ಶಾರ್ಜಾ ಮೈದಾನದಲ್ಲಿ ನಡೆದ 19 ವರ್ಷದೊಳಗಿನವರ ಏಷ್ಯಾ ಕಪ್‌ನಲ್ಲಿ 13 ವರ್ಷದ ವೈಭವ್ ಸೂರ್ಯವಂಶಿ ಯುಎಇ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಯುಎಇ ನೀಡಿದ 138 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ವೈಭವ್ ಸೂರ್ಯವಂಶಿ ಅಜೇಯ ಅರ್ಧಶತಕ ಸಿಡಿಸಿದರು. ಕ್ರೀಸ್‌ಗೆ ಕಾಲಿಟ್ಟು ತಾನು ಎದುರಿಸಿದ ಮೊದಲ ಎಸೆತದಲ್ಲಿಯೇವೈಭವ್ ಸಿಕ್ಸರ್ ಬಾರಿಸಿದರು. ವೈಭವ್ ಅವರ ಈ ಸಿಡಿಲಬ್ಬರ ನೋಡಿದ ಯುಎಇ ಬೌಲರ್‌ಗಳು ಕೂಡ ದಂಗಾದರು.