ಈರುಳ್ಳಿ ರಪ್ತು ನಿಷೇಧ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಅಡುಗೆ ಮನೆಯವರೆಗೆ ತಲುಪಿದಾಗ...!

 ಈರುಳ್ಳಿ ರಫ್ತು ನಿಷೇಧ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಅಡುಗೆಮನೆಯ ಮೇಲೆ ಪರಿಣಾಮ ಬೀರಿದೆ ಎಂದು ತೋರುತ್ತದೆ.

Last Updated : Oct 4, 2019, 05:45 PM IST
 ಈರುಳ್ಳಿ ರಪ್ತು ನಿಷೇಧ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಅಡುಗೆ ಮನೆಯವರೆಗೆ ತಲುಪಿದಾಗ...!  title=

ನವದೆಹಲಿ: ಈರುಳ್ಳಿ ರಫ್ತು ನಿಷೇಧ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಅಡುಗೆಮನೆಯ ಮೇಲೆ ಪರಿಣಾಮ ಬೀರಿದೆ ಎಂದು ತೋರುತ್ತದೆ.

ನವದೆಹಲಿಯಲ್ಲಿ ನಡೆದ ಭಾರತ-ಬಾಂಗ್ಲಾದೇಶದ ವ್ಯಾಪಾರ ವೇದಿಕೆಯಲ್ಲಿ ಭಾಗವಹಿಸಿ ಮಾತನಾಡಿದ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಈರುಳ್ಳಿ ರಫ್ತು ನಿಲ್ಲಿಸುವ ಭಾರತದ ಹಠಾತ್ ನಿರ್ಧಾರ ತನ್ನ ದೇಶವಾಸಿಗಳಿಗೆ ಸ್ವಲ್ಪ ತೊಂದರೆಯಾಗಿದೆ ಎಂದು ಹಿಂದಿಯಲ್ಲಿ ಪ್ರಸ್ತಾಪಿಸಿದರು.

'ಪ್ಯಾಜ್ ಮೇ ಥೋಡಾ ದಿಕ್ಕತ್ ಹೋ ಗಯಾ ಹಮರೆ ಲಿಯೆ. ಮುಜೆ ಮಾಲೂಮ್ ನಹಿ ಕ್ಯುನ್ ಆಪ್ನೆ ಪ್ಯಾಜ್ ಬಂದ್ ಕರ್ ದಿಯಾ? ಮೈನೆ ಕುಕ್ ಕೋ ಬೋಲ್ ದಿಯಾ ಅಬ್ ಸೆ ಖಾನಾ ಮೇ ಪಯಾಜ್ ಬಂದ್ ಕರ್ದೋ. (ನೀವು ಈರುಳ್ಳಿ ರಫ್ತು ಯಾಕೆ ನಿಲ್ಲಿಸಿದ್ದೀರಿ ಎಂದು ನನಗೆ ಗೊತ್ತಿಲ್ಲ.. ಹಾಗಾಗಿ ನಾನು ಏನು ಮಾಡಿದ್ದೇನೆಂದರೆ, ಈರುಳ್ಳಿಯನ್ನು ಆಹಾರದಲ್ಲಿ ಬಳಸದಂತೆ ನಾನು ನನ್ನ ಅಡುಗೆಯವರಿಗೆ ಹೇಳಿದೆ') ಎಂದು ಹೇಳಿದಾಗ ಸಭಾಂಗಣ ಗೊಳ್ಳೆಂದು ನಕ್ಕಿತು. 

ಭಾರತ ಸರ್ಕಾರ ಸೆಪ್ಟೆಂಬರ್ 29 ರಂದು ಈರುಳ್ಳಿ ರಫ್ತು ನಿಷೇಧಿಸಿದ ಹಿನ್ನಲೆಯಲ್ಲಿ ಬಾಂಗ್ಲಾದೇಶಕ್ಕೂ ಪ್ರಭಾವ ಬೀರಿದೆ ಎನ್ನುವುದನ್ನು ಅವರು ಲಘು ಧಾಟಿಯಲ್ಲಿ ಹೇಳಿದರು. 'ಅಂತಹ ನಿರ್ಧಾರಗಳ ಸೂಚನೆ ಮುಂಚಿತವಾಗಿ ನೀಡಿದರೆ ಸಹಾಯವಾಗುತ್ತದೆ. ಇದ್ದಕ್ಕಿದ್ದಂತೆ, ನೀವು ನಿಲ್ಲಿಸಿದ್ದರಿಂದಾಗಿ ಮತ್ತು ಅದು ನಮಗೆ ಕಷ್ಟಕರವಾಯಿತು. ಭವಿಷ್ಯದಲ್ಲಿ, ನೀವು ಅಂತಹ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದರೆ, ಮುಂಚಿತವಾಗಿ ತಿಳಿಸಿ ಎಂದು ಅವರು ವಿನಂತಿಸಿಕೊಂಡರು.

ನವದೆಹಲಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಉಪಸ್ಥಿತರಿದ್ದರು.

 

Trending News