‌Viral Video: ಪತ್ನಿಯನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದ ಪತಿ..! ಶಾಕಿಂಗ್ ವಿಡಿಯೋ ವೈರಲ್!!

Rajasthan Man Ties Wife to Motorcycle: ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ಭಯಾನಕ ಸುದ್ದಿಯೊಂದು ಬೆಳಕಿಗೆ ಬಂದಿದೆ. ಆಕೆಯ ಪತಿ ಮಹಿಳೆಯನ್ನು ಬೈಕ್‌ನ ಹಿಂಬದಿಯಲ್ಲಿ ಕಟ್ಟಿ ಊರಿನಾದ್ಯಂತ ಎಳೆದೊಯ್ದಿದ್ದಾನೆ. ಈ ಘಟನೆಯನ್ನು ಸ್ಥಳೀಯರೊಬ್ಬರು ವಿಡಿಯೋ ಮಾಡಿದ್ದು, ವೈರಲ್ ಆಗಿದೆ. 

Written by - Savita M B | Last Updated : Aug 15, 2024, 08:22 PM IST
  • ಸೋಷಿಯಲ್‌ ಮಿಡಿಯಾದಲ್ಲಿ ಕೆಲವರು ಲೈಕ್ಸ್‌, ವೀವ್ಸ್‌ಗಾಗಿ ಹರಸಾಹಸ ಮಾಡುತ್ತಿದ್ದಾರೆ
  • ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ಭಯಾನಕ ನಡೆದ ಈ ಭಯಾನಕ ಘಟನೆ ಈಗ ಬೆಳಕಿಗೆ ಬಂದಿದೆ
‌Viral Video: ಪತ್ನಿಯನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದ ಪತಿ..! ಶಾಕಿಂಗ್ ವಿಡಿಯೋ ವೈರಲ್!! title=

‌Viral Video: ಸೋಷಿಯಲ್‌ ಮಿಡಿಯಾದಲ್ಲಿ ಕೆಲವರು ಲೈಕ್ಸ್‌, ವೀವ್ಸ್‌ಗಾಗಿ ಹರಸಾಹಸ ಮಾಡುತ್ತಿದ್ದಾರೆ.. ಆದರೆ ಇಲ್ಲೋಬ್ಬ ನಿಜಕ್ಕೂ ತನ್ನ ಪತ್ನಿಯನ್ನು ಸಿನಿಮೀಯ ರೀತಿಯಲ್ಲಿ ಬೈಕ್‌ಗೆ ಕಟ್ಟಿ ಎಳೆದುಕೊಂಡು ಹೋಗಿದ್ದಾನೆ.. 

ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ಭಯಾನಕ ನಡೆದ ಈ ಭಯಾನಕ ಘಟನೆ ಈಗ ಬೆಳಕಿಗೆ ಬಂದಿದ್ದು, ಇದನ್ನು ಸ್ಥಳೀಯರೊಬ್ಬರು ವಿಡಿಯೋ ಮಾಡಿದ್ದು, ಸದ್ಯ ವೈರಲ್ ಆಗಿದೆ. ಘಟನೆಯ ಒಂದು ತಿಂಗಳ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಪ್ರಸ್ತುತ ಸಂತ್ರಸ್ತೆ ತನ್ನ ಪೋಷಕರೊಂದಿಗೆ ನೆಲೆಸಿದ್ದಾಳೆ ಎನ್ನಲಾಗಿದೆ.. 

ಇದನ್ನೂ ಓದಿ-GK: ದೆಹಲಿಯಲ್ಲಿರುವ ಕೆಂಪು ಕೋಟೆಯ ಹಳೆಯ ಹೆಸರೇನು ಗೊತ್ತೇ?  

ಪಂಚೌರಿ ಪೊಲೀಸ್ ಠಾಣೆ ಸಹಾಯಕ ಸಬ್ ಇನ್ಸ್ ಪೆಕ್ಟರ್ ಸುರೇಂದ್ರ ಕುಮಾರ್ ಮಾತನಾಡಿ, ನಹರಸಿಂಗಪುರ ಗ್ರಾಮದಲ್ಲಿ ಮೇಘವಾಲ್ ಎಂಬ ವ್ಯಕ್ತಿ ಕುಡುಕನಾಗಿದ್ದಾನೆ. ದಿನವೂ ಕಂಠಪೂರ್ತಿ ಮದ್ಯ ಸೇವಿಸುತ್ತಿದ್ದ ಈತ ಮದ್ಯದ ಅಮಲಿನಲ್ಲಿ ಪತ್ನಿಗೆ ಆಗಾಗ ಕಿರುಕುಳ ನೀಡುತ್ತಿದ್ದ. ಹೀಗೆ ಒಂದು ದಿನ ಜೈಸಲ್ಮೇರ್‌ನಲ್ಲಿರುವ ತನ್ನ ಸಹೋದರಿಯ ಮನೆಗೆ ಹೋಗುವುದಾಗಿ ಪತಿಗೆ ಹೇಳಿದರೂ ಆತ ಒಪ್ಪಲಿಲ್ಲ. ಇದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಯಿತು. ಹೀಗಾಗಿ ತೀವ್ರ ಕೋಪಗೊಂಡ ಆತ ಮದ್ಯದ ಅಮಲಿನಲ್ಲಿ ಪತ್ನಿಯನ್ನು ತುಳಿದು ಆಕೆಯ ಕಾಲಿಗೆ ಹಗ್ಗ ಬಿಗಿದು ಗ್ರಾಮದೊಳಗೆ ಎಳೆದೊಯ್ದಿದ್ದಾನೆ ಎಂದು ಹೇಳಿದ್ದಾರೆ.. 

ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿ ರಿಮಾಂಡ್‌ಗೆ ಕಳುಹಿಸಿದ್ದಾರೆ. ಸದ್ಯ ಪತ್ನಿ ಸಂಬಂಧಿಕರ ಮನೆಯಲ್ಲಿದ್ದಾರೆ ಎಂದು ವರದಿಯಾಗಿದೆ. ಆಕೆ ಇದುವರೆಗೆ ದೂರು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ-ಪೆಟ್ರೋಲ್ ಅಥವಾ ಡೀಸೆಲ್? ವಿಮಾನ ಹಾರಾಟಕ್ಕೆ ಉಪಯೋಗಿಸುವ ಇಂಧನ ಯಾವುದು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News