ಚಿಕ್ಕಮಗಳೂರಿನಲ್ಲಿ ನಿಧಿಗಾಗಿ ಸಿಡಿಲು ಬಡಿದ ಮರ ಹಾಗೂ 15 ಅಡಿ ಅಗಲದ ಪ್ರದೇಶಕ್ಕೆ ಮೂರು ಬಣ್ಣದ ದಾರದಲ್ಲಿ ಘೋರ ಪೂಜೆ ಮಾಡಲಾಗಿದೆ. ಜೀವಂತ ಕೋಳಿ. ಎಳೆ ಕುಂಬಳಕಾಯಿ. ನಿಂಬೆಹಣ್ಣು-ಮೊಟ್ಟೆ-ಅರಿಶಿನ-ಕುಂಕುಮ. 10 ಅಡಿ ಎತ್ತರದ ಹುತ್ತದ ಮಣ್ಣು ಇಟ್ಟು ಕಾಡಿನ ಮಧ್ಯೆ ವಾಮಾಚಾರದ ಪೂಜೆ ಮಾಡಿ ದಿಗ್ಭಂದನ ಮಾಡಲಾಗಿದೆ.. ಜೊತೆಗೆ, ಸಿರೇಂಜ್, ಎಣ್ಣೆ, ಮಿಕ್ಸಿಂಗ್ಗೆ ನೀರು. ಆಲ್ ಮೋಸ್ಟ್ ನಿಮಗೆ ಅರ್ಥ ಆಗಿದೆ ಅನ್ನಿಸುತ್ತೆ. ಮಲೆನಾಡಲ್ಲಿ ನಿಧಿಗಾಗಿ ಗುಂಡಿ ತೋಡಿದ್ದಾರೆ.