ಕಿರ್ಕುಕ್: ಇರಾಕ್'ನ ಕಿರ್ಕುಕ್ ಪ್ರದೇಶದಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ ಓರ್ವ ಸೈಣಿಕ ಸಾವನ್ನಪ್ಪಿದ್ದು, ಇಬ್ಬರು ತೀವ್ರ ಗಾಯಗೊಂಡಿದ್ದಾರೆ ಎಂದು ಮಿಲಿಟರಿ ಮತ್ತು ಭದ್ರತಾ ಮೂಲಗಳು ತಿಳಿಸಿವೆ.
ಕಿರ್ಕುಕ್ನ ನೈಋತ್ಯ ದಿಕ್ಕಿನಿಂದ 40 ಕಿಲೋಮೀಟರ್ (25 ಮೈಲುಗಳು) ದೂರದಲ್ಲಿರುವ ರಿಯಾದ್ ಪಟ್ಟಣದ ಪ್ರವೇಶದ್ವಾರದಲ್ಲಿರುವ ಸೆಕ್ಯುರಿಟಿ ಚೆಕ್ ಪಾಯಿಂಟ್ ಬಳಿ ಈ ಘಟನೆ ನಡೆದಿದೆ. ಈ ಘಟನೆಗೆ ಕಾರಣ ಯಾರು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಈ ಪ್ರದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಸಕ್ರಿಯರಾಗಿದ್ದಾರೆ ಎನ್ನಲಾಗಿದೆ.
ಎರಡು ವರ್ಷಗಳ ಹೋರಾಟದ ಬಳಿಕ ಡಿಸೆಂಬರ್ 2017ರಲ್ಲಿ ಇಸ್ಲಾಮಿಕ್ ರಾಜ್ಯದ ವಿರುದ್ಧ ಇರಾಕ್ ಜಯ ಸಾಧಿಸಿತ್ತು. ಆದಾಗ್ಯೂ, ದೇಶಾದ್ಯಂತ ಭದ್ರತಾ ಪಡೆಗಳ ಮೇಲೆ ದಂಗೆ-ರೀತಿಯ ದಾಳಿಯನ್ನು ಇಸ್ಲಾಮಿಕ್ ಸ್ಟೇಟ್ ಮುಂದುವರೆಸಿದೆ. ಕೇವಲ ಜನವರಿ ತಿಂಗಳಿನಲ್ಲಿ ಎರಡು ಕಾರ್ ಬಾಂಬ್ ಸ್ಪೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.