Viral Video: ಭಾರೀ ಮಳೆ ಗಾಳಿ ಮಧ್ಯೆ ಪತ್ನಿ ಸಮೇತ ನಾಲೆಗೆ ಬಿದ್ದ ಪೋಲೀಸಪ್ಪ ..!

ನಿಜ ಹೇಳಬೇಕೆಂದರೆ ಇಲ್ಲಿ ಯಾವುದು ರಸ್ತೆ ಯಾವುದು ನಾಲೆ ಎಂದು ಗಮನಕ್ಕೆ ಬಾರದಿರುವಷ್ಟು ನೀರು ರಸ್ತೆಯ ತುಂಬಾ ಹರಿಯುತ್ತಿದೆ.  ಈ ಕಾರಣದಿಂದಾಗಿಯೇ  ಸ್ಕೂಟರ್ ಸವಾರಿ ಮಾಡುತ್ತಿದ್ದ ದಂಪತಿ ನಾಲೆಗೆ ಬಿದ್ದಿದೆ.

Written by - Ranjitha R K | Last Updated : Jun 21, 2022, 02:02 PM IST
  • ನಾಲೆಗೆ ಬಿದ್ದ ಪೋಲಿಸ್ ಮತ್ತು ಪತ್ನಿ
  • ಸ್ಥಳೀಯರಿಂದ ಇಬ್ಬರ ರಕ್ಷಣೆ
  • ಸಿಸಿಟಿವಿಯಲ್ಲಿ ಸೆರೆಯಾಯಿತು ವಿಡಿಯೋ
Viral Video: ಭಾರೀ ಮಳೆ ಗಾಳಿ ಮಧ್ಯೆ ಪತ್ನಿ ಸಮೇತ ನಾಲೆಗೆ ಬಿದ್ದ ಪೋಲೀಸಪ್ಪ ..!  title=
Viral Video (photo twitter

ಬೆಂಗಳೂರು : ದೇಶದ ಹಲವು ಭಾಗಗಳಲ್ಲಿ ಮುಂಗಾರು ಆರಂಭವಾಗಿದೆ. ಮಳೆ ಬಂದ ಮೇಲೆ ರಸ್ತೆ ಮೇಲೆ ಉದ್ದಕ್ಕೂ ನೀರು ಹರಿಯುವುದು ಈಗ ಸಾಮಾನ್ಯ ಸಮಸ್ಯೆಯಾಗಿದೆ. ಉತ್ತರ ಪ್ರದೇಶದ ಅಲಿಗಢ್ ನಗರದಲ್ಲಿ ಭಾರೀ ಮಳೆಯ ಪರಿಣಾಮ ರಸ್ತೆ ತುಂಬೆಲ್ಲಾ ನೀರು ನಿಂತಿದೆ. ನಿಜ ಹೇಳಬೇಕೆಂದರೆ ಇಲ್ಲಿ ಯಾವುದು ರಸ್ತೆ ಯಾವುದು ನಾಲೆ ಎಂದು ಗಮನಕ್ಕೆ ಬಾರದಿರುವಷ್ಟು ನೀರು ರಸ್ತೆಯ ತುಂಬಾ ಹರಿಯುತ್ತಿದೆ.  ಈ ಕಾರಣದಿಂದಾಗಿಯೇ  ಸ್ಕೂಟರ್ ಸವಾರಿ ಮಾಡುತ್ತಿದ್ದ ದಂಪತಿ ನಾಳೆಗೆ ಬಿದ್ದಿದೆ.  

 ಔಷಧಿ ಕೊಡಿಸುವ ಸಲುವಾಗಿ ಪೋಲಿಸ್ ಒಬ್ಬ ತನ್ನ ಪತ್ನಿಯೊಂದಿಗೆ ಸ್ಕೂಟರ್ ನಲ್ಲಿ ಬಂದಿದ್ದಾರೆ. ಆದರೆ ರಸೆ ತುಂಬಾ ನೀರು ನಿಂತಿದ್ದರಿಂದ ಪೊಲೀಸಪ್ಪನಿಗೆ ನಾಲೆ ಗಮನಕ್ಕೆ ಬಂದಿಲ್ಲ. ಮಾಮೂಲಿ ರಸ್ತೆ ಎಂದು ಸ್ಕೂಟರ್ ಪಾರ್ಕ್ ಮಾಡಲು ಹೋಗಿದ್ದಾರೆ. ಆದರೆ ಸ್ಕೂಟರ್ ಸಮೇತ ಪತಿ, ಪತ್ನಿ ಇಬ್ಬರೂ ನಾಲೆಗೆ ಬಿದ್ದಿದ್ದಾರೆ. ಈ ದೃಶ್ಯ ಅಲ್ಲೇ ಇದ್ದ ಸಿಸಿತಿವಿಯಲ್ಲಿ ಸೆರೆಯಾಗಿದೆ. ಸ್ಕೂಟರ್ ನಾಲಗೆ ಬೀಳುತ್ತಿದ್ದಂತೆಯೇ ಸ್ಥಳೀಯರು ಧಾವಿಸಿ ಇಬ್ಬರನ್ನು ರಕ್ಷಿಸಿದ್ದಾರೆ. 

ಇದನ್ನೂ ಓದಿ : ಗೂಡ್ಸ್ ವಾಹನದ ಮೇಲೆ ಆನೆ ದಾಳಿ: ತರಕಾರಿ ಗುಳುಂ, ವಾಹನವೂ ಜಖಂ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ ಸಿಸಿಟಿವಿ ದೃಶ್ಯಾವಳಿಗಳು :

#यूपी का स्मार्ट सिटी अलीगढ़।
किसे धन्यवाद दें? pic.twitter.com/VnwAqLRKQc

ನಿವೃತ್ತ ಐಎಎಸ್ ಅಧಿಕಾರಿ ಸೂರ್ಯ ಪ್ರತಾಪ್ ಸಿಂಗ್ ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. #ಯುಪಿಯ ಸ್ಮಾರ್ಟ್ ಸಿಟಿ ಅಲಿಗಢ್.!  ಯಾರಿಗೆ ಧನ್ಯವಾದ ಹೇಳಬೇಕು?  ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ.  

ಇದನ್ನೂ ಓದಿ :  Viral Video: ವಿದ್ಯಾರ್ಥಿನಿಯರೊಂದಿಗೆ ಸರ್ಕಾರಿ ಶಾಲಾ ಶಿಕ್ಷಕಿಯ ಭರ್ಜರಿ ಡ್ಯಾನ್ಸ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News