‘ಕಷ್ಟ ಕಾಲದಲ್ಲಿ ಕೈಹಿಡಿದು ಜೀವನ ಕಟ್ಟಿಕೊಟ್ಟ ನರೇಗಾ’

ಊರಲ್ಲಿ ಸಿಗುವ ಅಡಿಕೆ ಸುಲಿಯುವ ಕೆಲಸ ಮಾಡಿಕೊಂಡು ಉಳಿದ ದಿನಗಳಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆ ಕೆಲಸ ಮಾಡುತ್ತಿದ್ದಾರೆ. ಸಕ್ರಿಯ ಕೆಲಸ ನಿರ್ವಹಣೆಯಿಂದ ಗ್ರಾಮ ಪಂಚಾಯಿತಿಯವರು ಈಕೆಯನ್ನು ಕಾಯಕಬಂಧುವಾಗಿ ನೇಮಿಸಿದ್ದಾರೆ.

Written by - Manjunath N | Last Updated : Nov 29, 2024, 03:30 PM IST
  • ತಬಸ್ಸುಮ್‌ರವರು ಏಕಪೋಷಕರಾಗಿದ್ದು ಅನೇಕ ವರ್ಷಗಳಿಂದ ನರೇಗಾ ಯೋಜನೆಯಡಿ ಕೂಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
  • ಗ್ರಾ.ಪಂಇವರನ್ನು ಕಾಯಕ ಬಂಧುವಾಗಿ ಗುರುತಿಸಿದ್ದು ಈ ಕೆಲಸವನ್ನು ಸಹ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.
  • ಈ ಹಿಂದೆ ಅವರಿಗೆ ಉತ್ತಮ ಕಾಯಕ ಬಂಧು ಪ್ರಶಸ್ತಿ ಸಹ ಬಂದಿದೆ.
 ‘ಕಷ್ಟ ಕಾಲದಲ್ಲಿ ಕೈಹಿಡಿದು ಜೀವನ ಕಟ್ಟಿಕೊಟ್ಟ ನರೇಗಾ’ title=

ಜೀವನದ ಕಷ್ಟ ಕಾಲದಲ್ಲಿ ಕೈಹಿಡಿದಿದ್ದು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ. ತಮ್ಮ ಪತಿಯ ಅಕಾಲಿಕ ಮರಣದ ನಂತರ ಜೀವನ ನಿರ್ವಹಣೆಗೆ ಸಹಕಾರಿಯಾದದ್ದು ನರೇಗಾ ಯೋಜನೆ ಎಂದು ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಗ್ರಾಮದ ನಿವಾಸಿ ತಬಸ್ಸುಮ್‌ರವರು ಸ್ಮರಿಸುತ್ತಾರೆ.

ತಬಸ್ಸುಮ್ ಅವರ ಪತಿ ಸೈಯದ್ ನಿಸಾರ್ ಅಕಾಲಿಕ ಮರಣದ ನಂತರ ಸಂಸಾರ ನಿರ್ವಹಣೆಯ ಜವಾಬ್ದಾರಿ ಸಂಪೂರ್ಣವಾಗಿ ಇವರ ಮೇಲಿಯೇ ಬಿತ್ತು. ಮನೆ ನಿರ್ವಹಣೆ ಹಾಗೂ ಮಗ ನನ್ನು ಓದಿಸಲು, ಆತನ ಭವಿಷ್ಯ ರೂಪಿಸಲು ಇವರು ಏನಾದರೂ ಕೆಲಸ ಮಾಡಬೇಕಿತ್ತು. ಹೆಚ್ಚು ಓದದ, ಊರಿನಲ್ಲಿ ಕೃಷಿ ಜಮೀನೂ ಇಲ್ಲದ ತಬಸ್ಸುಮ್‌ರವರಿಗೆ ಆಸರೆಯಾದದ್ದು ನರೇಗಾ ಯೋಜನೆಯಡಿ ಕೂಲಿ ಕೆಲಸ.

ಇದನ್ನೂ ಓದಿ: ʼಮಾಂಸಾಹಾರ ತಿನ್ನಬೇಡʼ ಅಂದಿದ್ದಕ್ಕೆ.. ದುರಂತ ನಿರ್ಧಾರ ತೆಗೆದುಕೊಂಡ "ಮೊದಲ ಮಹಿಳಾ ಪೈಲಟ್"..!

