Afghanistan Crisis: ತಾಲಿಬಾನ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರ ಮೇಲೆ ಹಲ್ಲೆ

Afghanistan Crisis - ತಾಲಿಬಾನಿಗಳು (Taliban) ತನ್ನ ಮೇಲೆ ನಿರ್ದಾಕ್ಷಿಣ್ಯವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆಫ್ಘಾನಿಸ್ತಾನದ ಮಹಿಳಾ ಕಾರ್ಯಕರ್ತೆಯೋಬ್ಬರು ಆರೋಪಿಸಿದ್ದಾರೆ. ಈ ಮಹಿಳಾ ಕಾರ್ಯಕರ್ತೆ ಕಾಬೂಲ್ ನಲ್ಲಿ (Kabul) ನಡೆದ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ರಾಜಕೀಯ ಹಕ್ಕುಗಳಿಗಾಗಿ ನಡೆದ ಈ ಪ್ರದರ್ಶನದಲ್ಲಿ ಭಾಗಿಯಾಗಿದ್ದ ಈ ಮಹಿಳಾ ಕಾರ್ಯಕರ್ತೆಯ ವಿಡಿಯೋ ಕೂಡ ಪ್ರಕಟಗೊಂಡಿದೆ. ಈ ವಿಡಿಯೋದಲ್ಲಿ ಆಕೆಯ ತಲೆಗೆ ಗಂಭೀರ ಗಾಯವಾಗಿ ಮುಖದ ಮೇಲೆ ರಕ್ತ ಸುರಿಯುತ್ತಿರುವುದು ಕಂಡುಬಂದಿದೆ.

Written by - Nitin Tabib | Last Updated : Sep 4, 2021, 06:50 PM IST
  • ತಾಲಿಬಾನಿಗಳು (Taliban) ತನ್ನ ಮೇಲೆ ನಿರ್ದಾಕ್ಷಿಣ್ಯವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆಫ್ಘಾನಿಸ್ತಾನದ ಮಹಿಳಾ ಕಾರ್ಯಕರ್ತೆಯೋಬ್ಬರು ಆರೋಪಿಸಿದ್ದಾರೆ.
  • ಈ ಮಹಿಳಾ ಕಾರ್ಯಕರ್ತೆ ಕಾಬೂಲ್ ನಲ್ಲಿ (Kabul) ನಡೆದ ಪ್ರದರ್ಶನದಲ್ಲಿ ಭಾಗವಹಿಸಿದ್ದರು.
  • ರಾಜಕೀಯ ಹಕ್ಕುಗಳಿಗಾಗಿ ನಡೆದ ಈ ಪ್ರದರ್ಶನದಲ್ಲಿ ಭಾಗಿಯಾಗಿದ್ದ ಈ ಮಹಿಳಾ ಕಾರ್ಯಕರ್ತೆಯ ವಿಡಿಯೋ ಕೂಡ ಪ್ರಕಟಗೊಂಡಿದೆ.
Afghanistan Crisis: ತಾಲಿಬಾನ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರ ಮೇಲೆ ಹಲ್ಲೆ title=
Afghanistan Crisis (File Photo)

Afghanistan Crisis - ತಾಲಿಬಾನಿಗಳು (Taliban) ತನ್ನ ಮೇಲೆ ನಿರ್ದಾಕ್ಷಿಣ್ಯವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆಫ್ಘಾನಿಸ್ತಾನದ ಮಹಿಳಾ ಕಾರ್ಯಕರ್ತೆಯೋಬ್ಬರು ಆರೋಪಿಸಿದ್ದಾರೆ. ಈ ಮಹಿಳಾ ಕಾರ್ಯಕರ್ತೆ ಕಾಬೂಲ್ ನಲ್ಲಿ (Kabul) ನಡೆದ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ರಾಜಕೀಯ ಹಕ್ಕುಗಳಿಗಾಗಿ ನಡೆದ ಈ ಪ್ರದರ್ಶನದಲ್ಲಿ ಭಾಗಿಯಾಗಿದ್ದ ಈ ಮಹಿಳಾ ಕಾರ್ಯಕರ್ತೆಯ ವಿಡಿಯೋ ಕೂಡ ಪ್ರಕಟಗೊಂಡಿದೆ. ಈ ವಿಡಿಯೋದಲ್ಲಿ ಆಕೆಯ ತಲೆಗೆ ಗಂಭೀರ ಗಾಯವಾಗಿ ಮುಖದ ಮೇಲೆ ರಕ್ತ ಸುರಿಯುತ್ತಿರುವುದು ಕಂಡುಬಂದಿದೆ.

