ಚಿಕ್ಕಬಳ್ಳಾಪುರದ ಗ್ರಾಮಗಳಲ್ಲಿ ಪ್ರದೀಪ್ ಈಶ್ವರ್‌ ಮತಬೇಟೆ

  • Zee Media Bureau
  • Apr 30, 2023, 02:13 PM IST

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ತಮ್ಮ ಹುಟ್ಟೂರು ಪೆರೇಸಂದ್ರ ಮತ್ತು ಸುತ್ತಮುತ್ತ ಗ್ರಾಮಗಳಲ್ಲಿ‌ ಮತಯಾಚನೆ ಮಾಡಿದರು. ಅಪ್ಪ ಅಮ್ಮಂದಿರ ಸಮಾನರಾದವರ ಕಾಲಿಗೆ ಎರಗಿ ಆಶೀರ್ವಾದ ಪಡೆದರು. ಗ್ರಾಮಗಳಿಗೆ ಪ್ರವೇಶ ನೀಡುತಿದ್ದಂತೆ ಮನೆ ಮಂದಿಯೆಲ್ಲಾ ಹಾರ ಹಿಡಿದು ಆರತಿ ಮಾಡಿ ಸ್ವಾಗತಿಸಿದರು. ಕೆಲ ಹಿರಿಯರಂತೂ ಪ್ರದೀಪ್ ಊರಿಗೆ ಬಂದಾಕ್ಷಣ ಮನೆಗೆ ಮಗ ಬಂದಂತೆ ಭಾವಿಸಿ ಗಲ್ಲ ಹಿಡಿದು ಮಾತನಾಡಿಸಿದರು.

Trending News