WhatsApp Blocked: ಈ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ ವಾಟ್ಸಾಪ್, ನಿಮ್ಮ ಫೋನ್ ಪಟ್ಟಿಯಲ್ಲಿದೆಯೇ?

WhatsApp Blocked: ಅನೇಕ ಐಫೋನ್‌ಗಳು ಸೇರಿದಂತೆ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ. ಅಂತಹ ಫೋನ್‌ಗಳ ಸಂಪೂರ್ಣ ಪಟ್ಟಿಯನ್ನು ನೋಡೋಣ ...

Written by - Yashaswini V | Last Updated : Oct 1, 2021, 09:00 AM IST
  • ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ
  • ಅನೇಕ ಐಫೋನ್‌ಗಳಲ್ಲೂ ಕೂಡ WhatsApp ಕಾರ್ಯನಿರ್ವಹಿಸುವುದಿಲ್ಲ
  • ಆಂಡ್ರಾಯ್ಡ್ 4.0 ಚಾಲನೆಯಲ್ಲಿರುವ ಸಾಧನಗಳಲ್ಲಿ WhatsApp ಕಾರ್ಯನಿರ್ವಹಿಸುವುದಿಲ್ಲ
WhatsApp Blocked: ಈ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ ವಾಟ್ಸಾಪ್, ನಿಮ್ಮ ಫೋನ್ ಪಟ್ಟಿಯಲ್ಲಿದೆಯೇ?  title=
WhatsApp Block: ಈ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ನಿರ್ಬಂಧ

WhatsApp: ವಾಟ್ಸಾಪ್ ನಿರ್ಬಂಧಿಸಲಾಗಿದೆ! (Whatsapp Blocked) ಎಂಬ ಇಂತಹ ಸಂದೇಶವನ್ನು ಹಲವು ಮೊಬೈಲ್ ಫೋನುಗಳಲ್ಲಿ ಕಾಣಬಹುದು. ಆಪಲ್‌ನಂತಹ ಫೋನ್‌ಗಳಿಂದ ಹಿಡಿದು ಅನೇಕ ದೊಡ್ಡ ಸ್ಮಾರ್ಟ್‌ಫೋನ್‌ಗಳಲ್ಲಿ WhatsApp ಕಾರ್ಯನಿರ್ವಹಿಸುವುದಿಲ್ಲ. ವಾಟ್ಸಾಪ್ ಹಲವು ಮೆಸೇಜಿಂಗ್ ಆಪ್‌ಗಳನ್ನು ಹಿಂದಿಕ್ಕಿದೆ. ಇದು ಪ್ರತಿದಿನ 2 ದಶಲಕ್ಷಕ್ಕೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ. 2014 ರಲ್ಲಿ ವಾಟ್ಸಾಪ್ ಅನ್ನು ಫೇಸ್‌ಬುಕ್ ಸ್ವಾಧೀನಪಡಿಸಿಕೊಂಡ ನಂತರ, ಇದರ ಬಳಕೆದಾರರ ಸಂಖ್ಯೆ ಹೆಚ್ಚಾಯಿತು. ವಾಟ್ಸಾಪ್ ಅನ್ನು ಹಲವು ದೇಶಗಳಲ್ಲಿ ಬಳಸಲಾಗುತ್ತದೆ ಮತ್ತು ಆಂಡ್ರಾಯ್ಡ್, ಐಒಎಸ್ ಮತ್ತು ಕೈಓಓಎಸ್ ಸೇರಿದಂತೆ ವಿವಿಧ ಸಾಧನಗಳಲ್ಲಿ ಇದು ಬೆಂಬಲಿತವಾಗಿದೆ. ಆದರೆ ಯಾವುದೇ ಸಾಧನವು ಶಾಶ್ವತವಾಗಿ ಹಾರ್ಡ್‌ವೇರ್ ಬೆಂಬಲವನ್ನು ಪಡೆಯುವುದಿಲ್ಲ ಮತ್ತು WhatsApp ಅದಕ್ಕೆ ಭಿನ್ನವಾಗಿರುವುದಿಲ್ಲ. ವಾಟ್ಸ್‌ಆ್ಯಪ್ ನವೆಂಬರ್‌ನಲ್ಲಿ ಕೆಲವು ಫೋನ್‌ಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ ಎಂಬ ಸುದ್ದಿ ಬರುತ್ತಿದೆ. 

