Snake love viral video : ಜೆಸಿಬಿ ಗಾಡಿಯ ಚಕ್ರಕ್ಕೆ ಸಿಕ್ಕು ಸತ್ತ ಗಂಡು ನಾಗರಹಾವು ಬದುಕುತ್ತೆ.. ಈಗ ಎದ್ದೇಳುತ್ತೆ.. ಆಗ ಎದ್ದೇಳುತ್ತೆ ಅಂತ ಕಾಯ್ದು ಕುಳಿತಿತ್ತು ಹೆಣ್ಣು ಹಾವು.. ಆದರೆ ವಿಧಿಯಾಟ ಬೇರೆಯೇ ಆಗಿತ್ತು.. ಆಗಲೇ ಆ ನಾಗ ಸಾವನ್ನಪ್ಪಿದ್ದ.. ಸದ್ಯ ಈ ಹೃದಯ ಕರಗುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಛತ್ರಿ ಗ್ರಾಮದ ರೈತರೊಬ್ಬರು ತಮ್ಮ ಹೊಲವನ್ನು ಸ್ವಚ್ಛಗೊಳಿಸುತ್ತಿದ್ದರು. ಈ ಕಾಮಗಾರಿಗೆ ಜೆಸಿಬಿ ಯಂತ್ರ ಬಳಸಲಾಗಿತ್ತು. ಕೆಲಸ ಮಾಡುತ್ತಿದ್ದ ವೇಳೆ ಕೃಷಿಭೂಮಿಯ ಗುಂಡಿಯಲ್ಲಿ ಅಡಗಿ ಕುಳಿತಿದ್ದ ಜೋಡಿ ಹಾವುಗಳು ಅನಿರೀಕ್ಷಿತವಾಗಿ ಜೆಸಿಬಿಯ ಬಕೆಟ್ಗೆ ಸಿಕ್ಕಿಬಿದ್ದಿವು. ಅದರಲ್ಲಿ ಒಂದು ಗಂಡು ಹಾವು ಸ್ಥಳದಲ್ಲೇ ಸಾವನ್ನಪ್ಪಿತ್ತು.. ಹೆಣ್ಣು ಹಾವು ಕೂಡ ಗಂಭೀರವಾಗಿ ಗಾಯಗೊಂಡಿತ್ತು..
ಇದನ್ನೂ ಓದಿ:ಮೂತ್ರದಲ್ಲಿ ನೊರೆ ಕಾಣಿಸಿಕೊಳ್ತಿದ್ಯಾ? ಇದು ಈ ಗಂಭೀರ ಕಾಯಿಲೆಯ ಸಂಕೇತವಾಗಿದೆ... ತಕ್ಷಣವೇ ವೈದ್ಯರ ಬಳಿ ಪರೀಕ್ಷಿಸಿ
ಈ ಘಟನೆಯ ನಂತರ, ಜೆಸಿಬಿ ನಿರ್ವಾಹಕರು ಕೆಲಸವನ್ನು ನಿಲ್ಲಿಸಿದರು. ತೋಟದ ಮಾಲೀಕರು ಮತ್ತು ಇತರರು ಜೋಡಿ ಹಾವುಗಳನ್ನು ಸ್ಥಿತಿ ನೋಡಿ ಬೆಚ್ಚಿಬಿದ್ದರು. ಸತ್ತ ಹಾವಿನ ದೇಹವನ್ನು ಸ್ಥಳಕ್ಕೆ ಕೊಂಡೊಯ್ದು ಜೀವಂತ ಹೆಣ್ಣು ಹಾವಿಗೆ ನೀರು ಕೊಡಲಾಯಿತು. ಆದರೆ, ಹೆಣ್ಣು ಹಾವು ಗಂಡು ಹಾವಿನ ದೇಹವನ್ನೇ ದಿಟ್ಟಿಸುತ್ತಿತ್ತು. ಚಲನೆ ಇಲ್ಲದಿದ್ದಾಗ ಹೆಣ್ಣು ಹಾವು ಗಂಡು ಹಾವಿನಿಂದ ದೂರ ಸರಿಯಲಿಲ್ಲ. ಹೆಣ್ಣು ಹಾವು ಒಂದು ಗಂಟೆಗೂ ಹೆಚ್ಚು ಕಾಲ ಅಲ್ಲೇ ಇತ್ತು. ಗಂಡು ಹಾವು ಬಂದು ಬಿಡುತ್ತದೆ ಎಂದು ಕಾದರೂ ಪ್ರಯೋಜನವಾಗಲಿಲ್ಲ.
एमपी के शिवपुरी जिले में नाग की मौत के बाद पास खड़ी नागिन का वीडियो सोशल मीडिया पर वायरल हो रहा है। नाग की मौत एक जेसीबी की चपेट में आने से हुई बताई जा रही है। लोगों का कहना है कि नागिन करीब एक घंटे तक नाग की लाश के पास फन काढे बैठी रही। #MadhyaPradesh #Viralnews#SnakeViral pic.twitter.com/5cT3EVjjs8
— Krishna Bihari Singh (@KrishnaBihariS2) January 2, 2025
ತೋಟದ ಮಾಲೀಕರು ಕೂಡಲೇ ಆ ಪ್ರದೇಶದಲ್ಲಿದ್ದ ಹಾವು ಹಿಡಿಯುವ ಸಲ್ಮಾನ್ ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅಲ್ಲಿಗೆ ಬಂದ ಉರಗ ರಕ್ಷಕ ಗಾಯಗೊಂಡ ಹಾವಿಗೆ ಚಿಕಿತ್ಸೆ ನೀಡಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದಿದ್ದಾರೆ. ಈ ಜೋಡಿ ಹಾವುಗಳು ಹಲವು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದವು ಎಂದು ತೋರುತ್ತದೆ. ಇದೀಗ ಪ್ರಿಯತಮನನ್ನು ಕಳೆದು ಕೊಂಡು ಹೆಣ್ಣು ಹಾವು ಒಂಟಿಯಾಗಿದೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.