ಎಲೋನ್ ಟ್ವೀಟ್ ಬೆನ್ನಲ್ಲೇ ಟ್ರೆಂಡಿಂಗ್ ಆಯ್ತು ‘RIP Twitter’ ಹ್ಯಾಷ್ ಟ್ಯಾಗ್: ಏನಿದು ಹೊಸ ವಿವಾದ?

RIP Twitter: ಗಮನಾರ್ಹವಾಗಿ, ಕಳೆದ ತಿಂಗಳು ಎಲೋನ್ ಮಸ್ಕ್ ಟ್ವಿಟರ್ ನಲ್ಲಿ ಅಧಿಕಾರ ವಹಿಸಿದಾಗಿನಿಂದ, ಸುಮಾರು 50% ಸಿಬ್ಬಂದಿಯನ್ನು ವಜಾ ಮಾಡಿದ್ದಾರೆ. ಇದರ ಜೊತೆಗೆ ಮನೆಯಿಂದ ಕೆಲಸ ಮಾಡುವ ನೀತಿಯನ್ನು ಸಹ ರದ್ದುಗೊಳಿಸಿದ್ದಾರೆ. ಕೆಲಸದ ಅವಧಿಯನ್ನೂ ಸಹ ಹೆಚ್ಚಳ ಮಾಡಿದ್ದಾರೆ.

Written by - Bhavishya Shetty | Last Updated : Nov 18, 2022, 12:46 PM IST
    • ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಯ್ತು ‘RIP Twitter’ ಹ್ಯಾಷ್ ಟ್ಯಾಗ್
    • ಈಗಾಗಲೇ ಸುಮಾರು 50% ಸಿಬ್ಬಂದಿಯನ್ನು ವಜಾ ಮಾಡಿದ್ದಾರೆ
    • ಎಲೋನ್ ಸಹವಾಸವೇ ಬೇಡ ಎಂದು ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದಾರೆ.
ಎಲೋನ್ ಟ್ವೀಟ್ ಬೆನ್ನಲ್ಲೇ ಟ್ರೆಂಡಿಂಗ್ ಆಯ್ತು ‘RIP Twitter’ ಹ್ಯಾಷ್ ಟ್ಯಾಗ್: ಏನಿದು ಹೊಸ ವಿವಾದ? title=
Twitter

RIP Twitter: ಟ್ವಿಟರ್‌ನಲ್ಲಿ ಎಲೋನ್ ಮಸ್ಕ್ ಆಳ್ವಿಕೆ ಶುರುವಾದಾಗಿನಿಂದ ಭಾರೀ ಗೊಂದಲಮಯ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ಅನೇಕರನ್ನು ಕಂಪನಿ ವಜಾಗೊಳಿಸಿದೆ. ಇನ್ನೂ ಅನೇಕರು ಸಹವಾಸವೇ ಬೇಡ ಎಂದು ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಇವೆಲ್ಲದರ ಮಧ್ಯೆಯೇ RIP Twitter ಎಂಬ ಹ್ಯಾಷ್ ಟ್ಯಾಗ್ ವೈರಲ್ ಆಗುತ್ತಿದ್ದು, ಏನಿದು ಎಂಬ ಕುತೂಹಲ ಮನೆ ಮಾಡಿದೆ.

ಇದನ್ನೂ ಓದಿ: Elon Musk : ಟ್ವಿಟರ್ ಬಳಕೆದಾರರ ಬಳಿ ಕ್ಷಮೆಯಾಚಿಸಿದ ಎಲಾನ್ ಮಸ್ಕ್, ಯಾಕೆ ಗೊತ್ತಾ?

ಗಮನಾರ್ಹವಾಗಿ, ಕಳೆದ ತಿಂಗಳು ಎಲೋನ್ ಮಸ್ಕ್ ಟ್ವಿಟರ್ ನಲ್ಲಿ ಅಧಿಕಾರ ವಹಿಸಿದಾಗಿನಿಂದ, ಸುಮಾರು 50% ಸಿಬ್ಬಂದಿಯನ್ನು ವಜಾ ಮಾಡಿದ್ದಾರೆ. ಇದರ ಜೊತೆಗೆ ಮನೆಯಿಂದ ಕೆಲಸ ಮಾಡುವ ನೀತಿಯನ್ನು ಸಹ ರದ್ದುಗೊಳಿಸಿದ್ದಾರೆ. ಕೆಲಸದ ಅವಧಿಯನ್ನೂ ಸಹ ಹೆಚ್ಚಳ ಮಾಡಿದ್ದಾರೆ.

ಈ ಮಧ್ಯೆ ಟ್ವೀಟ್ ಮಾಡಿರುವ ಎಲೋನ್ ಮಸ್ಕ್, “ಟ್ವಿಟರ್ ಅನ್ನು ಸ್ಮಶಾನದಲ್ಲಿ ಸಮಾಧಿ ಮಾಡಿರುವುದನ್ನು ಕಾಣಬಹುದು” ಎಂಬ ರಹಸ್ಯವಾದ ಮೆಮೆ ಫೋಟೋವನ್ನು ಹಂಚಿಕೊಂಡಿದ್ದಾರೆ, ಇದೇ ಸಂದರ್ಭದಲ್ಲಿ ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ #RIPTwitter ಟ್ರೆಂಡಿಂಗ್ ಉದ್ಭವವಾಗಿದೆ.

ಇದನ್ನೂ ಓದಿ: ಆ ಒಂದು ನಕಲಿ ಖಾತೆಯ ಟ್ವೀಟ್ ನಿಂದಾಗಿ ಸಾವಿರಾರು ಕೋಟಿ ಕಳೆದುಕೊಂಡ Eli Lilly...!

ಇನ್ನು ಸಾಮಾಜಿಕ ಮಾಧ್ಯಮದಲ್ಲಿ "ಸಾವಿನ" ದುಃಖವನ್ನು ಹಂಚಿಕೊಳ್ಳುವಂತೆ ಮೆಮೆಗಳು ಹರಿದಾಡಿದ್ದು, ಕೆಲವೊಂದು ಇಲ್ಲಿವೆ.

 

 

 

 

 

 

 

 

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News