ಕೋಟೆಗಳ ನಾಡು ಚಿತ್ರದುರ್ಗ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ಸಮಾವೇಶ ಮಾಡುತ್ತಿದ್ದರೆ, ಅತ್ತ ಗ್ರಾಮೀಣ ಭಾಗಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ವೀರೇಂದ್ರ ಪಪ್ಪಿ "ನನ್ನ ಬೂತ್ ಗೆದ್ದರೆ ನನ್ನ ಕ್ಷೇತ್ರ ಗೆದ್ದಂತೆ" ಎಂದು ಗ್ರಾಮದಲ್ಲಿ ಮತದಾರರ ಮನ ಸೆಳೆದರು. ಎಲ್ಲಿ ನೋಡಿದರೂ ಪಪ್ಪಿ ಪಪ್ಪಿ ಪಪ್ಪಿ ಎಂಬ ಜಯಘೋಷ ಕೇಳುತ್ತಿತ್ತು. ಕಾಂಗ್ರೆಸ್ ಹಿರಿಯರು, ಮಹಿಳೆಯರು, ಯುವಕರು, ಕಾರ್ಯಕರ್ತರು ಸಾಥ್ ನೀಡಿದರು.