Viral Video: ಇತ್ತೀಚಿನ ದಿನಗಳಲ್ಲಿ ವಿವಾಹೇತರ ಸಂಬಂಧಗಳ ಪ್ರಕರಣಗಳು ಸಾಕಷ್ಟು ಸುದ್ದಿಯಾಗುತ್ತಿವೆ. ಈ ಅನೈತಿಕ ಸಂಬಂಧಗಳು ಅನೇಕ ಕುಟುಂಬಗಳನ್ನು ನಾಶ ಮಾಡಿದೆ. ಅದರಲ್ಲೂ ಗಂಡನಿಗೆ ಬೇರೆಯವರ ಜೊತೆ ಸಂಬಂಧ ಇದೆ ಎಂದು ಹೆಂಡತಿಗೆ ಗೊತ್ತಾದರೇ.. ಅದೇ ರೀತಿ ಗಂಡನಿಗೆ ಹೆಂಡತಿಗೆ ಬೇರೆಯವರ ಜೊತೆ ಸಂಬಂಧವಿದೆ ಎಂದು ತಿಳಿದರೆ ಇವೆಲ್ಲವು ದೊಡ್ಡ ಜಗಳವಾಗುತ್ತವೆ.. ಬಹುತೇಕ ಎಲ್ಲ ಪ್ರಕರಣಗಳಲ್ಲಿ ಗಲಾಟೆ, ಪೊಲೀಸ್ ಕೇಸುಗಳು ಹೀಗೆ ಮಾರಾಮಾರಿಗಳೇ ನಡೆಯುತ್ತವೆ.. ಆದರೆ, ಇಂತಹ ಸಂದರ್ಭದಲ್ಲಿ ನಡೆದ ಯಾರೂ ನಿರೀಕ್ಷಿಸದ ರೀತಿಯಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಪತ್ನಿ ಬೇರೊಬ್ಬ ಪುರುಷನನ್ನು ಪ್ರೀತಿಸುತ್ತಿರುವುದನ್ನು ತಿಳಿದ ಪತಿಯೇ ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ್ದಾನೆ.. ಈ ಮದುವೆಯ ವಿಡಿಯೋ ಈಗ ವೈರಲ್ ಆಗಿದೆ.
Extra-Marital Affair (Mother of three children fell in love with the father of two children, the husband got his wife married to her boyfriend; they had love marriage 12 years ago) Saharsa Bihar
pic.twitter.com/0QV5Trw8PS— Ghar Ke Kalesh (@gharkekalesh) December 19, 2024
ಇದನ್ನೂ ಓದಿ-Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಮತ್ತಷ್ಟು ಏರಿಕೆ ಕಂಡ ಅಡಿಕೆ ಧಾರಣೆ!!!
ಮೂರು ಮಕ್ಕಳ ತಾಯಿಯೊಬ್ಬರು ಇಬ್ಬರು ಮಕ್ಕಳ ತಂದೆಯನ್ನು ಪ್ರೀತಿಸಿದ ಈ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ. ಆ ಮಹಿಳೆ ಮತ್ತು ಆಕೆಯ ಪತಿ 12 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಈಗ ಆಕೆ ಬೇರೊಬ್ಬ ಪುರುಷನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಹೆಂಡತಿಯ ಸಂತೋಷಕ್ಕೆ ಭಂಗ ತರಲು ಬಯಸದ ಪತಿ ಅವಳು ಪ್ರೀತಿಸಿದ ವ್ಯಕ್ತಿಯ ಜೊತೆ ಮತ್ತೊಂದು ಮದುವೆಯನ್ನು ಏರ್ಪಡಿಸಿದ್ದಾನೆ.. ಘರ್ಕೆಕಲೇಶ್ ಹೆಸರಿನ ಎಕ್ಸ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ-ಕಾನೂನು ಎಲ್ಲರಿಗೂ ಸಮಾನವಲ್ಲವೇ? ನೀರೂ ಕೊಡಲಿಲ್ಲ; ಮೂತ್ರಕ್ಕೂ ಅವಕಾಶ ಇಲ್ಲ: ಸಿಟಿ ರವಿ ಆರೋಪ
ವೈರಲ್ ವಿಡಿಯೋದಲ್ಲಿ, ಪತಿ ತನ್ನ ಹೆಂಡತಿಯನ್ನು ಆಕೆಯ ಪ್ರಿಯತಮನಿಗೆ ಕೊಟ್ಟು ಮದುವೆ ಮಾಡುತ್ತಿರುವುದನ್ನು ಕಾಣಬಹುದು.. ಊರಿನವರ ಸಮ್ಮುಖದಲ್ಲಿ ಪುರುಷನು ಮಹಿಳೆಯ ಹಣೆಗೆ ಸಿಂಧೂರವನ್ನು ಹಚ್ಚಿ ಆಕೆಯನ್ನು ಮದುವೆಯಾಗಿದ್ದಾನೆ.. ಮುಂದೆ ಏನೇ ಸಮಸ್ಯೆ ಬಂದರೂ ಆಕೆ ನಿನ್ನ ಜವಾಬ್ದಾರಿ, ನೀನೇ ಎಲ್ಲವನ್ನೂ ನಿಭಾಯಿಸಬೇಕು ಎಂದು ಮೊದಲ ಪತಿ ವಿಡಿಯೋದಲ್ಲಿ ಹೇಳಿದ್ದಾರೆ... ಡಿಸೆಂಬರ್ 19 ರಂದು ಹಂಚಿಕೊಳ್ಳಲಾದ ವೀಡಿಯೊವನ್ನು 5.4 ಮಿಲಿಯನ್ ವೀವ್ಸ್ ಮತ್ತು ಅನೇಕ ಕಾಮೆಂಟ್‌ಗಳನ್ನು ಪಡೆದುಕೊಂಡಿದೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.