Viral Video: ಇಬ್ಬರು ಮಕ್ಕಳ ತಂದೆಯನ್ನ ಪ್ರೀತಿಸಿದ 3 ಮಕ್ಕಳ ತಾಯಿ; ಕ್ಲೈಮ್ಯಾಕ್ಸ್​ನಲ್ಲಿ ರೋಚಕ ಟ್ವಿಸ್ಟ್ ಕೊಟ್ಟ ಮೊದಲ ಪತಿ!!

Viral News: ಮೂರು ಮಕ್ಕಳ ತಾಯಿಯೊಬ್ಬರು ಇಬ್ಬರು ಮಕ್ಕಳ ತಂದೆಯನ್ನು ಪ್ರೀತಿಸಿದ ಸ್ಟೋರಿ ಇದು. ಮಹಿಳೆ ಮತ್ತು ಆಕೆಯ ಪತಿ 12 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಆಕೆ ಇದೀಗ ಬೇರೊಬ್ಬ ಪುರುಷನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾಳೆ.

Written by - Puttaraj K Alur | Last Updated : Dec 21, 2024, 06:37 PM IST
  • ಬಿಹಾರದಲ್ಲಿ ವಿಚಿತ್ರ ಪ್ರಸಂಗವೊಂದು ಬೆಳಕಿಗೆ ಬಂದಿದೆ
  • ಅನೈತಿಕ ಸಂಬಂಧಕ್ಕೆ ಇಲ್ಲಿ ಯಾವುದೇ ರೀತಿ ರಕ್ತಪಾತವಾಗಿಲ್ಲ
  • ಪತ್ನಿ ಮೇಲಿನ ಪ್ರೀತಿಗಾಗಿ ಮೊದಲ ಪತಿ ಮಾಡಿದ್ದೇನು ಗೊತ್ತಾ..?
Viral Video: ಇಬ್ಬರು ಮಕ್ಕಳ ತಂದೆಯನ್ನ ಪ್ರೀತಿಸಿದ 3 ಮಕ್ಕಳ ತಾಯಿ; ಕ್ಲೈಮ್ಯಾಕ್ಸ್​ನಲ್ಲಿ ರೋಚಕ ಟ್ವಿಸ್ಟ್ ಕೊಟ್ಟ ಮೊದಲ ಪತಿ!! title=
ಬಿಹಾರದಲ್ಲಿ ವಿಚಿತ್ರ ಪ್ರಸಂಗ

Viral Video Today: ಅನೈತಿಕ ಸಂಬಂಧಗಳ ಸುದ್ದಿಗಳನ್ನ ನೀವು ಓದಿಯೇ ಇರ್ತೀರಿ. ವಿವಾಹೇತರ ಸಂಬಂಧದ ಅನೇಕ ಪ್ರಕರಣಗಳ ಬಗ್ಗೆ ಕೇಳಿರ್ತೀರಿ.. ಅದೆಷ್ಟೋ ಅನೈತಿಕ ಸಂಬಂಧಗಳು ಕುಟುಂಬಗಳನ್ನೇ ಸರ್ವನಾಶ ಮಾಡಿವೆ. ಗಂಡನಿಗೆ ಬೇರೆಯವರ ಜೊತೆ ಸಂಬಂಧ ಇದೆ ಎಂದು ಹೆಂಡತಿಗೆ ಗೊತ್ತಾದ್ರೆ, ಹೆಂಡತಿಗೆ ಬೇರೆಯವರ ಜೊತೆ ಸಂಬಂಧವಿದೆ ಎಂದು ಗಂಡನಿಗೆ ತಿಳಿದರೆ ಕತೆಯೇ ಮುಗಿತು ಅಂತಾನೇ ಅರ್ಥ.

ಅನೈತಿಕ ಸಂಬಂಧದಿಂದ ಸಾವಿರಾರು ಕುಟುಂಬಗಳ ನೆಮ್ಮದಿ ಹಾಳಾಗಿದೆ. ಇದರಿಂದ ಅನೇಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆದರೆ ಬಿಹಾರದಲ್ಲಿ ವಿಚಿತ್ರ ಪ್ರಸಂಗವೊಂದು ಬೆಳಕಿಗೆ ಬಂದಿದೆ. ಪತ್ನಿ ಬೇರೊಬ್ಬನನ್ನು ಪ್ರೀತಿಸುತ್ತಿದ್ದಾಳೆಂದು ತಿಳಿದ ಪತಿ, ಆಕೆಗೆ ಪ್ರಿಯಕರನ ಜೊತೆ ಮದುವೆ ಮಾಡಿಸಿ ಸುದ್ದಿಯಾಗಿದ್ದಾನೆ. 

