Google versus OpenAI:ಕೆಲವೇ ದಿನಗಳಲ್ಲಿ ಬಳಕೆದಾರರಿಗೆ ಲಭ್ಯವಾಗಲಿದೆ ಚಾಟ್‌ಜಿಪಿಟಿ ಪ್ರತಿಸ್ಪರ್ಧಿ “ಬಾರ್ಡ್”

Google versus OpenAI:ಗೂಗಲ್ ತನ್ನ AI ತಂತ್ರಜ್ಞಾನದ ಬಾರ್ಡ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದು OpenAI ನ ಜನಪ್ರಿಯ ಭಾಷಾ ಮಾದರಿಯಾದ ChatGPT-3 ಗೆ ಪ್ರತಿಸ್ಪರ್ಧಿಯಾಗಿ ಹೊರ ಹೊಮ್ಮಲಿದೆ.  

Written by - Ranjitha R K | Last Updated : Feb 7, 2023, 04:20 PM IST
  • ಗೂಗಲ್ ತನ್ನ AI ತಂತ್ರಜ್ಞಾನದ ಬಾರ್ಡ್ ಅನ್ನು ಬಿಡುಗಡೆ
  • ಜನಪ್ರಿಯ ಭಾಷಾ ಮಾದರಿಯಾದ ChatGPT-3 ಪ್ರತಿಸ್ಪರ್ಧಿ
  • ಬಾರ್ಡ್ ಅನ್ನು "ಸಂಭಾಷಣಾ AI ಸೇವೆ" ಎಂದು ಕರೆದಿರುವ ಪಿಚೈ
Google versus OpenAI:ಕೆಲವೇ ದಿನಗಳಲ್ಲಿ ಬಳಕೆದಾರರಿಗೆ ಲಭ್ಯವಾಗಲಿದೆ ಚಾಟ್‌ಜಿಪಿಟಿ ಪ್ರತಿಸ್ಪರ್ಧಿ “ಬಾರ್ಡ್”  title=

Google versus OpenAI: ಗೂಗಲ್ ತನ್ನ AI ತಂತ್ರಜ್ಞಾನದ ಬಾರ್ಡ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದು OpenAI ನ ಜನಪ್ರಿಯ ಭಾಷಾ ಮಾದರಿಯಾದ ChatGPT-3 ಗೆ ಪ್ರತಿಸ್ಪರ್ಧಿಯಾಗಿ ಹೊರ ಹೊಮ್ಮಲಿದೆ. Google CEO ಸುಂದರ್ ಪಿಚೈ, ಅಧಿಕೃತ ಬ್ಲಾಗ್ ಪೋಸ್ಟ್‌ನಲ್ಲಿ, ಬಾರ್ಡ್ ಅನ್ನು "ಸಂಭಾಷಣಾ AI ಸೇವೆ" ಎಂದು ಕರೆದಿದ್ದಾರೆ. ಅಲ್ಲದೆ ಅದು ಉತ್ತಮ-ಗುಣಮಟ್ಟದ  ಸ್ಪಂದನೆ ನೀಡಲಿದೆ. ಮತ್ತು ಜಟಿಲ ವಿಷಯಗಳನ್ನು ಕೂಡಾ ಸರಳಿಕರಿಸುತ್ತದೆ ಎಂದು ಹೇಳಿದ್ದಾರೆ. 

ಮುಂಬರುವ ವಾರಗಳಲ್ಲಿ ಬಾರ್ಡ್ ಸಾರ್ವಜನಿಕರಿಗೆ ಹೆಚ್ಚು ವ್ಯಾಪಕವಾಗಿ ಲಭ್ಯವಾಗಲಿದೆ. ಪ್ರಸ್ತುತ ಇದನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ : ಅದ್ಭುತ ವೈಶಿಷ್ಟ್ಯಗಳೊಂದಿಗೆ ಇಂದು ಸಂಜೆ ಮಾರುಕಟ್ಟೆಗೆ ಕಾಲಿಡುತ್ತಿದೆ OnePlus Cloud 11

