BrahMos-2 : ಭಾರತದ ಆ ‘ಬ್ರಹ್ಮಾಸ್ತ್ರವನ್ನು ನೋಡಿ ನಿದ್ದೆಯಲ್ಲೂ ನಡುಗಿದ ಪಾಕ್.!

ಬ್ರಹ್ಮೋಸ್ ತಾಕತ್ತು ಅದರ ವೇಗ. ಶಬ್ದಾತೀತ ವೇಗದಲ್ಲಿ ಸಿಡಿಯುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಅದನ್ನೊಮ್ಮೆ ಕಲ್ಪಿಸಿಕೊಳ್ಳಿ. ಬ್ರಹ್ಮೋಸ್ 2 ಕ್ಷಿಪಣಿಯ  ಸ್ಪೀಡ್ 8.5 ಮ್ಯಾಕ್. ಅಂದರೆ ಶಬ್ದದ ವೇಗಕ್ಕಿಂತ 8.5 ಪಟ್ಟು ಅಧಿಕ ಸ್ಪೀಡ್ . ಅಂದರೆ ಊಹಿಸುವುದೂ ಅಸಾಧ್ಯ. 

Written by - Ranjitha R K | Last Updated : Feb 26, 2021, 06:15 PM IST
  • ಭಾರತದ ಬತ್ತಳಿಕೆಯಲ್ಲಿರುವ ಒಂದು ಅಸ್ತ್ರವನ್ನು ಕಂಡು ಪಾಕಿಸ್ತಾನ ನಿದ್ದೆಯಲ್ಲೂ ನಡುಗುತ್ತಿದೆ
  • ಬ್ರಹ್ಮೋಸ್ 2 ಬಗ್ಗೆ ಪಾಕಿಸ್ತಾನದ ಅಧ್ಯಕ್ಷರು ಹೇಳಿದ್ದು ಏನು ಗೊತ್ತಾ..?
  • ಬ್ರಹ್ಮೋಸ್ 2 ಸರಿಗಟ್ಟುವ ಮತ್ತೊಂದು ಕ್ಷಿಪಣಿ ಇದೆಯಾ..?
BrahMos-2 : ಭಾರತದ ಆ ‘ಬ್ರಹ್ಮಾಸ್ತ್ರವನ್ನು ನೋಡಿ ನಿದ್ದೆಯಲ್ಲೂ ನಡುಗಿದ ಪಾಕ್.! title=
ಭಾರತದ ಬತ್ತಳಿಕೆಯಲ್ಲಿರುವ ಒಂದು ಅಸ್ತ್ರವನ್ನು ಕಂಡು ಪಾಕಿಸ್ತಾನ ನಿದ್ದೆಯಲ್ಲೂ ನಡುಗುತ್ತಿದೆ (file photo)

ಇಸ್ಲಾಮಾಬಾದ್: ಭಾರತದ ಬತ್ತಳಿಕೆಯಲ್ಲಿರುವ ಒಂದು ಅಸ್ತ್ರವನ್ನು (Weapon) ಕಂಡು ಪಾಕಿಸ್ತಾನ ನಿದ್ದೆಯಲ್ಲೂ ನಡುಗುತ್ತಿದೆ. ಭಾರತದ ಜೊತೆ ದುಸ್ಸಾಹಸ ಸರಿಯಲ್ಲ ಎಂಬುದು ಪಾಕಿಸ್ತಾನಕ್ಕೆ (Pakistan) ನಿಧಾನಕ್ಕೆ ಮನವರಿಕೆಯಾಗುತ್ತಿದೆ. 

‘ಬ್ರಹ್ಮೋಸ್2’ಗೆ ಹೆದರಿದ ಪಾಕಿಸ್ತಾನ..!
ಗುರುವಾರ ಪಾಕಿಸ್ತಾನದಲ್ಲಿ 50ನೇ ವಾಯುಪಡೆ ದಿನಾಚರಣೆ (PAF Day) ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಅಧ್ಯಕ್ಷ ಆರೀಫ್ ಅಲ್ವಿ (Arif Alvi) ಪಾಲ್ಗೊಂಡಿದ್ದರು. ಬ್ರಹ್ಮೋಸ್ 2 (BrahMos-2) ಬಗ್ಗೆ ಪಾಕಿಸ್ತಾನ (Pakistan) ಎಷ್ಟು ಹೆದರಿದೆಯೆಂಬುದು ಗೊತ್ತಾಗಿದ್ದು ಅಲ್ಲಿಯೇ..!

