ಮಧ್ಯ ಕೈರೋದಲ್ಲಿ ಭೀಕರ ಕಾರ್ ಬಾಂಬ್ ಸ್ಫೋಟ; 19 ಬಲಿ, 30 ಮಂದಿಗೆ ಗಂಭೀರ ಗಾಯ

ಕಾರು ಅಪಘಾತದಿಂದಾಗಿ ಸಂಭವಿಸಿದ ಸ್ಫೋಟದಲ್ಲಿ 19 ಮಂದಿ ಸಾವನ್ನಪ್ಪಿದ್ದು, 30 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Last Updated : Aug 5, 2019, 12:33 PM IST
ಮಧ್ಯ ಕೈರೋದಲ್ಲಿ ಭೀಕರ ಕಾರ್ ಬಾಂಬ್ ಸ್ಫೋಟ; 19 ಬಲಿ, 30 ಮಂದಿಗೆ ಗಂಭೀರ ಗಾಯ

ಕೈರೋ: ಮಧ್ಯ ಕೈರೋದಲ್ಲಿ ಕಾರು ಅಪಘಾತದಿಂದಾಗಿ ಸಂಭವಿಸಿದ ಸ್ಫೋಟದಲ್ಲಿ 19 ಮಂದಿ ಸಾವನ್ನಪ್ಪಿದ್ದು, 30 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಈಜಿಪ್ಟ್‌ನ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ. ಈ ಸ್ಫೋಟ ದಾಳಿ ಎಂದು ಸೂಚಿಸುವ ಯಾವುದೇ ಅಧಿಕೃತ ಹೇಳಿಕೆ ವರದಿಯಾಗಿಲ್ಲ. 

ಕೈರೋದ ನೈಲ್ ಕಾರ್ನಿಚೆ ರಸ್ತೆಯಲ್ಲಿ ಕಾರೊಂದು ಸಂಚಾರಿ ನಿಯಮವನ್ನು ಉಲ್ಲಂಘಿಸಿ ಚಲಿಸಿದಾಗ ಎದುರಿಗೆ ಬರುತ್ತಿದ್ದ 3 ಕಾರುಗಳಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ಬಳಿಕ ಕಾರು ಸ್ಫೋಟಗೊಂಡಿದೆ ಎಂದು ಆಂತರಿಕ ಸಚಿವಾಲಯ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದೆ.

ಸ್ಫೋಟದಿಂದಾಗಿ ಬೆಂಕಿಯ ತೀವ್ರತೆ ಪಕ್ಕದಲ್ಲಿದ್ದ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಗೂ ವ್ಯಾಪಿಸಿದ್ದರಿಂದ ಭಾಗಶಃ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಈಜಿಪ್ಟ್‌ನ ಪಬ್ಲಿಕ್ ಪ್ರಾಸಿಕ್ಯೂಟರ್ ಈ ಘಟನೆಯ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ರಾಯಿಟರ್ಸ್‌ಗೆ ತಿಳಿಸಿವೆ.

More Stories

Trending News