Apple: ಐಫೋನ್ 14 ಬಿಡುಗಡೆಯ ಬೆನ್ನಲ್ಲೇ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದ ಆ್ಯಪಲ್!

ಆ್ಯಪ್ ಸ್ಟೋರ್‌ನಲ್ಲಿ ಲಭ್ಯವಿರುವ Apps and In-App Purchasesಗಳ ಖರೀದಿ ಮೇಲೆ ದರ ಹೆಚ್ಚಿಸುವುದಾಗಿ ಆ್ಯಪಲ್ ಘೋಷಿಸಿದೆ.

Written by - Puttaraj K Alur | Last Updated : Sep 21, 2022, 12:11 PM IST
  • ಆ್ಯಪಲ್‍ನ ಹೊಸ ನಿರ್ಧಾರದಿಂದ ಕೋಟ್ಯಂತರ ಬಳಕೆದಾರರಿಗೆ ಶಾಕ್ ಉಂಟಾಗಿದೆ
  • ಆ್ಯಪ್ ಸ್ಟೋರ್‌ನಲ್ಲಿ ಲಭ್ಯವಿರುವ Apps and In-App Purchasesಗಳ ಖರೀದಿ ದರ ಹೆಚ್ಚಳ
  • ಆ್ಯಪಲ್‍ನ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿರುವ ಕೋಟ್ಯಂತರ ಬಳಕೆದಾರರು
Apple: ಐಫೋನ್ 14 ಬಿಡುಗಡೆಯ ಬೆನ್ನಲ್ಲೇ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದ ಆ್ಯಪಲ್! title=
ಕೋಟ್ಯಂತರ ಐಫೋನ್ ಬಳಕೆದಾರರಿಗೆ ಶಾಕ್!

ನವದೆಹಲಿ: ಟೆಕ್ ದೈತ್ಯ ಆ್ಯಪಲ್ ಸೆ.16ರಂದು ಐಫೋನ್ 14 ಸರಣಿಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿತು. iPhone 14, iPhone 14 Plus, iPhone 14 Pro ಮತ್ತು14 Pro Max 4 ಪ್ರಿಮಿಯಂ ಮಾದರಿಯ ಐಫೋನ್‍ಗಳನ್ನು ಬಿಡುಗಡೆ ಮಾಡಿ ಕೋಟ್ಯಂತರ ಅಭಿಮಾನಿಗಳಿಗೆ ಖುಷಿ ನೀಡಿತ್ತು. ಈಗಾಗಲೇ ಭಾರತ ಸೇರಿದಂತೆ ವಿಶ್ವದಾದ್ಯಂತ ಐಫೋನ್‍ಗಳ ಖರೀದಿ ಭರಾಟೆ ಜೋರಾಗಿದೆ. ಇದರ ನಡುವೆಯೇ ಆ್ಯಪಲ್ ತನ್ನ ಬಳಕೆದಾರರಿಗೆ ಶಾಕ್ ನೀಡಿದೆ.

ಆ್ಯಪಲ್ ಕಂಪನಿಯ ಹೊಸ ನಿರ್ಧಾರದಿಂದ ಕೋಟ್ಯಂತರ ಬಳಕೆದಾರರಿಗೆ ಶಾಕ್ ಆಗಿದೆ. ಹೊಸ ಮತ್ತು ಹಳೆಯ ಎಲ್ಲಾ ಉತ್ಪನ್ನಗಳ ಬಳಕೆದಾರರ ಮೇಲೂ ಈ ನಿರ್ಧಾರ ಪರಿಣಾಮ ಬೀರಬಹುದು. ಹಾಗಾದ್ರೆ ಆ್ಯಪಲ್ ಯಾವ ನಿರ್ಧಾರ  ತೆಗೆದುಕೊಂಡಿದೆ? ಇದರಿಂದ ಯಾರಿಗೆ ತೊಂದರೆಯಾಗುತ್ತದೆ? ಮತ್ತು ಕಂಪನಿಯ ಉದ್ದೇಶ ಏನಿರಬಹುದು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.

ಇದನ್ನೂ ಓದಿ: ಮೊಬೈಲ್‌ನಿಂದ MMS ಹೀಗೆ ಲೀಕ್‌ ಆಗುತ್ತೆ! ನಿಮ್ಮ ಈ ತಪ್ಪು ಜೀವನವನ್ನೇ ಹಾಳುಮಾಡುತ್ತೆ   

ಕೋಟ್ಯಂತರ ಬಳಕೆದಾರರಿಗೆ ದೊಡ್ಡ ಹೊಡೆತ!