ಊರಲ್ಲಿ ಸಿಗುವ ಅಡಿಕೆ ಸುಲಿಯುವ ಕೆಲಸ ಮಾಡಿಕೊಂಡು ಉಳಿದ ದಿನಗಳಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆ ಕೆಲಸ ಮಾಡುತ್ತಿದ್ದಾರೆ. ಸಕ್ರಿಯ ಕೆಲಸ ನಿರ್ವಹಣೆಯಿಂದ ಗ್ರಾಮ ಪಂಚಾಯಿತಿಯವರು ಈಕೆಯನ್ನು ಕಾಯಕಬಂಧುವಾಗಿ ನೇಮಿಸಿದ್ದಾರೆ. ಕಾಯಕ ಬಂಧುವಾದ ಇವರು ಕೂಲಿ ಕೆಲಸ ನಿರ್ವಹಿಸುತ್ತಾ ತನ್ನಂತೆ ಇತರರು ಉದ್ಯೋಗ ಖಾತ್ರಿ ಕೆಲಸ ಪಡೆಯುವಂತೆ ಪ್ರೇರಣೆ ನೀಡುತ್ತಿದ್ದಾಳೆ.

ಸುಮಾರು ೧೩ ರಿಂದ ೧೪ ವರ್ಷದಿಂದ ನರೇಗಾ ಅಡಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಾ ಬಂದಿರುವ ತಬಸ್ಸುಮ್ ಕೂಲಿ ಹಣವನ್ನು ಸ್ವಸಹಾಯ ಸಂಘದಲ್ಲಿ ತೊಡಗಿಸುತ್ತಿದ್ದು ಸ್ವಸಹಾಯ ಸಂಘದ ಸದಸ್ಯರಿಗೆ ನರೇಗಾ ಯೋಜನೆಯ ಕುರಿತು ಮಾಹಿತಿ ನೀಡಿ ಕೆಲಸ ನಿರ್ವಹಿಸುವಂತೆ ಮತ್ತು ವೈಯಕ್ತಿಕ ಸೌಲಭ್ಯಗಳನ್ನು ಪಡೆಯುವ ಬಗ್ಗೆ ಮಾಹಿತಿ ನೀಡುತ್ತಾರೆ.

ಗ್ರಾಮದಲ್ಲಿ ಮಹಿಳಾ ಕೂಲಿಕಾರರನ್ನು ಸಂಘಟಿಸಿ ಉದ್ಯೋಗಖಾತ್ರಿ ಕೆಲಸ ಪಡೆಯಲು ಹಾಗೂ ಅವರಿಗೆ ಕಾಮಗಾರಿ ಸ್ಥಳದಲ್ಲಿ ಬೇಕಾದ ಸೌಲಭ್ಯಗಳನ್ನು ಪಂಚಾಯಿತಿಯಿAದ ಒದಗಿಸಲು ನೆರವಾಗಿದ್ದಾರೆ. ಜೊತೆಗೆ ತಾವೂ ಅಕುಶಲ ಕೆಲಸ ನಿರ್ವಹಿಸುತ್ತಾ ಬಂದಿದ್ದಾರೆ.

೨೦೨೩-೨೪ ನೇ ಸಾಲಿನಲ್ಲಿ ೧೦೦ ದಿನ ಕೆಲಸ ಪೂರೈಸಿ ರೂ.೩೦೯೦೦/- ಗಳಿಸಿದ್ದರೆ ಪ್ರಸಕ್ತ ಸಾಲಿನಲ್ಲಿ ದಿನಗೂಲಿ ಮೊತ್ತ ರೂ.೩೪೯ ಇದ್ದು ಈವರೆಗೆ ೯೦ ದಿನ ಕೆಲಸ ಮಾಡಿ ರೂ. ೩೧೪೧೦/- ಗಳಿಸಿದ್ದಾರೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಎನ್‌ಆರ್‌ಇಜಿಎಸ್)ಯು ಯಾವುದೇ ಗ್ರಾಮೀಣ ವಯಸ್ಕ ಸದಸ್ಯರಿಗೆ ಪ್ರತಿ ಹಣಕಾಸು ವರ್ಷದಲ್ಲಿ ನೂರು ದಿನಗಳ ಉದ್ಯೋಗಕ್ಕಾಗಿ ಕಾನೂನುಬದ್ಧ ಭರವಸೆ ನೀಡುತ್ತದೆ. ಕನಿಷ್ಠ ವೇತನದಲ್ಲಿ ಸಾರ್ವಜನಿಕ ಕೆಲಸಕ್ಕೆ ಸಂಬAಧಿಸಿದ ಅಕುಶಲ ಕೆಲಸಗಳನ್ನು ನೀಡಲಾಗುವುದು. ತಬಸ್ಸುಮ್ ರೀತಿಯ ಅನೇಕ ಮಹಿಳೆಯರು, ನಿರುದ್ಯೋಗಿಗಳು, ಅಕಶುಲ ಕೆಲಸಗಾರರು ನರೇಗಾ ಯೋಜನೆಯಡಿ ಪ್ರಯೋಜನ ಪಡೆಯುತ್ತಿದ್ದಾರೆ.

