Vivo Holi Offer: ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ ಈ ಬಣ್ಣ ಬದಲಾಯಿಸುವ ಸ್ಮಾರ್ಟ್‌ಫೋನ್

Vivo Holi Offer: Vivo ಹೋಳಿ ಸಂದರ್ಭದಲ್ಲಿ ಬಳಕೆದಾರರಿಗೆ ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಆಕರ್ಷಕ ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನು ಘೋಷಿಸಿದೆ, ಇದರ ಲಾಭವನ್ನು ಪಡೆದುಕೊಳ್ಳುವ ಮೂಲಕ ನೀವು ಸ್ಮಾರ್ಟ್‌ಫೋನ್ ಅನ್ನು ಕಡಿಮೆ ವೆಚ್ಚದಲ್ಲಿ ಮನೆಗೆ ತೆಗೆದುಕೊಂಡು ಹೋಗಬಹುದು. ಈ ಕೊಡುಗೆಯ ಬಗ್ಗೆ ನಮಗೆ ವಿವರವಾಗಿ ತಿಳಿಯೋಣ.

Written by - Yashaswini V | Last Updated : Mar 14, 2022, 02:22 PM IST
  • ಬಣ್ಣಗಳ ಹಬ್ಬವನ್ನು ಇನ್ನಷ್ಟು ವಿಶೇಷವಾಗಿಸಲು ವಿವೋ ಹೋಳಿ ಆಫರ್ ( Vivo Holi Sale Offer) ಅನ್ನು ಘೋಷಿಸಿದೆ.
  • ವಿವೋ ಇಂಡಿಯಾ ( Vivo India)ದ ಈ ಕೊಡುಗೆಯ ಅಡಿಯಲ್ಲಿ, Vivo V23 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಮನೆಗೆ ಕೊಂಡೊಯ್ಯಬಹುದು.
  • ಬಣ್ಣ ಬದಲಾಯಿಸುವ Vivo V23 ಸರಣಿಯನ್ನು ಖರೀದಿಸಲು ಇದು ಉತ್ತಮ ಅವಕಾಶ.
Vivo Holi Offer: ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ ಈ ಬಣ್ಣ ಬದಲಾಯಿಸುವ ಸ್ಮಾರ್ಟ್‌ಫೋನ್  title=
Vivo Holi Offers

Vivo Holi Offer: ಬಣ್ಣಗಳ ಹಬ್ಬ ಹೋಳಿ ಆಚರಣೆಗಾಗಿ ಸಿದ್ಧತೆಗಳು ಜರುಗಿದೆ. ಈ ಸಂದರ್ಭದಲ್ಲಿ ಬಣ್ಣಗಳ ಹಬ್ಬವನ್ನು ಇನ್ನಷ್ಟು ವಿಶೇಷವಾಗಿಸಲು ವಿವೋ ಹೋಳಿ ಆಫರ್  (Vivo Holi Offer) ಅನ್ನು ಘೋಷಿಸಿದೆ.  ವಿವೋ ಇಂಡಿಯಾ ( Vivo India )ದ ಈ ಕೊಡುಗೆಯ ಅಡಿಯಲ್ಲಿ, Vivo V23 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು  ಅತಿ ಕಡಿಮೆ ಬೆಲೆಯಲ್ಲಿ ಮನೆಗೆ ಕೊಂಡೊಯ್ಯಬಹುದು. ಬಣ್ಣ ಬದಲಾಯಿಸುವ Vivo V23 ಸರಣಿಯನ್ನು ಖರೀದಿಸಲು ಇದು ಉತ್ತಮ ಅವಕಾಶವಾಗಿದ್ದು, ವಿವೋ ಹೋಳಿ ಆಫರ್ ಬಗ್ಗೆ ವಿವರವಾಗಿ ತಿಳಿಯಲು ಮುಂದೆ ಓದಿ...

