ಬಾಂಗ್ಲಾದೇಶ ಹಿಂಸಾಚಾರ : ದುರ್ಗಾ ಪೂಜೆ ನಡೆಯುವ ಸ್ಥಳದಲ್ಲಿ ಕುರಾನ್, ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಬಂಧನ

ದುರ್ಗಾ ಪೂಜೆ ಹಬ್ಬದ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ನಿಂದನಾತ್ಮಕ ಪೋಸ್ಟ್ ಶೇರ್ ಮಾಡಿದ ನಂತರ  ದೇವಸ್ಥಾನಗಳ ಮೇಲೆ ದಾಳಿ ಮಾಡಲಾಗಿತ್ತು. ಭಾನುವಾರ ತಡರಾತ್ರಿ, ಒಂದು ಗುಂಪು 66 ಮನೆಗಳನ್ನು ಹಾನಿಗೊಳಿಸಿದ್ದು, ಕನಿಷ್ಠ 20 ಮನೆಗಳನ್ನು ಸುಟ್ಟುಹಾಕಿದೆ.

Written by - Ranjitha R K | Last Updated : Oct 22, 2021, 05:47 PM IST
  • ಬಾಂಗ್ಲಾದೇಶ ಹಿಂಸಾಚಾರದ ಆರೋಪಿಯ ಬಂಧನ
  • ದುರ್ಗಾ ಪೂಜಾ ಸ್ಥಳದಲ್ಲಿ ಕುರಾನ್ ಇಟ್ಟಿರುವ ವ್ಯಕ್ತಿ
  • 35 ವರ್ಷದ ವ್ಯಕ್ತಿಯ ಬಂಧನ
ಬಾಂಗ್ಲಾದೇಶ ಹಿಂಸಾಚಾರ : ದುರ್ಗಾ ಪೂಜೆ ನಡೆಯುವ ಸ್ಥಳದಲ್ಲಿ ಕುರಾನ್,  ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಬಂಧನ title=
ಬಾಂಗ್ಲಾದೇಶ ಹಿಂಸಾಚಾರದ ಆರೋಪಿಯ ಬಂಧನ (file photo)

ಢಾಕಾ : ಬಾಂಗ್ಲಾದೇಶದಲ್ಲಿ ದುರ್ಗಾಪೂಜೆಯ (Durga pooja) ಸಂದರ್ಭದಲ್ಲಿ ಹಿಂದೂಗಳ ಮೇಲೆ ಇತ್ತೀಚೆಗೆ ನಡೆದ ಹಿಂಸಾಚಾರಕ್ಕೆ (Bangladesh violence) ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನನ್ನು 35 ವರ್ಷದ ಇಕ್ಬಾಲ್ ಹುಸೇನ್ ಎಂದು ಗುರುತಿಸಲಾಗಿದೆ.  ಮೂಲಗಳ ಪ್ರಕಾರ ಇಕ್ಬಾಲ್ ಹುಸೇನ್ ಅವರನ್ನು ಗುರುವಾರ ರಾತ್ರಿ ಕಾಕ್ಸ್ ಬಜಾರ್ ನಿಂದ ಬಂಧಿಸಲಾಗಿದೆ.  ದುರ್ಗಾ ಪೂಜೆ ನಡೆಯುವ ಸ್ಥಳದಲ್ಲಿ ಕುರಾನ್‌ ಪ್ರತಿಗಳನ್ನು ಇಟ್ಟಿರುವ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. 

