂಪಾಂತರವು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನೊಂದಿಗೆ ಪಾಲಿಕಾರ್ಬೊನೇಟ್ ಬ್ಯಾಕ್ ಅನ್ನು ಹೊಂದಿದೆ ಎಂಬ ವದಂತಿಗಳಿವೆ. ಇದು ನೋಚ್ಡ್ ಎಲ್ಸಿಡಿ ಡಿಸ್ಪ್ಲೇ, 3.5 ಎಂಎಂ ಹೆಡ್‌ಫೋನ್ ಜ್ಯಾಕ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಹುಡ್ ಅಡಿಯಲ್ಲಿ ಸ್ಯಾಮ್‌ಸಂಗ್ ಎಕ್ಸಿನೋಸ್ 850 ಚಿಪ್‌ಸೆಟ್‌ನೊಂದಿಗೆ ಬರಲಿದೆ.

ಇದನ್ನೂ ಓದಿ- ಈಗ ನಿಮ್ಮ ವಾಟ್ಸಾಪ್ ಚಾಟಿಂಗ್ ಆಗಲಿದೆ ಇನ್ನೂ ರೋಮಾಂಚಕ

Samsung Galaxy A04s 5G ಬಿಡುಗಡೆ ದಿನಾಂಕ:
Samsung Galaxy A04s 5G ಸಾಧನವು ಡ್ಯುಯಲ್-ಕ್ಯಾಮೆರಾ ಸೆಟಪ್ ಮತ್ತು LCD ಪ್ಯಾನೆಲ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಫೋನ್ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳ ನಡುವೆ ಬಿಡುಗಡೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News