"ಬಾರ್ಡ್ ಸೃಜನಶೀಲತೆಗೆ ಒಂದು ಔಟ್‌ಲೆಟ್ ಆಗಿರಬಹುದು ಮತ್ತು ಕುತೂಹಲಕ್ಕಾಗಿ ಲಾಂಚ್‌ಪ್ಯಾಡ್ ಆಗಿರಬಹುದು ಎನ್ನಲಾಗಿದೆ. NASAದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್‌ನಿಂದ 9 ವರ್ಷದ ಮಗುವಿಗೆ ಹೊಸ ಆವಿಷ್ಕಾರಗಳನ್ನು ವಿವರಿಸಲು ಅಥವಾ ಫುಟ್‌ಬಾಲ್‌ನಲ್ಲಿನ ಅತ್ಯುತ್ತಮ ಸ್ಟ್ರೈಕರ್‌ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇದು ಸಹಾಯ ಮಾಡುತ್ತದೆ. ನಿಮ್ಮ ಕೌಶಲ್ಯಗಳನ್ನು  ಹೆಚ್ಚಿಸಲು ಇದು ಸಹಾಯವಾಗಲಿದೆ ಎಂದು ಪಿಚೈ ಬ್ಲಾಗ್ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ. 

ಬಾರ್ಡ್‌ನ ಸಾಮರ್ಥ್ಯಗಳ ಪೂರ್ಣ ಶ್ರೇಣಿಯನ್ನು ಇನ್ನೂ ನಿರ್ಧರಿಸಲಾಗಿಲ್ಲ. ಆದರೆ ಚಾಟ್‌ಬಾಟ್ OpenAI ನ ChatGPT ಯಂತೆಯೇ ಇರಲಿದೆ ಎಂದು ಹೇಳಲಾಗುತ್ತಿದೆ.  ಬೇಬಿ ಶವರ್ ಆಯೋಜಿಸುವುದು ಹೇಗೆ ಅಥವಾ ನಿರ್ದಿಷ್ಟ ಪದಾರ್ಥಗಳನ್ನು ಬಳಸಿ ಉತ್ತಮ ಅಡುಗೆ ತಯಾರಿಸುವುದು ಹೇಗೆ ಎನ್ನುವಂಥ  ಪ್ರಾಯೋಗಿಕ ಪ್ರಶ್ನೆಗಳನ್ನು ಬಳಕೆದಾರರು ಬಾರ್ಡ್‌ಗೆ ಕೇಳಬಹುದು ಎಂದು ಸ್ಕ್ರೀನ್‌ಶಾಟ್ ಮೂಲಕ ವಿವರಿಸಲಾಗಿದೆ. 

ಇದನ್ನೂ ಓದಿ : ಜಿಯೋ ಬಳಕೆದಾರರಿಗೆ ಬಂಪರ್: ಈ ಯೋಜನೆಗಳಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಫುಲ್ ಫ್ರೀ

ಆದರೆ  ಚಾಟ್‌ಜಿಪಿಟಿಗೆ ವ್ಯತಿರಿಕ್ತವಾಗಿ, ಬಾರ್ಡ್ ಉತ್ತಮ-ಗುಣಮಟ್ಟದ  ರಿಸಲ್ಟ್ ಒದಗಿಸಲು ವೆಬ್‌ನಿಂದ ಮಾಹಿತಿಯನ್ನು ಸೆಳೆಯುತ್ತದೆ" ಎಂದು ಪಿಚೈ ಹೇಳಿದ್ದಾರೆ. 

ಬಾರ್ಡ್ ಅನ್ನು LaMDA (Language Model for Dialogue Applications)  ನಿಂದ ನಡೆಸಲಾಗುತ್ತಿದೆ.  ಕಂಪನಿಯು ಆರಂಭದಲ್ಲಿ LaMDA ಯ  ಲೈಟ್ ವೆಯಿಟ್ ಮಾದರಿಯನ್ನು  ಬಿಡುಗಡೆ ಮಾಡುತ್ತಿದೆ ಎಂದು ಪಿಚೈ ತಿಳಿಸಿದ್ದಾರೆ. ಏಕೆಂದರೆ ಚಿಕ್ಕ ಮಾದರಿಗೆ ಗಣನೀಯವಾಗಿ ಕಡಿಮೆ ಕಂಪ್ಯೂಟಿಂಗ್ ಶಕ್ತಿಯ ಅಗತ್ಯವಿರುತ್ತದೆ. ಇದರಿಂದಾಗಿ ಬಾರ್ಡ್ ನ ಪ್ರಯೋಜನವನ್ನು ಹೆಚ್ಚು ಬಳಕೆದಾರರೂ ಪಡೆಯುವುದು ಸಾಧ್ಯವಾಗುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News