ಶನಿವಾರ ನಡೆದ ಪ್ರದರ್ಶನದ ವೇಳೆ ತಾಲಿಬಾನಿಗಳು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನರ್ಗಿಸ್ ಸದ್ದತ್  (Activist Nargis Saddat)ಆರೋಪಿಸಿದ್ದಾರೆ. ಆಫ್ಘಾನಿಸ್ತಾನದಲ್ಲಿ (Afghanistan) ತಾಲಿಬಾನ್ ಆಳ್ವಿಕೆಯಲ್ಲಿ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳೆಯರ ಹಕ್ಕುಗಳನ್ನು ಕೋರಿ ಈ ಪ್ರದರ್ಶನ ನಡೆಸಲಾಗಿತ್ತು. ತಾಲಿಬಾನ್ ಮೊದಲಿನಿಂದಲೂ ಈ ಪ್ರದರ್ಶನಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಅಲ್ಲಿನ ರಾಷ್ಟ್ರಪತಿ ಭವನದ ಮುಂದೆ ಪ್ರತಿಭಟನೆಲ್ಲಿ ನಿರತರಾದ ಮಹಿಳೆಯರ ಮೇಲೆ ಅಶ್ರುವಾಯು ಸಿದಿಸಿದೆ ಎಂದು 'Tolo News' ವರದಿ ಮಾಡಿದೆ.

ಇದನ್ನೂ ಓದಿ-ಎರಡು-ಮೂರು ದಿನಗಳಲ್ಲಿ ನೂತನ ಸರ್ಕಾರ ರಚನೆಗೆ ಸಜ್ಜಾದ ತಾಲಿಬಾನ್

ಈ ಕುರಿತು ಹೇಳಿಕೆ ನೀಡಿರುವ ಕಾರ್ಯಕರ್ತೆ ಹಾಗೂ ಪ್ರತಿಭಟನಾಕಾರರು ತಾವು ಪ್ರೆಸಿಡೆನ್ಶಿಯಲ್ ಪ್ಯಾಲೇಸ್ ಗೇಟ್ ಎದುರು ಪ್ರತಿಭಟನೆ ನಡೆಸಲು ಬಯಸಿದ್ದೆವು. ಆದರೆ ತಾಲಿಬಾನ್ ಅದಕ್ಕೆ ಸಮ್ಮತಿ ಸೂಚಿಸಿಲ್ಲ. ಕೆಲ ಮಾಧ್ಯಮ ಪ್ರತಿನಿಧಿಗಳು ಈ ಪ್ರತಿಭಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆಯರನ್ನು ಚದುರಿಸಲು ಅಶ್ರುವಾಯು ಸಿಡಿಸುತ್ತಿರುವುದು ಈ  ವಿಡಿಯೋದಲ್ಲಿ ಕಂಡುಬರುತ್ತಿದೆ. 

ಇದನ್ನೂ ಓದಿ-Afghanistan Crisis: ತಾಲಿಬಾನ್ ಗುಂಡಿನ ದಾಳಿಗೆ ಮಕ್ಕಳು ಸೇರಿ 17 ಮಂದಿ ಬಲಿ..!

ಇನ್ನೊಂದೆಡೆ ಅಲ್ಲಿ ನರೆದಿದ್ದ ಮಹಿಳೆಯರನ್ನು ಚದುರಿಸಲು ತಾಲಿಬಾನಿಗಳು ಗುಂಡಿನ ದಾಳಿ ಕೂಡ ನಡೆಸಿದ್ದಾರೆ ಎಂದು ಕೆಲ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಖಾಮಾ ಪ್ರೆಸ್ ನ್ಯೂಸ್ ಏಜೆನ್ಸಿ ಪ್ರಕಾರ, ತಾಲಿಬಾನ್ ಪತ್ರಕರ್ತರನ್ನು ಅಲ್ಲಿಂದ ತೆರಳಲು ಸೂಚಿಸಿದ್ದಾರೆ ಎಂದಿದೆ. ಕಾಬೂಲ್ ಅನ್ನು ತಾಲಿಬಾನಿಗಳು ತನ್ನ ವಶಕ್ಕೆ ಪಡೆದ ಬಳಿಕ ಮಹಿಳೆಯರು ನಡೆಸುತ್ತಿರುವ ನಾಲ್ಕನೇ ಪ್ರದರ್ಶನ ಇದಾಗಿದೆ. ಈ ಹಿಂದೆ ಹೆರಾತ್ ಪ್ರದೇಶದಲ್ಲಿ ಮತ್ತು ಇತರ ಪ್ರಾಂತ್ಯಗಳಲ್ಲಿ ಮಹಿಳಾ ಪ್ರತಿಭಟನಾಕಾರರು ತಮ್ಮ ಹಕ್ಕುಗಳಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-Eastern Economic Forum: 'ಭಾರತ-ರಷ್ಯಾ ಸ್ನೇಹ ಸಂಬಂಧವು ಕಷ್ಟಕರ ಸಂದರ್ಭಲ್ಲಿಯೂ ಗಟ್ಟಿಯಾಗಿದೆ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News