Viral Video: ಮದುವೆ ಮಂಟಪದಲ್ಲಿ ವರನನ್ನು ದೂರಕ್ಕೆ ತಳ್ಳಿ ವಧು ಪಕ್ಕದಲ್ಲಿ ಕುಳಿತ ಬಾಲಕ…!

ಈ ವೀಡಿಯೋದಲ್ಲಿ ವಧು-ವರರು ವೇದಿಕೆಯ ಮೇಲೆ ಹಾಕಲಾದ ಕುರ್ಚಿಯ ಮೇಲೆ ಒಟ್ಟಿಗೆ ಕುಳಿತಿರುವುದನ್ನು ಕಾಣಬಹುದು.

Written by - Bhavishya Shetty | Last Updated : Sep 12, 2022, 07:30 PM IST
    • ವಧು-ವರರು ವೇದಿಕೆಯ ಮೇಲೆ ಹಾಕಲಾದ ಕುರ್ಚಿಯ ಮೇಲೆ ಒಟ್ಟಿಗೆ ಕುಳಿತಿರುತ್ತಾರೆ
    • ಹುಡುಗ ಬಂದು ವಧುವಿನ ಮುಂದೆ ವರನನ್ನು ಎಬ್ಬಿಸಿ ಆಕೆಯ ಪಕ್ಕದಲ್ಲಿ ಕುಳಿತುಕೊಳ್ಳುತ್ತಾನೆ
    • ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಈ ತಮಾಷೆಯ ವಿಡಿಯೋ
Viral Video: ಮದುವೆ ಮಂಟಪದಲ್ಲಿ ವರನನ್ನು ದೂರಕ್ಕೆ ತಳ್ಳಿ ವಧು ಪಕ್ಕದಲ್ಲಿ ಕುಳಿತ ಬಾಲಕ…!  title=
Viral Video

Social Media Viral: ಮದುವೆಗಳಲ್ಲಿ ಕೆಲವೊಂದು ನೆನಪುಗಳು ಆಗಾಗ ಕ್ಯಾಮರಾದಲ್ಲಿ ಸೆರೆಯಾಗಿ ಕಣ್ಣು ತೇವಗೊಳಿಸುತ್ತವೆ. ಇಲ್ಲವೇ ಬಲವಂತವಾಗಿ ನಗಿಸಿ ಬಿಡುತ್ತವೆ. ಅಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಹುಡುಗನ ಕೃತ್ಯ ನೋಡಿ ಮದುವೆಗೆ ಬಂದಿದ್ದ ಅತಿಥಿಗಳೆಲ್ಲ ಬೆಚ್ಚಿ ಬಿದ್ದಿದ್ದಾರೆ. 

ಇದನ್ನೂ ಓದಿ: Viral Video: ಬ್ರೇಕಪ್ ಬೇಡ ಅಂತ ಶಾಲಾ ಬಾಲಕಿ ಕಾಲು ಹಿಡ್ಕೊಂಡು ಗೋಗರೆದ ಬಾಲಕ… ಮುಂದೇನಾಯ್ತು?

ಈ ವೀಡಿಯೋದಲ್ಲಿ ವಧು-ವರರು ವೇದಿಕೆಯ ಮೇಲೆ ಹಾಕಲಾದ ಕುರ್ಚಿಯ ಮೇಲೆ ಒಟ್ಟಿಗೆ ಕುಳಿತಿರುವುದನ್ನು ಕಾಣಬಹುದು. ಆಗ ಒಬ್ಬ ಹುಡುಗ ಬಂದು ವಧುವಿನ ಮುಂದೆ ವರನನ್ನು ಎಬ್ಬಿಸಿ ಆಕೆಯ ಪಕ್ಕದಲ್ಲಿ ಕುಳಿತುಕೊಳ್ಳುತ್ತಾನೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ತಮಾಷೆಯ ವಿಡಿಯೋವನ್ನು ನೀವೂ ನೋಡಲೇಬೇಕು.

ನಿಜವಾಗಿ ಈ ವಿಡಿಯೋದಲ್ಲಿ ಒಬ್ಬ ಹುಡುಗ ಬಂದು ವಧು-ವರರ ಕೈ ಹಿಡಿದು ವರನನ್ನು ಕುರ್ಚಿಯಿಂದ ಮೇಲಕ್ಕೆತ್ತುತ್ತಾನೆ. ವರನು ಕುರ್ಚಿಯನ್ನು ತೊರೆದ ತಕ್ಷಣ, ಹುಡುಗನು ವಧುವಿನ ಪಕ್ಕದಲ್ಲಿ ಕುರ್ಚಿಯ ಮೇಲೆ ಕುಳಿತುಕೊಳ್ಳುವ ಅವಕಾಶವನ್ನು ಬಳಸಿಕೊಳ್ಳುತ್ತಾನೆ. ಈ ವೀಡಿಯೋ ನೋಡಿದ ತುಂಬಾ ಜನ ವಿಭಿನ್ನ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ. ಅನೇಕರಿಗೆ ನಗು ತಡೆಯಲು ಸಾಧ್ಯವಾಗುತ್ತಿಲ್ಲ. 

ಇದನ್ನೂ ಓದಿ:  Viral Video: ಮೈಮೇಲೆ ರೈಲು ಹರಿದರೂ ಬದುಕುಳಿದ ಭೂಪ: ಮೈಜುಂ ಎನ್ನುವಂತಿದೆ ವಿಡಿಯೋ

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊವನ್ನು ಇಲ್ಲಿಯವರೆಗೆ ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ. ಅಷ್ಟೇ ಅಲ್ಲ ಸಾವಿರಾರು ಮಂದಿ (ಸೋಶಿಯಲ್ ಮೀಡಿಯಾ ಬಳಕೆದಾರರು) ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಕಾಮೆಂಟ್ ಸೆಕ್ಷನ್‌ನಲ್ಲಿ ಕೆಲವರು ನಗುತ್ತಿರುವುದು ಕಂಡುಬಂದರೆ ಕೆಲವರು ತಮ್ಮ ಸ್ನೇಹಿತರನ್ನು ಟ್ಯಾಗ್ ಮಾಡಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News