ಕ್ಯಾನ್ಸರ್ ಕೂಡ ಬಾರದಂತೆ ತಡೆಯುವ ʼಮ್ಯಾಜಿಕ್‌ʼ ಹಣ್ಣು; ಮಧುಮೇಹಕ್ಕೂ ದಿವ್ಯೌಷಧಿ... ಮುಂಜಾನೆ ಎದ್ದಂತೆ ತಿಂದರೆ ದೇಹದಲ್ಲಿ ಪವಾಡವೇ ಆಗುವುದು

magic fruit benefits: ಈ ಹಣ್ಣಿನಲ್ಲಿ ಗ್ಲೈಕೊಪ್ರೊಟೀನ್ ಎಂಬ ಅಣುವಿದೆ. ಈ ಹಣ್ಣನ್ನು ತಿಂದಾಗ ಈ ಅಣು ನಾಲಿಗೆಯ ರುಚಿ ಮೊಗ್ಗುಗಳಿಗೆ ಅಂಟಿಕೊಳ್ಳುತ್ತದೆ. ಹಾಗಾಗಿ ಹುಳಿ ಅಥವಾ ಖಾರ ತಿಂದರೂ ಆ ರುಚಿಯ ಹೊರತಾಗಿ ಸಿಹಿ ರುಚಿಯೇ ಅನಿಸುತ್ತದೆ. ಅರ್ಧ ಘಂಟೆಯ ನಂತರ ಅಣು ಬಿಡುತ್ತದೆ.

Written by - Bhavishya Shetty | Last Updated : Dec 18, 2024, 07:41 PM IST
    • ಆಫ್ರಿಕಾದಲ್ಲಿ ಹೆಚ್ಚಾಗಿ ಕಂಡುಬರುವ ಈ ಹಣ್ಣು
    • ಈ ಹಣ್ಣನ್ನು ತಿಂದ ನಂತರ 30 ನಿಮಿಷಗಳ ಕಾಲ ಏನು ತಿಂದರೂ ಅದು ಸಿಹಿಯೇ
    • ಕಹಿ, ಹುಳಿ ತಿಂದರೂ ಕೂಡ ಅದು ಸಿಹಿಯಾಗಿರುತ್ತದೆ
ಕ್ಯಾನ್ಸರ್ ಕೂಡ ಬಾರದಂತೆ ತಡೆಯುವ ʼಮ್ಯಾಜಿಕ್‌ʼ ಹಣ್ಣು; ಮಧುಮೇಹಕ್ಕೂ ದಿವ್ಯೌಷಧಿ... ಮುಂಜಾನೆ ಎದ್ದಂತೆ ತಿಂದರೆ ದೇಹದಲ್ಲಿ ಪವಾಡವೇ ಆಗುವುದು title=
magic fruit benefits

Miracle Fruit : ನಿಮಗೆ ಬೆಟ್ಟದ ನೆಲ್ಲಿಕಾಯಿ ಗೊತ್ತಲ್ಲವೇ!? ಹುಳಿಯಾದರೂ ತಿಂದ ನಂತರ ನೀರು ಕುಡಿದರೆ ಬಾಯೆಲ್ಲಾ ಸಿಹಿಯಾಗಿರುತ್ತದೆ. ನಾವಿಂದು ತಿಳಿಸಿಕೊಡಲಿರುವ ಹಣ್ಣಿನ ಸ್ವಭಾವವೂ ಅಂತಹದ್ದೇ... ಈ ಹಣ್ಣು ವಿದೇಶಗಳಲ್ಲಿ ಹೆಚ್ಚಾಗಿ ಲಭ್ಯವಿರುತ್ತದೆ. ಇದನ್ನು ಮಿರಾಕಲ್‌ ಫ್ರೂಟ್‌ ಅಥವಾ ಮಿರಾಕಲ್ ಬೆರ್ರಿ, ಮ್ಯಾಜಿಕ್ ಬೆರ್ರಿ, ‌ಸ್ವೀಟ್ ಬೆರ್ರಿ ಎಂದು ಕರೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಸಿನ್ಸೆಪಾಲಮ್ ಡಲ್ಸಿಫಿಕಮ್.

ಆಫ್ರಿಕಾದಲ್ಲಿ ಹೆಚ್ಚಾಗಿ ಕಂಡುಬರುವ ಈ ಹಣ್ಣು ಇದು ತಿನ್ನಲು ಸ್ವಲ್ಪ ಸಿಹಿಯಾಗಿರುತ್ತದೆ. ಇನ್ನು ಈ ಹಣ್ಣನ್ನು ತಿಂದ ನಂತರ 30 ನಿಮಿಷಗಳ ಕಾಲ ಏನು ತಿಂದರೂ ಅದು ಸಿಹಿಯಾಗಿಯೇ ಇರುತ್ತದೆ. ಕಹಿ, ಹುಳಿ ತಿಂದರೂ ಕೂಡ ಅದು ಸಿಹಿಯಾಗಿರುತ್ತದೆ. ಅದಕ್ಕೊಂದು ವಿಶೇಷ ಕಾರಣವಿದೆ.