ವಿವೋ ಹೋಳಿ ಆಫರ್ (Vivo Holi Offer) ಅನ್ನು ಘೋಷಿಸಿದ್ದು, ಹೋಳಿ ಸಂದರ್ಭದಲ್ಲಿ ಬಳಕೆದಾರರಿಗೆ ಭರ್ಜರಿ ಉಡುಗೊರೆಯನ್ನು ನೀಡಿದೆ. ಈ ಸಂದರ್ಭದಲ್ಲಿ, ಕಂಪನಿಯು ತನ್ನ ಬಣ್ಣ ಬದಲಾಯಿಸುವ ಐಷಾರಾಮಿ ಸ್ಮಾರ್ಟ್‌ಫೋನ್‌ಗಳಾದ Vivo V23 ಮತ್ತು V23 Pro ಮೇಲೆ ಆಕರ್ಷಕ ಕ್ಯಾಶ್‌ಬ್ಯಾಕ್ ಅನ್ನು ನೀಡುತ್ತಿದೆ. ನೀವು ಸಹ ಈ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ, ಇದು ನಿಮಗೆ ಉತ್ತಮ ಅವಕಾಶವಾಗಿದೆ. ನೀವು ವಿವೋ ಹೋಳಿ ಆಫರ್‌ನ ಲಾಭವನ್ನು ಪಡೆಯಲು ಬಯಸಿದರೆ, ಕಂಪನಿಯ ಈ ಕೊಡುಗೆಯನ್ನು ಮಾರ್ಚ್ 31 ರವರೆಗೆ ಪಡೆಯಬಹುದು. ನೀವು ಕಂಪನಿಯ ವಿವೋ ಇಂಡಿಯಾ ಇ-ಸ್ಟೋರ್ ಮತ್ತು ರಿಟೇಲ್ ಸ್ಟೋರ್ ಮೂಲಕ ಈ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಬಹುದು.

ಇದನ್ನೂ ಓದಿ- Cheapest AC: ಈ 5 ಅಗ್ಗದ ಎಸಿಗಳಿಗೆ ಡಿಮ್ಯಾಂಡಪ್ಪೋ... ಡಿಮ್ಯಾಂಡ್..!

Vivo ಹೋಳಿ ಆಫರ್‌ನಲ್ಲಿ ಕ್ಯಾಶ್‌ಬ್ಯಾಕ್ ಕೊಡುಗೆ:
Vivo V23 5G, Vivo V23 Pro 5G ಮತ್ತು Vivo V23e 5G ಸ್ಮಾರ್ಟ್‌ಫೋನ್‌ಗಳಲ್ಲಿ Vivo ಹೋಳಿ ಆಫರ್ ಅನ್ನು ಪಡೆಯಬಹುದು. ಸ್ಮಾರ್ಟ್ಫೋನ್ ಖರೀದಿಸಲು ನೀವು ICICI ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್  ಅಥವಾ IDFC ಫಸ್ಟ್ ಬ್ಯಾಂಕ್ ಕಾರ್ಡ್ ಅನ್ನು ಬಳಸಿದರೆ, ನೀವು ರೂ.3,500 ರ ನೇರ ಕ್ಯಾಶ್ಬ್ಯಾಕ್ (Cashback) ಪಡೆಯುತ್ತೀರಿ. ಅಷ್ಟೇ ಅಲ್ಲ, ಕ್ಯಾಶ್‌ಬ್ಯಾಕ್ ಜೊತೆಗೆ ಸ್ಮಾರ್ಟ್‌ಫೋನ್‌ನಲ್ಲಿ ಒಂದು ವರ್ಷದ ವಾರಂಟಿ ಮತ್ತು ಒಂದು ಬಾರಿ ಉಚಿತ ಸ್ಕ್ರೀನ್ ರಿಪ್ಲೇಸ್‌ಮೆಂಟ್ ಕೊಡುಗೆಯನ್ನು ಸಹ ನೀಡಲಾಗುತ್ತಿದೆ. 

ಇದನ್ನೂ ಓದಿ- Affordable EV Car: ಪೆಟ್ರೋಲ್ ಚಿಂತೆ ಬಿಟ್ಟುಬಿಡಿ, ಭಾರತಕ್ಕೆ ಬರಲಿದೆ ಅಗ್ಗದ ಎಲೆಕ್ಟ್ರಿಕ್ ಕಾರು

Vivo V23 ಸರಣಿಯ ಬೆಲೆ:
Vivo V23 ನ 8GB + 128GB ಸ್ಟೋರೇಜ್ ಮಾಡೆಲ್ ಬೆಲೆ 29,990 ರೂ. 12GB + 256GB ಸ್ಟೋರೇಜ್ ಮಾದರಿಯ ಬೆಲೆ 34,990 ರೂ. Vivo V23 Pro 5G ನ 8GB + 128GB ಮಾದರಿಯ ಬೆಲೆ ರೂ 38,990 ಮತ್ತು 12GB + 256GB ಮಾದರಿಯ ಬೆಲೆ ರೂ 43,990. ಅದರ 12GB + 256GB ಸ್ಟೋರೇಜ್ ರೂಪಾಂತರವು ರೂ. 43,990 ಗೆ ಲಭ್ಯವಿರುತ್ತದೆ. ಅದೇ ಸಮಯದಲ್ಲಿ, Vivo V23e 5G ನ 8GB + 128GB ಮಾದರಿಯ ಬೆಲೆ 25,990 ರೂ. ಆಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News