ದೊಡ್ಡ ಕಿವಿಗಳು, ಕೂದಲಿಲ್ಲದ ದೇಹ.. ವಿಚಿತ್ರ ಪ್ರಾಣಿಯ ಜನನದಿಂದ ಆಶ್ಚರ್ಯಚಕಿತರಾದ ಜನರು

Aardvark: ಯುಕೆ ಮೃಗಾಲಯದಲ್ಲಿ ಆರ್ಡ್‌ವರ್ಕ್ ಮೊದಲ ಬಾರಿಗೆ ಜನಿಸಿತು. ಈ ವಿಚಿತ್ರವಾದ ಪ್ರಾಣಿ ಮುಖ್ಯವಾಗಿ ಆಫ್ರಿಕಾದಲ್ಲಿ ಕಂಡುಬರುತ್ತದೆ, ಅಲ್ಲಿ ಮಾಂಸಕ್ಕಾಗಿ ಬೇಟೆಯಾಡಲಾಗುತ್ತಿದೆ.

Written by - Chetana Devarmani | Last Updated : Feb 21, 2022, 10:58 AM IST
  • ಈ ವಿಚಿತ್ರ ಪ್ರಾಣಿ ಆಫ್ರಿಕಾದಲ್ಲಿ ಕಂಡುಬರುತ್ತದೆ
  • ಇರುವೆಗಳು ಮತ್ತು ಗೆದ್ದಲುಗಳನ್ನು ತಿನ್ನುತ್ತದೆ
  • ಯುಕೆ ಮೃಗಾಲಯದಲ್ಲಿ ಆರ್ಡ್‌ವರ್ಕ್ ಮೊದಲ ಬಾರಿಗೆ ಜನಿಸಿತು
ದೊಡ್ಡ ಕಿವಿಗಳು, ಕೂದಲಿಲ್ಲದ ದೇಹ.. ವಿಚಿತ್ರ ಪ್ರಾಣಿಯ ಜನನದಿಂದ ಆಶ್ಚರ್ಯಚಕಿತರಾದ ಜನರು  title=
ಆರ್ಡ್‌ವರ್ಕ್‌

ಲಂಡನ್: ತನ್ನ 90 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಬ್ರಿಟನ್‌ನ (Britain) ಚೆಸ್ಟರ್ ಮೃಗಾಲಯದಲ್ಲಿ (Chester Zoo) ಆರ್ಡ್‌ವರ್ಕ್‌ ಹುಟ್ಟಿದೆ. ಈ ಬಗ್ಗೆ ಮಾಹಿತಿ ನೀಡಿದ ಕ್ಸು, ಆರ್ಡರ್ಕ್ ಹೆಣ್ಣು ಎಂದು ಹೇಳಿದ್ದಾರೆ. ಹ್ಯಾರಿ ಪಾಟರ್ ಸರಣಿಯ ಡಾಬಿ ಪಾತ್ರದ ನಂತರ ಇದನ್ನು ಹೆಸರಿಸಲಾಗಿದೆ. ಆರ್ಡ್‌ವರ್ಕ್‌ಗಳು (Aardvark) ಉಪ-ಸಹಾರನ್ ಆಫ್ರಿಕಾದಲ್ಲಿ ಕಂಡುಬರುತ್ತವೆ. ಅಲ್ಲಿ ಕೃಷಿ ಅಭಿವೃದ್ಧಿಯ ಪರಿಣಾಮವಾಗಿ ಅವುಗಳ ಆವಾಸಸ್ಥಾನವು ನಾಶವಾಗುತ್ತಿದೆ.

ಇದನ್ನೂ ಓದಿ:World’s Biggest Strawberry: ವಿಶ್ವದ ಅತಿ ದೊಡ್ಡ ಗಾತ್ರದ ಸ್ಟ್ರಾಬೆರಿ ಇದು, ಇಲ್ಲಿದೆ ಆಶ್ಚರ್ಯಕ್ಕೀಡು ಮಾಡುವ VIRAL VIDEO