ಐಫೋನ್ 14 ಬಿಡುಗಡೆ ಬೆನ್ನಲ್ಲಿಯೇ ಆ್ಯಪಲ್ ತನ್ನ ಕೋಟ್ಯಂತರ ಬಳಕೆದಾರರಿಗೆ ದೊಡ್ಡ ಹೊಡೆತ ನೀಡಿದೆ. ಆ್ಯಪ್ ಸ್ಟೋರ್‌ನಲ್ಲಿ ಲಭ್ಯವಿರುವ Apps and In-App Purchasesಗಳ ಖರೀದಿ ಮೇಲೆ ದರ ಹೆಚ್ಚಿಸುವುದಾಗಿ ಆ್ಯಪಲ್ ಘೋಷಿಸಿದೆ. ಅಂದರೆ ಇನ್ನುಮುಂದೆ ನೀವು ಕೆಲವು ಆ್ಯಪ್‍ಗಳು ಮತ್ತುin-app purchases ಆ್ಯಪ್‍ಗಳನ್ನು ಖರೀದಿಸಿದರೆ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಮುಂದಿನ ತಿಂಗಳಿನಿಂದಲೇ ಈ ಬೆಲೆ ಏರಿಕೆಯ ಬಿಸಿ ಆ್ಯಪಲ್ ಬಳಕೆದಾರರಿಗೆ ತಟ್ಟಲಿದೆ.  ಸ್ವಯಂ ನವೀಕರಿಸಬಹುದಾದ ಚಂದಾದಾರಿಕೆ(Auto-Renewable Subscriptions)ಗಳನ್ನು ಹೊರತುಪಡಿಸಿ ಎಲ್ಲಾ ಖರೀದಿಗಳ ಮೇಲೆ ಈ ನಿರ್ಧಾರ ಅನ್ವಯಿಸುತ್ತದೆ.

ಆ್ಯಪಲ್ ನಿರ್ಧಾರಕ್ಕೆ ಬಳಕೆದಾರರ ಅಸಮಾಧಾನ

ವರದಿಗಳ ಪ್ರಕಾರ ಆ್ಯಪಲ್‍ನ ಈ ಹೊಸ ನಿರ್ಧಾರವು ಪ್ರತಿಯೊಂದು ದೇಶಕ್ಕೂ ಅನ್ವಯವಾಗುತ್ತಿಲ್ಲ. ಈ ನಿರ್ಧಾರವನ್ನು ಅಕ್ಟೋಬರ್ 5 ರೊಳಗೆ ಜಾರಿಗೆ ತರಲಾಗುವುದು ಎಂದು ಆ್ಯಪಲ್‍ ತನ್ನ ಬ್ಲಾಗ್ ಪೋಸ್ಟ್‍ನಲ್ಲಿ ಹೇಳಿಕೊಂಡಿದೆ. ಈ ನಿರ್ಧಾರವನ್ನು ಚಿಲಿ, ಈಜಿಪ್ಟ್, ಜಪಾನ್, ಮಲೇಷ್ಯಾ, ಪಾಕಿಸ್ತಾನ, ಪೋಲೆಂಡ್, ದಕ್ಷಿಣ ಕೊರಿಯಾ, ಸ್ವೀಡನ್ ಮತ್ತು ವಿಯೆಟ್ನಾಂನಲ್ಲಿ ಜಾರಿಗೆ ತರಲಾಗುತ್ತಿದೆ. ಯೂರೋ ಕರೆನ್ಸಿಯನ್ನು ಬಳಸುವ ಪ್ರತಿಯೊಂದು ದೇಶವು ಈ ಬೆಲೆ ಏರಿಕೆಯ ಪರಿಣಾಮ ಅನುಭವಿಸಲಿವೆ. ಮುಂದಿನ ದಿನಗಳಲ್ಲಿ ಇದು ಎಲ್ಲಾ ದೇಶಗಳಿಗೂ ಅನ್ವಯವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:   ಚೈನೀಸ್ ಸ್ಮಾರ್ಟ್‌ಫೋನ್‌ಗಳಿಗೆ ಟಕ್ಕರ್ ನೀಡಿದ ಮೇಡ್ ಇನ್ ಇಂಡಿಯಾ ಸ್ಮಾರ್ಟ್‌ಫೋನ್, ಬೆಲೆಯೂ ಕಡಿಮೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News