ಇದನ್ನೂ ಓದಿ: ಡೇಂಜರ್.! ಡೇಂಜರ್‌!! ಡಿಸೆಂಬರ್‌ ಡೇಂಜರ್‌!!!; ಪ್ರತಿವರ್ಷ ಡಿಸೆಂಬರ್‌ನಲ್ಲೇ ಅತಿಹೆಚ್ಚು ಸಾವು ನೋವು!!

ಹೌದು, ಇದು ಅಚ್ಚರಿಯಾದರೂ ನಿಜವಾಗಿಯೂ ನಡೆದಿರುವ ಘಟನೆ. ಈ ಮದುವೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಮೂರು ಮಕ್ಕಳ ತಾಯಿಯೊಬ್ಬರು ಇಬ್ಬರು ಮಕ್ಕಳ ತಂದೆಯನ್ನು ಪ್ರೀತಿಸಿದ ಸ್ಟೋರಿ ಇದು. ಮಹಿಳೆ ಮತ್ತು ಆಕೆಯ ಪತಿ 12 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಆಕೆ ಇದೀಗ ಬೇರೊಬ್ಬ ಪುರುಷನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾಳೆ.

ಹೆಂಡತಿಯ ಸಂತೋಷಕ್ಕೆ ಭಂಗ ತರಲು ಬಯಸದ ಪತಿ ತೆಗೆದುಕೊಂಡ ತೀರ್ಮಾನವೇ ಇದೀಗ ಅಚ್ಚರಿ ಮೂಡಿಸಿದೆ. ಆಕೆ ಪ್ರೀತಿಸಿದ ವ್ಯಕ್ತಿಯ ಜೊತೆಗೆ ಆತ ಮದುವೆಯನ್ನು ಏರ್ಪಡಿಸಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ. 

ಇದನ್ನೂ ಓದಿ: ರಾಜ್ಯದ ಗಡಿ ಭಾಗದ ಮದ್ಯ ಪ್ರಿಯರಿಗೆ ಗುಡ್‌ ನ್ಯೂಸ್‌..! ಎಪಿಯಲ್ಲಿ ಮದ್ಯದ ಬೆಲೆ ಭಾರೀ ಇಳಿಕೆ

ಅಂದಹಾಗೆ ವೈರಲ್ ಆಗಿರೋ ಈ ವಿಡಿಯೋದಲ್ಲಿ ಪತಿಯೊಬ್ಬ ತನ್ನ ಹೆಂಡತಿಗೆ 2ನೇ ಮದುವೆ ಮಾಡಿಸಿದ್ದಾನೆ. ಊರಿನ ಗುರು-ಹಿರಿಯರ ಸಮ್ಮುಖದಲ್ಲಿಯೇ ಈ ಮದುವೆ ನಡೆದಿದೆ. ಪ್ರಿಯಕರ ಮಹಿಳೆಯ ಹಣೆಗೆ ಸಿಂಧೂರ ಇಟ್ಟು ಮದುವೆ ಆಗಿದ್ದಾನೆ. ʼಮುಂದೆ ಏನೇ ಸಮಸ್ಯೆ ಬಂದರೂ ಅದು ನಿನ್ನದೇ ಜವಾಬ್ದಾರಿ, ನೀನೇ ಎಲ್ಲವನ್ನೂ ನಿಭಾಯಿಸಬೇಕುʼ ಅಂತಾ ಮೊದಲ ಗಂಡ ತನ್ನ ಪತ್ನಿಯ ಪ್ರಿಯಕರನಿಗೆ ಬುದ್ಧಿ ಹೇಳಿದ್ದಾನೆ.

ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಇದೊಂದು ರೀತಿ ವಿಚಿತ್ರ ಮದುವೆ ಅಂತಾ ಅನೇಕರು ಫನ್ನಿ ಫನ್ನಿಯಾಗಿ ಕಾಮೆಂಟ್‌ ಮಾಡಿದ್ದಾರೆ. ಮಕ್ಕಳಿದ್ದರೂ ಸಹ ಅದು ಹೇಗೆ ʼಪ್ರೀತಿ ಪ್ರೇಮ ಪ್ರಣಯʼ ಅಂತಾರೋ ಅಂತಾ ಅನೇಕರು ಕಾಮೆಂಟ್‌ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News