ಬಂಧನವನ್ನು ಖಚಿತಪಡಿಸಿದ ಬಾಂಗ್ಲಾದೇಶ ಗೃಹ ಸಚಿವರು : 
ದುರ್ಗಾ ಪೂಜೆ (Durga pooja) ಹಬ್ಬದ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ (Social media) ನಿಂದನಾತ್ಮಕ ಪೋಸ್ಟ್ ಶೇರ್ ಮಾಡಿದ ನಂತರ  ದೇವಸ್ಥಾನಗಳ ಮೇಲೆ ದಾಳಿ ಮಾಡಲಾಗಿತ್ತು. ಭಾನುವಾರ ತಡರಾತ್ರಿ, ಒಂದು ಗುಂಪು 66 ಮನೆಗಳನ್ನು ಹಾನಿಗೊಳಿಸಿದ್ದು, ಕನಿಷ್ಠ 20 ಮನೆಗಳನ್ನು ಸುಟ್ಟುಹಾಕಿದೆ. ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಕಾಕ್ಸ್ ಬಜಾರ್ ಬೀಚ್ ನಲ್ಲಿ ಇಕ್ಬಾಲ್ ನನ್ನು ಬಂಧಿಸಲಾಗಿರುವುದಾಗಿ ಕಾಕ್ಸ್ ಬಜಾರ್ ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಫಿಕುಲ್ ಇಸ್ಲಾಂ ತಿಳಿಸಿದ್ದಾರೆ. ಬಾಂಗ್ಲಾದೇಶದ ಗೃಹ ಸಚಿವ ಅಸಾದುಜುಮಾನ್ ಖಾನ್ ಕಮಲ್ ಈ ಬಂಧನವನ್ನು ದೃಢಪಡಿಸಿದ್ದಾರೆ .

ಇದನ್ನೂ ಓದಿ :  Corona Returns In China: ಚೀನಾದಲ್ಲಿ ಮತ್ತೆ ಕರೋನಾ ಹಾವಳಿ; ಹಲವು ನಗರಗಳಲ್ಲಿ ಲಾಕ್‌ಡೌನ್‌

ಸಿಸಿಟಿವಿ ದೃಶ್ಯಾವಳಿಗಳಿಂದ ಗುರುತು :
ಅಕ್ಟೋಬರ್ 13 ರಂದು ನಗರದ ನನುವಾ ದಿಗಿರ್ ಪರ್ ನಲ್ಲಿ ಪೂಜಾ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳಿಂದ (CCTV Visual) ಕುರಾನ್ ಪ್ರತಿಯನ್ನು ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಸುದ್ದಿಯ ಪ್ರಕಾರ, ಬಂಧನ ಹೊರತುಪಡಿಸಿ ಬೇರೆ ಯಾವುದೇ ಮಾಹಿತಿಯನ್ನು ಪೊಲೀಸರು ನೀಡಿಲ್ಲ. ಹುಸೇನ್ ಮಾನಸಿಕ ಸ್ಥಿತಿ ಉತ್ತಮವಾಗಿಲ್ಲ. ಬೇರೆ ಯಾರೋ ಇದರ ಲಾಭವನ್ನು ಪಡೆದುಕೊಂಡು ಕುರಾನ್ ಅನ್ನು ದುರ್ಗಾ ಪೂಜಾ ಸ್ಥಳದಲ್ಲಿ ಇಟ್ಟುಹೋಗುವಂತೆ ಮಾಡಿರಬೇಕು ಎಂದು ಹುಸೇನ್ ಕುಟುಂಬಸ್ಥರು ಆರೋಪಿಸಿದ್ದಾರೆ. ದೇಶಾದ್ಯಂತ ಹರಡಿರುವ ಗಲಭೆಯಲ್ಲಿ 7 ಜನರು ಸಾವನ್ನಪ್ಪಿದ್ದಾರೆ ಮತ್ತು ಒಂದು  ಸಮುದಾಯದ ಅನೇಕ ಮನೆಗಳು ಮತ್ತು ವ್ಯಾಪಾರ ಸಂಸ್ಥೆಗಳು ಹಾನಿಗೊಳಗಾಗಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿ : TRUTH Social: ಸ್ವಂತ ಸೋಶಿಯಲ್ ಮೀಡಿಯಾ ವೇದಿಕೆ ಚಾಲನೆಗೆ ಮುಂದಾದ ಡೊನಾಲ್ಡ್ ಟ್ರಂಪ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News