Whatsapp Blocked: ಯಾರ ಮೇಲೆ ಪರಿಣಾಮ?
ನವೆಂಬರ್ 2021 ರಿಂದ, ವಾಟ್ಸಾಪ್ ಹಳೆಯ ಆಂಡ್ರಾಯ್ಡ್ 4.0 (Android) ಅಥವಾ ಐಸ್ ಕ್ರೀಮ್ ಸ್ಯಾಂಡ್‌ವಿಚ್ ಚಾಲನೆಯಲ್ಲಿರುವ ಸಾಧನಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಇದರರ್ಥ ನವೆಂಬರ್‌ನಲ್ಲಿ ಆಂಡ್ರಾಯ್ಡ್ 4.0 ಚಾಲನೆಯಲ್ಲಿರುವ ಹಳೆಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ (Smartphone) ಹೊಂದಿರುವ ಬಳಕೆದಾರರು ಇನ್ನು ಮುಂದೆ ಸೇವೆಯನ್ನು ಬಳಸಲು ಸಾಧ್ಯವಾಗುವುದಿಲ್ಲ ಮತ್ತು ನವೀಕರಣಗಳನ್ನು ಪಡೆಯುವುದನ್ನು ನಿಲ್ಲಿಸುತ್ತಾರೆ. ವಾಟ್ಸಾಪ್ ಆಂಡ್ರಾಯ್ಡ್ 4.1 ಅಥವಾ ಆಂಡ್ರಾಯ್ಡ್ ಜೆಲ್ಲಿ ಬೀನ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರರ್ಥ ಹಳೆಯ ಸಾಧನಗಳನ್ನು ಹೊಂದಿರುವವರು ಆದರೆ ಅದರಲ್ಲಿ ಜೆಲ್ಲಿ ಬೀನ್ ಇದ್ದರೆ, ನಂತರ ಅವರು ವಾಟ್ಸಾಪ್ ಬಳಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ- Motorola's Tablet: ಕಡಿಮೆ ಬೆಲೆಯಲ್ಲಿ ಸಿಗಲಿದೆ ಹಲವು ವೈಶಿಷ್ಟ್ಯಗಳು

ಓಎಸ್ 4.0.4 ಮತ್ತು ಅದಕ್ಕಿಂತ ಹಳೆಯ ಆಂಡ್ರಾಯ್ಡ್ ಫೋನ್‌ಗಳನ್ನು ವಾಟ್ಸ್‌ಆ್ಯಪ್ (Whatsapp) ಇನ್ನು ಮುಂದೆ ನವೆಂಬರ್ 1, 2021 ರಿಂದ ಬೆಂಬಲಿಸುವುದಿಲ್ಲ. ದಯವಿಟ್ಟು ಬೆಂಬಲಿತ ಸಾಧನಕ್ಕೆ ಬದಲಿಸಿ ಅಥವಾ ಅದಕ್ಕೂ ಮೊದಲು ನಿಮ್ಮ ಚಾಟ್ ಇತಿಹಾಸವನ್ನು ಉಳಿಸಿ ಎಂದು ಕಂಪನಿ ಹೇಳುತ್ತದೆ.

Whatsapp Blocked:ಬಾಧಿತ ಫೋನ್‌ಗಳ ಪಟ್ಟಿ
ನೀವು ಗ್ಯಾಲಕ್ಸಿ S3 ಅಥವಾ LG Optimus L3, Galaxy Core, Huawei Ascend G740 ಮತ್ತು ಇತರ ರೀತಿಯ ಸಾಧನಗಳಂತಹ ಹಳೆಯ ಸ್ಮಾರ್ಟ್‌ಫೋನ್ ಹೊಂದಿದ್ದರೆ, ಆಂಡ್ರಾಯ್ಡ್ 4.1 ಗೆ ಅಪ್‌ಗ್ರೇಡ್ ಈ ಸಾಧನಗಳಲ್ಲಿ ಲಭ್ಯವಿಲ್ಲದ ಕಾರಣ ನೀವು ಏನನ್ನೂ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಒಂದೇ ಒಂದು ಆಯ್ಕೆ ಇದೆ, ಅಂದರೆ ಹೊಸ ಸ್ಮಾರ್ಟ್ ಫೋನ್ ಖರೀದಿಸುವುದು. ಐಫೋನ್ 4 ಎಸ್ ಅಥವಾ ಹಿಂದಿನ ಮಾದರಿಗಳ ಬಳಕೆದಾರರು ಸಂದೇಶ ಸೇವೆಯನ್ನು ಬಳಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ನವೆಂಬರ್ 1, 2021 ರಿಂದ ಐಒಎಸ್ 10 ಮತ್ತು ಅದಕ್ಕಿಂತ ಹೆಚ್ಚಿನದನ್ನು ಮಾತ್ರ ಅಧಿಕೃತವಾಗಿ ಬೆಂಬಲಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ- Earn From Facebook: ಫೇಸ್‌ಬುಕ್‌ನಿಂದ ಗಳಿಸುವ ಅವಕಾಶ, ಭಾರತದಲ್ಲಿ ಬಿಡುಗಡೆಯಾಗಿದೆ ಈ ವೈಶಿಷ್ಟ್ಯ