ಮೃಗಾಲಯವು ತನ್ನ ವೆಬ್‌ಸೈಟ್‌ನಲ್ಲಿ ಬೇಬಿ ಆರ್ಡ್‌ವರ್ಕ್ (Baby Aardvark) ದೊಡ್ಡ ಕೊಕ್ಕೆಯ ಕಿವಿಗಳು, ಕೂದಲು ಇಲ್ಲದೆ ಸುಕ್ಕುಗಟ್ಟಿದ ಚರ್ಮ ಮತ್ತು ದೊಡ್ಡ ಉಗುರುಗಳನ್ನು ಹೊಂದಿದೆ. ಪ್ರತಿ ಕೆಲವು ಗಂಟೆಗಳಿಗೊಮ್ಮೆ ಅದಕ್ಕೆ ಆಹಾರ ನೀಡಲಾಗುತ್ತಿದ್ದು, ತಜ್ಞರ ತಂಡ ನಿರಂತರವಾಗಿ ನಿಗಾ ವಹಿಸುತ್ತಿದೆ. ಈ ಮೃಗಾಲಯದ 90 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಆರ್ಡ್‌ವರ್ಕ್ ಹುಟ್ಟಿದ್ದು, ಆರ್ಡ್‌ವರ್ಕ್ ಪ್ರಿಯರಿಗೆ ಇದು ಅದ್ಭುತ ಕ್ಷಣವಾಗಿದೆ.

ರೈತರೊಂದಿಗೆ ಘರ್ಷಣೆಯಿಂದ ಆರ್ಡ್‌ವರ್ಕ್‌ಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಮಾಂಸಕ್ಕಾಗಿ ಬೇಟೆಯಾಡುತ್ತಿದ್ದಾರೆ ಎಂಬ ವರದಿಗಳೂ ಇವೆ. ಟ್ವಿಲೈಟ್ ತಂಡದ ಮ್ಯಾನೇಜರ್ ಡೇವ್ ವೈಟ್ ಅವರು ಈ ಮೃಗಾಲಯದಲ್ಲಿ ಜನಿಸಿದ ಮೊದಲ ಆರ್ಡ್‌ವರ್ಕ್ 

ಈ ಮಗು ತನ್ನ ತಾಯಿಯ ಪಕ್ಕದಲ್ಲಿ ಮಲಗಿರುವುದನ್ನು ನಾವು ನೋಡಿದಾಗ, ಅವನು ಹ್ಯಾರಿ ಪಾಟರ್ ಪಾತ್ರದ ಡಾಬಿಯಂತೆ ಕಾಣುತ್ತಿದ್ದನು, ಆದ್ದರಿಂದ ನಾವು ಅವನಿಗೆ ಅದೇ ಹೆಸರಿಟ್ಟಿದ್ದೇವೆ ಎಂದು ಡೇವ್ ವೈಟ್ ಹೇಳಿದರು.

ಇದನ್ನೂ ಓದಿ: ಕೊರೊನಾ ನಂತರ ಹೊಸ ಸಾಂಕ್ರಾಮಿಕದ ಬಗ್ಗೆ ಎಚ್ಚರಿಕೆ ನೀಡಿದ ಬಿಲ್ ಗೇಟ್ಸ್

ಯುರೋಪ್‌ನ ಪ್ರಾಣಿಸಂಗ್ರಹಾಲಯಗಳಲ್ಲಿ ಕೇವಲ 66 ಆರ್ಡ್‌ವರ್ಕ್‌ಗಳು ಉಳಿದಿವೆ ಮತ್ತು ಪ್ರಪಂಚದಾದ್ಯಂತದ ಪ್ರಾಣಿಸಂಗ್ರಹಾಲಯಗಳಲ್ಲಿ ಕೇವಲ 109 ಮಾತ್ರ ಉಳಿದಿವೆ. ಈ ಪ್ರಾಣಿಗಳು ಇರುವೆಗಳು ಮತ್ತು ಗೆದ್ದಲುಗಳನ್ನು ತಿಂದು ಬದುಕುತ್ತವೆ. ಇವು ಆಹಾರವನ್ನು ಗುರುತಿಸಲು ತಮ್ಮ ಉದ್ದನೆಯ ಮೂಗು ಮತ್ತು ವಾಸನೆ ಗ್ರಹಿಸುವ ಶಕ್ತಿಯನ್ನು ಬಳಸುತ್ತವೆ. ಅವರ ನಾಲಿಗೆ 25 ಸೆಂ.ಮೀ ಉದ್ದವಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News