ಇದನ್ನೂ ಓದಿ : ಆಹಾರದ ರುಚಿ ಹೆಚ್ಚಿಸಬಲ್ಲ ಈ ಸೊಪ್ಪಿನಿಂದ ಬಿಳಿ ಕೂದಲು ನೈಸರ್ಗಿಕವಾಗಿ ಗಾಢ ಕಪ್ಪಾಗುತ್ತೆ!

-ಎನ್.ಹೇಮಂತ್, ಸಿಇಓ, ಜಿ.ಪಂ, ಶಿವಮೊಗ್ಗ

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ನನ್ನ ಕೈಹಿಡಿದಿದೆ. ಹಾಗೂ ಪ್ರಸ್ತುತ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಯೋಜನೆ ಮತ್ತು ಗೃಹಲಕ್ಷಿö್ಮ ಯೋಜನೆಗಳ ಸೌಲಭ್ಯವನ್ನು ಸಹ ಪಡೆಯುತ್ತಿದ್ದು, ಈ ಯೋಜನೆಗಳಿಂದಾಗಿ ತಮ್ಮ ಕುಟುಂಬ ನಿರ್ವಹಣೆ, ಮಗನ ವಿದ್ಯಾಭ್ಯಾಸಕ್ಕೆ ಬಹಳ ಸಹಾಯವಾಗಿದೆ. ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸರ್ಕಾರದ ಈ ಯೋಜನೆಗಳು ಬೆನ್ನೆಲುಬಾಗಿ ನಿಂತಿವೆ. ಈ ಯೋಜನೆಗಳು ನನ್ನಂತಹ ಸಹಸ್ರಾರು ಹೆಣ್ಣುಮಕ್ಕಳ ಮನೆ ಬೆಳಗುತ್ತಿವೆ.

-ತಬಸ್ಸಯಮ್, ಕಾಯಕ ಬಂಧು, ಮಂಡಗದ್ದೆ

ತಬಸ್ಸುಮ್ ಅನೇಕ ವರ್ಷಗಳಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಇವರನ್ನು ಗ್ರಾ.ಪಂ ಯು ಕಾಯಕ ಬಂಧುವಾಗಿ ಗುರುತಿಸಿ ಗುರುತಿನ ಚೀಟಿ ನೀಡಿದ್ದು, ಇವರು ಇತರರೂ ನರೇಗಾ ಯೋಜನೆಯಡಿ ಕಾರ್ಮಿಕರಾಗಿ ಕಾರ್ಯ ನಿರ್ವಹಿಸಲು ಪ್ರೇರೇಪಿಸುತ್ತಿದ್ದಾರೆ. ಇಂತಹ ಮಹಿಳೆಯರ ಸ್ವಾವಲಂಬನೆ ಬದುಕು ಮಾದರಿಯಾಗಿದೆ.

- ಜ್ಯೋತಿ, ಮಂಡಗದ್ದೆ ಗ್ರಾ.ಪಂ ಅಧ್ಯಕ್ಷೆ

ತಬಸ್ಸುಮ್‌ರವರು ಏಕಪೋಷಕರಾಗಿದ್ದು ಅನೇಕ ವರ್ಷಗಳಿಂದ ನರೇಗಾ ಯೋಜನೆಯಡಿ ಕೂಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗ್ರಾ.ಪಂಇವರನ್ನು ಕಾಯಕ ಬಂಧುವಾಗಿ ಗುರುತಿಸಿದ್ದು ಈ ಕೆಲಸವನ್ನು ಸಹ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಅವರಿಗೆ ಉತ್ತಮ ಕಾಯಕ ಬಂಧು ಪ್ರಶಸ್ತಿ ಸಹ ಬಂದಿದೆ.

- ಸುಧಾ, ಪಿಡಿಓ , ಮಂಡಗದ್ದೆ

-ಭಾಗ್ಯ ಎಂ ಟಿ, ವಾರ್ತಾ ಸಹಾಯಕರು

ವಾರ್ತಾ ಇಲಾಖೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News