Nuclear Weapon Race: ತಜ್ಞರ ಪ್ರಕಾರ, ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಆರಂಭವಾದಾಗಿನಿಂದ, ಪರಸ್ಪರ ಪರಮಾಣು ಯುದ್ಧದ ಎಚ್ಚರಿಕೆಗಳನ್ನು ಹಲವು ಬಾರಿ ನೀಡಲಾಗಿದೆ. ಅವರ ಪ್ರಕಾರ, ಒಂದೇ ಒಂದು ತಪ್ಪು ನಡೆದುಹೋಗಿ ಒಂದು ವೇಳೆ ಪರಮಾಣು ಯುದ್ಧ ಆರಂಭಗೊಂಡರೆ ಅಲ್ಲಿಗೆ ಇಡೀ ಮಾನವ ಕುಲವೆ ಅಂತ್ಯವಾಗುತ್ತದೆ.
Weapons of Mass Destruction: ಸಮೂಹ ನಾಶಕ ಶಸ್ತ್ರಾಸ್ತ್ರಗಳ ಅಭಿವೃದ್ಧಿ, ಹೊಂದುವುದು ಹಾಗೂ ಬಳಸುವುದನ್ನು ಅಂತಾರಾಷ್ಟ್ರೀಯ ಕಾನೂನುಗಳು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತವೆ. ಹಲವಾರು ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ಒಪ್ಪಂದಗಳು ಸಮೂಹ ನಾಶಕ ಶಸ್ತ್ರಾಸ್ತ್ರಗಳ ಅಭಿವೃದ್ಧಿಯನ್ನು ನಿರ್ಬಂಧಿಸುತ್ತವೆ.
ಉಕ್ರೇನ್ ಸಂಘರ್ಷವನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಬೇಕು ಮತ್ತು ಪರಮಾಣು ಆಯ್ಕೆಯನ್ನು ಯಾವುದೇ ಕಡೆಯಿಂದ ಆಶ್ರಯಿಸಬಾರದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ರಷ್ಯಾದ ಸಹವರ್ತಿ ಸೆರ್ಗೆಯ್ ಶೋಯಿಗು ಅವರಿಗೆ ಹೇಳಿದ್ದಾರೆ.
ನ್ಯೂಯಾರ್ಕ್‍ನಲ್ಲಿ ನಡೆದ ಡೆಮಾಕ್ರಟಿಕ್ ಪಕ್ಷದ ನಿಧಿಸಂಗ್ರಹಣೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಅಮೆರಿಕ ಅಧ್ಯಕ್ಷ ಜೋ ಬಿಡೆನ್, ‘1962ರಲ್ಲಿ ಕೆನಡಿ ಮತ್ತು ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟಿನ ನಂತರ ನಾವು ಆರ್ಮಗೆಡ್ಡೋನ್ ನಿರೀಕ್ಷೆಯನ್ನು ಎದುರಿಸಿಲ್ಲ’ವೆಂದು ಹೇಳಿದ್ದಾರೆ.
China Rapidly Increasing Its Nuclear Capacity: ಪರಮಾಣು ಶಸ್ತ್ರಾಸ್ತ್ರಗಳ ಕುರಿತು ಚೀನಾದಿಂದ ಬಂದ ಇತ್ತೀಚಿನ ಒಂದು ವರದಿ ಇಡೀ ಜಗತ್ತನ್ನೇ ಚಿಂತೆಗೀಡು ಮಾಡಿದೆ. ತನ್ನ ಮರಭೂಮಿಗಳಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಮರೆಮಾಚಲು ಚೀನಾ ಅಡಗು ತಾಣಗಳನ್ನು ನಿರ್ಮಿಸುತ್ತಿದೆ ಎಂದು ತಿಳಿದುಬಂದಿದೆ.
2018 ಕ್ಕೆ ಹೋಲಿಸಿದರೆ 2019 ರ ಆರಂಭದಲ್ಲಿ ಆರು ದೇಶಗಳು ತಮ್ಮ ಶಸ್ತ್ರಾಗಾರದಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿವೆ, ಮತ್ತೆ ಕೆಲವು ಕಡಿಮೆ ಮಾಡಿವೆ. ಆದರೆ, ಚೀನಾ, ಪಾಕಿಸ್ತಾನ, ಇಸ್ರೇಲ್ ಮತ್ತು ಉತ್ತರ ಕೊರಿಯಾ ಎಂಬ ನಾಲ್ಕು ದೇಶಗಳು ಬಾಂಬುಗಳ ಸಂಖ್ಯೆಯನ್ನು ಹೆಚ್ಚಿಸಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.