ನವದೆಹಲಿ : ನಿಮ್ಮ ಜೀವನದಲ್ಲಿ ನೀವು ತಿಂದಿರುವ ಅತ್ಯಂತ ದುಬಾರಿ ಹಣ್ಣು ಯಾವುದು? ಆ ಹಣ್ಣನ್ನು ನೀವು ಯಾವಾಗ ತಿಂದಿದ್ದೀರಿ? ಆ ಹಣ್ಣಿನ ಬೆಲೆ ಎಷ್ಟು ಎನ್ನುವುದು ನೆನಪಿದೆಯಾ? ಭಾರತದಲ್ಲಿ, ವಿವಿಧ ಹಣ್ಣುಗಳು ಮತ್ತು ತರಕಾರಿಗಳು ಸಿಗುತ್ತವೆ. ಋತುವಿಗೆ ತಕ್ಕಂತೆ ಆ ಹಣ್ಣಿನ ಬೆಲೆಯೂ ಬದಲಾಗುತ್ತಿರುತ್ತದೆ. ಕೆಲವೊಮ್ಮೆ ಬಹಳ ಅಗ್ಗದ ಬೆಲೆಗೆ ಸಿಗುವ ಹಣ್ಣು, ಇನ್ನು ಕೆಲವು ಋತುಗಳಲ್ಲಿ ಭಾರೀ ದುಬಾರಿಯಾಗಿರುತ್ತದೆ (expensive fruit). ಈ ಜಗತ್ತಿನಲ್ಲಿ ಮಾರಾಟವಾಗುವ ಅತ್ಯಂತ ದುಬಾರಿ ಹಣ್ಣು ಯಾವುದು ಎನ್ನುವ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಈ ಹಣ್ಣಿನ ಬೆಲೆ ಲಕ್ಷಗಳಲ್ಲಿದ್ದರೆ?
ಚಿನ್ನದ ಬೆಲೆಗಿಂತ ಹೆಚ್ಚು ದುಬಾರಿ ಈ ಹಣ್ಣು :
ಜಗತ್ತಿನಲ್ಲಿ, ಹಲವಾರು ಚಿತ್ರ ವಿಚಿತ್ರ ಸುದ್ದಿಗಳನ್ನು (wired news) ನಾವು ಕೇಳುತ್ತಲೇ ಇರುತ್ತೇವೆ. ಕೆಲವೊಂದು ಸುದ್ದಿಗಳು ನಿಜಕ್ಕೂ ಆಘಾತಕಾರಿಯಾಗಿರುತ್ತವೆ. ಇನ್ನು ಕೆಲವು ದಿಗ್ಭ್ರಮೆಗೊಳಿಸುತ್ತದೆ. 100, 200, 500, 1000 ಅಥವಾ ಅದಕ್ಕಿಂತ ಹೆಚ್ಚು ಬೆಲೆ ಬಾಳುವ ಹಣ್ಣುಗಳನ್ನು (Expensive fruits) ತಿನ್ನುವ ಕ್ರೇಜ್ ಕೆಲವರಲ್ಲಿ ಇರುತ್ತದೆ. ನಾವಿಂದು ಹೇಳಲು ಹೊರಟಿರುವುದು ಅಂತಹ ಒಂದು ಹಣ್ಣಿನ ಬಗ್ಗೆ. ಆದರೆ ಆ ಹಣ್ಣಿನ ಬೆಲೆ ಲಕ್ಷಗಳಲ್ಲಿದೆ. ಈ ಹಣ್ಣನ್ನು ತಿನ್ನುವ ಬದಕಲು ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಈ ದುಬಾರಿ ಹಣ್ಣನ್ನು ಖರೀದಿಸಲು ಜನರು ಹರಾಜಿನಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ : Afghanistan: ಇಸ್ಲಾಮಿಕ್ ಸ್ಟೇಟ್ ದಾಳಿಯಲ್ಲಿ ತಾಲಿಬಾನ್ ವಿಶೇಷ ಕಮಾಂಡರ್ ಹತ್ಯೆ, ಪಾಕಿಸ್ತಾನಕ್ಕೂ ದೊಡ್ಡ ಹೊಡೆತ
ಈ ಹಣ್ಣನ್ನು ಜಪಾನ್‌ನಲ್ಲಿ ಈ ಹೆಸರಿನಿಂದ ಕರೆಯಲಾಗುತ್ತದೆ :
ಈ ಹಣ್ಣನ್ನು ಯುಬರಿ ಮೆಲನ್ (Yubari melon) ಎಂದು ಕರೆಯಲಾಗುತ್ತದೆ. ಇದು ವಿಶ್ವದ ಅತ್ಯಂತ ದುಬಾರಿ ಹಣ್ಣು ಎಂದು ಹೇಳಲಾಗುತ್ತದೆ. ಈ ಹಣ್ಣನ್ನು ಜಪಾನ್‌ನಲ್ಲಿ ಮಾತ್ರ ಬೆಳೆಯಲಾಗುತ್ತದೆ. ಈ ಹಣ್ಣನ್ನು ಶ್ರೀಮಂತರು ಮಾತ್ರ ಖರೀದಿಸಬಹುದು ಮತ್ತು ತಿನ್ನಬಹುದು. ಜಪಾನ್‌ನ ಯುಬರಿ ಮೆಲನ್ ಅನ್ನು ಜಪಾನ್‌ನ (Japan) ಯುಬರಿ ಪ್ರದೇಶದಲ್ಲಿ ಪ್ರತ್ಯೇಕವಾಗಿ ಬೆಳೆಯಲಾಗುತ್ತದೆ. ಎರಡು ಯುಬರಿ ಕ ಮೆಲನ್ 2019 ರಲ್ಲಿ ದಾಖಲೆಯ ಬೆಲೆ ಪಡೆದಿತ್ತು. ಆ ಹಣ್ಣುಗಳು ಹರಾಜಿನಲ್ಲಿ 45,000 $ ಅಂದರೆ ಅಂದಾಜು 33,00,000 ರೂ ಪಡೆದಿತ್ತು. ಈ ಹಣ್ಣು ಬಹಳ ಸಿಹಿಯಾಗಿರುತ್ತದೆ ಮತ್ತು ಒಳಗಿನಿಂದ ಕಿತ್ತಳೆ ಬಣ್ಣದಲ್ಲಿ ಕಾಣುತ್ತದೆ.
ಇದನ್ನೂ ಓದಿ : Asteroid:ಭೂಮಿಯ ಅತ್ಯಂತ ಸನೀಹಕ್ಕೆ ಬಂದ ಕ್ಷುದ್ರಗ್ರಹ, ವಿಜ್ಞಾನಿಗಳು ಕೂಡ ಇದನ್ನು ಅಂದಾಜಿಸಿರಲ್ಲಿಲ್ಲವಂತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.