Viral Video : ಬೈಕಿನ ಹಿಂಬದಿ ಸೀಟಲ್ಲಿ ಎತ್ತು ಕಟ್ಟಿ ಕೂರಿಸಿ ವೇಗವಾಗಿ ಸವಾರಿ ಮಾಡಿದ ಭೂಪ

ವ್ಯಕ್ತಿಯೊಬ್ಬ ಎತ್ತನ್ನು ಬೈಕಿನ ಹಿಂದಿನ ಸೀಟಿನಲ್ಲಿ ಕೂರಿಸಿ ಅದನ್ನು ಹಗ್ಗದಿಂದ ಕಟ್ಟಿ ಎತ್ತಿನ ಜೊತೆಗೆ ವೇಗವಾಗಿ ಬೈಕ್‌ ಸವಾರಿ ಮಾಡಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

Written by - Krishna N K | Last Updated : Sep 14, 2022, 07:13 PM IST
  • ಬೈಕಿನ ಹಿಂದಿನ ಸೀಟಿನಲ್ಲಿ ಎತ್ತನ್ನು ಕೂರಿಸಿ ಹಗ್ಗದಿಂದ ಕಟ್ಟಿ ವೇಗವಾಗಿ ಬೈಕ್‌ ಸವಾರಿ ಮಾಡಿದ ವ್ಯಕ್ತಿ
  • ಸಾಮಾಜಿಕ ಜಾಲತಾಣದಲ್ಲಿ ಹುಚ್ಚಾಟದ ವಿಡಿಯೋ ವೈರಲ್‌
  • ಬೈಕ್‌ ಸವಾರನ ಬ್ಯಾಲೆನ್ಸ್‌ಗೆ ಕೆಲವರು ತಲೆದೂಗಿದರೆ, ಹಲವರು ಮೂಕ ಪ್ರಾಣಿಗಳ ಜೀವದ ಜೊತೆ ಚಲ್ಲಾಟ ಸಲ್ಲದು ಎಂದು ಆಕ್ರೋಶ
Viral Video : ಬೈಕಿನ ಹಿಂಬದಿ ಸೀಟಲ್ಲಿ ಎತ್ತು ಕಟ್ಟಿ ಕೂರಿಸಿ ವೇಗವಾಗಿ ಸವಾರಿ ಮಾಡಿದ ಭೂಪ  title=

Viral video : ವ್ಯಕ್ತಿಯೊಬ್ಬ ಎತ್ತನ್ನು ಬೈಕಿನ ಹಿಂದಿನ ಸೀಟಿನಲ್ಲಿ ಕೂರಿಸಿ ಅದನ್ನು ಹಗ್ಗದಿಂದ ಕಟ್ಟಿ ಎತ್ತಿನ ಜೊತೆಗೆ ವೇಗವಾಗಿ ಬೈಕ್‌ ಸವಾರಿ ಮಾಡಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಹೌದು, ಸಾಮಾಜಿಕ ಜಾಲತಾಣದಲ್ಲಿ ಎಂತೆಂತಹ ವಿಡಿಯೋಗಳು ವೈರಲ್‌ ಆಗುತ್ತಿವೆ ಅಂದ್ರೆ ಮನರಂಜನೆಯ ಜೊತೆಗೆ ಅಪಾಯಕ್ಕೂ ದಾರಿ ಮಾಡಿಕೊಡುತ್ತವೆ. ಎಲ್ಲವನ್ನೂ ನಂಬಿ ನಾವು ಹಾಗೇ ಮಾಡೋಣ ಅಂತ ಕೈ ಹಾಕಿದ್ರೆ ಅಪಾಯ ಖಂಡಿತ. ಮನರಂಜನೆ ವಿಡಿಯೋಗಳನ್ನು ಅದೇ ರೀತಿಯಲ್ಲಿ ನೋಡಿದ್ರೆ ಉತ್ತಮ. ಅವರೂ ಮಾಡಿದ್ದಾರೆ ನಾವೂ ಮಾಡುವ ಅಂತ ಹೋದ್ರೆ ಕೈ ಸುಟ್ಟುಕೊಳ್ಳುವುದಂತು ಖಂಡಿತ. ಕೆಲವೊಂದಿಷ್ಟು ಆರೋಗ್ಯಕರ ವಿಷಯಗಳನ್ನು ಜಾಗರೂಕತೆಯಿಂದ ಮಾಡಿದರೆ ಪರವಾಗಿಲ್ಲ. ಹುಚ್ಚಾಟದ ವಿಡಿಯೋಗಳನ್ನು ನೋಡಿ ನೋಡದಂತೆ ಸುಮ್ಮನಿದ್ದರೆ ಒಳ್ಳೆಯದು.

ಇದನ್ನೂ ಓದಿ: ದೇಶದಲ್ಲಿ ನಡೆಯುವ ಗಲಭೆ, ಹಿಂಸಾಚಾರದ ಹಿಂದೆ ಬಿಜೆಪಿಯದ್ದೇ ಕೈವಾಡ

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊವೊಂದು ಸಖತ್‌ ವೈರಲ್‌ ಆಗಿದೆ. ವ್ಯಕ್ತಿಯೊಬ್ಬ ತಮ್ಮ ಬೈಕಿನ ಹಿಂಬದಿ ಸೀಟಿನಲ್ಲಿ ಎತ್ತನ್ನು ಕೂರಿಸಿ ಅದನ್ನು ಹಗ್ಗದಿಂದ ಕಟ್ಟಿ ವೇಗವಾಗಿ ಬೈಕ್‌ ಸವಾರಿ ಮಾಡಿರುವ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ. ಈ ವಿಡಿಯೋವನ್ನು ಅನಿಮಲ್ಸ್‌ಥೆನೇಚರ್‌ಟುಡೇ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋ ನೋಡಿದರ ನೆಟ್ಟಿಗರು ದಂಗಾಗಿದ್ದಾರೆ. ಬೈಕ್‌ ಸವಾರನ ಬ್ಯಾಲೆನ್ಸ್‌ ಮಾಡಿದ ರೀತಿಗೆ ಕೆಲವರು ತಲೆದೂಗಿದರೆ, ಇನ್ನೂ ಹಲವರು ಮೂಕ ಪ್ರಾಣಿಗಳ ಜೀವದ ಜೊತೆ ಚಲ್ಲಾಟ ಸಲ್ಲದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನೇ ಆಗಲಿ ಎತ್ತು ರೈತನ ಮಿತ್ರ ಅಲ್ಲದೆ ಪ್ರಾಣಿ, ಪಕ್ಷಿಗಳಿಗೂ ನೋವು-ನಲಿವು ಎಂಬ ಭಾವನೆ ಇರುತ್ತದೆ. ಆದ್ರೆ ಈ ರೀತಿ ಬೈಕ್‌ಗೆ ಕಟ್ಟಿ ಅಪಾಯಕರ ರೀತಿಯಲ್ಲಿ ಸವಾರಿ ಮಾಡಿರುವುದು ಎಷ್ಟು ಸರಿ ನೀವೇ ಹೇಳಿ. ಸದ್ಯ ಈ ಘಟನೆ ಎಲ್ಲಿ ಜರುಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News