Whatsapp Blocked: ಏನು ಪರಿಹಾರ?
ನೀವು ಆಂಡ್ರಾಯ್ಡ್ 4.0 ಹೊರತುಪಡಿಸಿ ಸಿಸ್ಟಮ್ ಅಪ್‌ಡೇಟ್ ಹೊಂದಿದ್ದರೆ, ಆಪ್ ಬಳಸುವುದನ್ನು ಮುಂದುವರಿಸಲು ನೀವು ಆಪರೇಟಿಂಗ್ ಸಿಸ್ಟಂ ಅನ್ನು ಅಪ್‌ಗ್ರೇಡ್ ಮಾಡಬೇಕು. ಹಳೆಯ ಐಫೋನ್ ಬಳಕೆದಾರರಿಗೆ, ವಾಟ್ಸಾಪ್ ಆಂಡ್ರಾಯ್ಡ್‌ನಿಂದ ಐಒಎಸ್‌ಗೆ ಚಾಟ್ ಮೈಗ್ರೇಶನ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ (ಐಒಎಸ್‌ನಿಂದ ಆಂಡ್ರಾಯ್ಡ್‌ಗೆ ವರ್ಗಾಯಿಸುವ ಸಾಮರ್ಥ್ಯವನ್ನು ಬಿಡುಗಡೆ ಮಾಡಿದ ನಂತರ) ಇದು ಸ್ವಿಚ್ ಮಾಡಲು ಬಯಸುವ ಬಳಕೆದಾರರಿಗೆ ಉಪಯೋಗಕ್ಕೆ ಬರಬಹುದು.

ವಾಟ್ಸಾಪ್ ನಿರ್ಬಂಧಿಸಲಾಗಿದೆ: ಈ ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ
ಆಪಲ್ : iPhone SE, iPhone 6S, iPhone 6S Plus

ಸ್ಯಾಮ್‌ಸಂಗ್ : The Samsung Galaxy Trend Lite, Galaxy Trend II, Galaxy SII, Galaxy S3 mini, Galaxy Xcover 2, Galaxy Core, Galaxy Ace 2

ಎಲ್ಜಿ : The LG Lucid 2, Optimus F7, Optimus F5, Optimus L3 II Dual, Optimus F5, Optimus L5, Optimus L5 II, Optimus L5 Dual, Optimus L3 II, Optimus L7, Optimus L7 II Dual, Optimus L7 II, Optimus F6, Enact, Optimus L4 II Dual, Optimus F3, Optimus L4 II, Optimus L2 II, Optimus Nitro HD and 4X HD, Optimus F3Q

ZTE : ZTE Grand S Flex, ZTE V956, Grand X Quad V987, Grand Memo

ಇದನ್ನೂ ಓದಿ- Flipkart Curtain Raiser Deals: ಐಫೋನ್ ಅನ್ನು 26,000 ರೂ.ಗೆ ಖರೀದಿಸುವ ಅವಕಾಶ, ಈ ಫೋನ್‌ಗಳ ಮೇಲೂ ಸಿಗಲಿದೆ ರಿಯಾಯಿತಿ

ಹುವಾವೇ : Huawei Ascend G740, Ascend Mate, Ascend D Quad XL, Ascend D1 Quad XL, Ascend P1 S, Ascend D2

ಸೋನಿ : The Sony Xperia Miro, Sony Xperia Neo L, Xperia Arc S

ಇತರ ಫೋನ್‌ಗಳು:  Alcatel One Touch Evo 7, Archos 53 Platinum, HTC Desire 500, Caterpillar Cat B15, Wiko Cink Five, Wiko Darknight, Lenovo A820, UMi X2, Faea F1, THL W8

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News