ಇದನ್ನೂ ಓದಿ: ಪಿಎಫ್ ಖಾತೆದಾರರಿಗೆ ಭರ್ಜರಿ ಲಾಭ !ಇಡಿಎಲ್ಐ ಮೂಲಕ ಸಿಗಲಿದೆ ಹೆಚ್ಚುವರಿ 7 ಲಕ್ಷ

ಈ ಹಣ್ಣಿನಲ್ಲಿ ಗ್ಲೈಕೊಪ್ರೊಟೀನ್ ಎಂಬ ಅಣುವಿದೆ. ಈ ಹಣ್ಣನ್ನು ತಿಂದಾಗ ಈ ಅಣು ನಾಲಿಗೆಯ ರುಚಿ ಮೊಗ್ಗುಗಳಿಗೆ ಅಂಟಿಕೊಳ್ಳುತ್ತದೆ. ಹಾಗಾಗಿ ಹುಳಿ ಅಥವಾ ಖಾರ ತಿಂದರೂ ಆ ರುಚಿಯ ಹೊರತಾಗಿ ಸಿಹಿ ರುಚಿಯೇ ಅನಿಸುತ್ತದೆ. ಅರ್ಧ ಘಂಟೆಯ ನಂತರ ಅಣು ಬಿಡುತ್ತದೆ.

ಮೂಲತಃ ಪಶ್ಚಿಮ ಆಫ್ರಿಕಾದಲ್ಲಿ ಬೆಳೆಯುವ ಈ ಹಣ್ಣಿನ ಬಗ್ಗೆ ಅನೇಕರಿಗೆ ತಿಳಿದೇ ಇಲ್ಲ. 18ನೇ ಶತಮಾನದವರೆಗೆ ಇದನ್ನು ಅಲ್ಲಿನ ಜನರಷ್ಟೆ ತಿನ್ನುತ್ತಿದ್ದರು. ಆ ನಂತರ ಯುರೋಪಿಯನ್ ಚೆವಲಿಯರ್ ಈ ಹಣ್ಣನ್ನು ಜಗತ್ತಿಗೆ ಪರಿಚಯಿಸಿದರು.

ಒಳಗೆ ಒಂದೇ ಬೀಜವಿರುವ ಈ ಹಣ್ಣನ್ನು ಅಮೆರಿಕನ್ನರು ಬಳಸಲಾರಂಭಿಸಿದ್ದು 1980ರಿಂದ. ಈ ಹಣ್ಣಿನ ಬಗ್ಗೆ ಪ್ರಚಾರದ ಕೊರತೆಯಿಂದಾಗಿ, ಇದನ್ನು ಕೆಲವೇ ದೇಶಗಳಲ್ಲಿ ಬೆಳೆಸಲಾಗುತ್ತದೆ.

ಈ ಮ್ಯಾಜಿಕ್‌ ಹಣ್ಣನ್ನು ಹಲವಾರು ಔಷಧಗಳಲ್ಲಿ ಬಳಸಲಾಗುತ್ತದೆ. ವರದಿಯ ಪ್ರಕಾರ, ಈ ಹಣ್ಣನ್ನು ನೈಜೀರಿಯಾದಲ್ಲಿ ಮಧುಮೇಹ ಮತ್ತು ಅಸ್ತಮಾದಂತಹ ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಇದಲ್ಲದೆ, ಕ್ಯಾನ್ಸರ್ ಮತ್ತು ಪುರುಷ ದುರ್ಬಲತೆಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.

ಇದನ್ನೂ ಓದಿ: ಮೊಳಕೆ ಬರಿಸಿದ ಈ ಕಾಳನ್ನು ಖಾಲಿ ಹೊಟ್ಟೆಗೆ ತಿನ್ನಿ: ಕ್ಷಣಾರ್ಧದಲ್ಲಿ ಶುಗರ್‌ ಸಂಪೂರ್ಣ ಕಂಟ್ರೋಲ್‌ ಬರುವುದು! ಮತ್ಯಾವತ್ತೂ ಹೆಚ್ಚಾಗೋದಿಲ್ಲ

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಾಗಿಲ್ಲ. ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ಪರಿಣಿತರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್‌ ಈ ಮಾಹಿತಿಯ ಜವಾಬ್ದಾರಿಯನ್ನು ಪಡೆದುಕೊಳ್ಳುವುದಿಲ್ಲ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News