close

News WrapGet Handpicked Stories from our editors directly to your mailbox

ಕಾಬೂಲ್‌ನ ಮದುವೆ ಮಂಟಪದಲ್ಲಿ ಬಾಂಬ್ ಸ್ಫೋಟ; 30ಕ್ಕೂ ಹೆಚ್ಚು ಮಂದಿ ಸಾವು, 90 ಮಂದಿಗೆ ಗಾಯ

ಶನಿವಾರ ರಾತ್ರಿ 10.40ರ ಸುಮಾರಿಗೆ ಕಾಬೂಲ್‌ನ ಪೊಲೀಸ್ ಜಿಲ್ಲೆ 6ರ ಶಹರ್-ಎ-ದುಬೈ ವೆಡ್ಡಿಂಗ್ ಹಾಲ್ ಒಳಗೆ ಸ್ಫೋಟ ಸಂಭವಿಸಿದೆ.

IANS | Updated: Aug 18, 2019 , 07:27 AM IST
ಕಾಬೂಲ್‌ನ ಮದುವೆ ಮಂಟಪದಲ್ಲಿ ಬಾಂಬ್ ಸ್ಫೋಟ; 30ಕ್ಕೂ ಹೆಚ್ಚು ಮಂದಿ ಸಾವು, 90 ಮಂದಿಗೆ ಗಾಯ

ಕಾಬೂಲ್: ಅಘಾನಿಸ್ತಾನದ ರಾಜಧಾನಿ ಕಾಬೂಲ್‌ನ ವೆಡ್ಡಿಂಗ್ ಹಾಲ್ ನಲ್ಲಿ ಶನಿವಾರ ನಡೆದ ಬಾಂಬ್ ಸ್ಫೋಟದಲ್ಲಿ 30ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಆಂತರಿಕ ಸಚಿವಾಲಯದ ವಕ್ತಾರರು ಭಾನುವಾರ ಮುಂಜಾನೆ ದೃಢಪಡಿಸಿದ್ದಾರೆ.

ಶನಿವಾರ ರಾತ್ರಿ 10.40ರ ಸುಮಾರಿಗೆ ಕಾಬೂಲ್‌ನ ಪೊಲೀಸ್ ಜಿಲ್ಲೆ 6ರ ಶಹರ್-ಎ-ದುಬೈ ವೆಡ್ಡಿಂಗ್ ಹಾಲ್ ಒಳಗೆ ಸ್ಫೋಟ ಸಂಭವಿಸಿದೆ ಎಂದು ವಕ್ತಾರ ನಸ್ರತ್ ರಹೀಮಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ ಎಂದು ಕ್ಸಿನ್ಹುವಾ ವರದಿ ಮಾಡಿದೆ.

"ಘಟನೆಯಲ್ಲಿ ಗಾಯಗೊಂಡವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಸ್ಫೋಟದ ಸ್ವರೂಪ ಮತ್ತು ಕೊಲ್ಲಲ್ಪಟ್ಟ ಮತ್ತು ಗಾಯಗೊಂಡವರ ಸಂಖ್ಯೆಯನ್ನು ಬಳಿಕ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗುವುದು" ಎಂದು ಅವರು ಹೇಳಿದ್ದಾರೆ.

ಮೂಲಗಳ ಪ್ರಕಾರ, ಎರಡು ಅಂತಸ್ತಿನ ಕಟ್ಟಡದಲ್ಲಿ ಸ್ಫೋಟ ಸಂಭವಿಸಿದ ಸಮಯದಲ್ಲಿ ಮತಪದ ಬಾಲಿ ಒಂದು ಡಜನ್ ಗೂ ಅಧಿಕ ಮಂದಿ ಇದ್ದರು ಎನ್ನಲಾಗಿದೆ. ಘಟನೆಯಲ್ಲಿ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 90 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಈ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಭಯೋತ್ಪಾದಕ ದಾಳಿ ಎನ್ನಲಾಗಿದೆ. ಸುಮಾರು 5 ಮಿಲಿಯನ್ ಜನಸಂಖ್ಯೆ ಹೊಂದಿರುವ ರಾಜಧಾನಿ ಕಳೆದ ಎರಡು ವರ್ಷಗಳಿಂದ ಸರಣಿ ಭಯೋತ್ಪಾದಕ ದಾಳಿಗೆ ತುತ್ತಾಗಿದೆ.