ಇದನ್ನೂ ಓದಿ : ಇಮ್ರಾನ್ ಖಾನ್ ದೊಡ್ಡ ಆಘಾತ, ಜೂನ್ 2021 ರವರೆಗೆ FATF ಬೂದು ಪಟ್ಟಿಯಲ್ಲಿಯೇ ಮುಂದುವರೆಯಲಿದೆ ಪಾಕ್

ಕಾರ್ಯಕ್ರಮದಲ್ಲಿ ಮಾತನಾಡಿದ ಆರೀಫ್ ಅಲ್ವಿ “ಭಾರತ ಬ್ರಹ್ಮೋಸ್2 ಕ್ಷಿಪಣಿ ತಯಾರಿಸಿದೆ. ಅದರ ವೇಗ 8.5 ಮ್ಯಾಕ್. ಅಂದರೆ ಶಬ್ದದ ವೇಗಕ್ಕೂ 8.5 ಪಟ್ಟು ಅಧಿಕ. ಕ್ಷಣಾರ್ಧದಲ್ಲಿ ಬ್ರಹ್ಮೋಸ್ 2 ಪಾಕಿಸ್ತಾನದ ಯಾವುದೇ ಪ್ರದೇಶವನ್ನು ಧ್ವಂಸಗೊಳಿಸಬಲ್ಲದು. ಹಾಗಾಗಿ ಭಾರತದ (India) ವಿರುದ್ಧ ನಮ್ಮ ರಕ್ಷಣಾ ಸನ್ನದ್ದತೆಯನ್ನು ಹೆಚ್ಚಿಸುವ ಅಗತ್ಯವಿದೆ” ಎಂದು ಹೇಳಿದ್ದಾರೆ.

ಪಾಕಿಸ್ತಾನ ಬ್ರಹ್ಮೋಸ್ 2 ಬಗ್ಗೆ ಹೆದರಲು ಕಾರಣವೇನು?
ಇದು ಭಾರತ ಮತ್ತು ರಷ್ಯಾ (Russia) ಜಂಟಿಯಾಗಿ ರೂಪಿಸಿರುವ ಮಹಾ ಮಾರಕ ಕ್ಷಿಪಣಿ . ಈ ಕ್ಷಿಪಣಿಗೆ ತಡೆಒಡ್ಡುವ ಯಾವುದೇ ಪ್ರತ್ಯಾಸ್ತ್ರ ಇನ್ನೂ ಸಿದ್ದವಾಗಿಲ್ಲ.

ಇದನ್ನೂ ಓದಿ : PNB Scam: ನಿರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮತಿ ನೀಡಿದ UK ನ್ಯಾಯಾಲಯ, ಆದರೆ...?

ಇಟ್ಟ ಗುರಿ ಕ್ಷಣಾರ್ಧದಲ್ಲಿ ಧ್ವಂಸ :
ಬ್ರಹ್ಮೋಸ್ ತಾಕತ್ತು ಅದರ ವೇಗ. ಶಬ್ದಾತೀತ ವೇಗದಲ್ಲಿ ಸಿಡಿಯುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಅದನ್ನೊಮ್ಮೆ ಕಲ್ಪಿಸಿಕೊಳ್ಳಿ. ಬ್ರಹ್ಮೋಸ್ 2 ಕ್ಷಿಪಣಿಯ  ಸ್ಪೀಡ್ 8.5 ಮ್ಯಾಕ್. ಅಂದರೆ ಶಬ್ದದ ವೇಗಕ್ಕಿಂತ 8.5 ಪಟ್ಟು ಅಧಿಕ ಸ್ಪೀಡ್ (Speed). ಅಂದರೆ ಊಹಿಸುವುದೂ ಅಸಾಧ್ಯ. ಈ ಬ್ರಹ್ಮೋಸ್ ಚಿಮ್ಮುವ ವೇಗ ಗಂಟೆಗೆ ನೂರಲ್ಲ, ಇನ್ನೂರಲ್ಲ ಪ್ರತಿ ಗಂಟೆಗೆ ಬರೋಬ್ಬರಿ 9800 ಕಿಲೋ ಮೀಟರ್. 100 ಕಿಮೀ ಪ್ರತಿ ಗಂಟೆ ವೇಗದಲ್ಲಿ ಸಾಗುವ ಕಾರು ಯಾವುದಕ್ಕಾದರೂ ಅಪ್ಪಳಿಸಿದಾಗ ಆಗುವ ವಿನಾಶವನ್ನು ನೀವು ಊಹಿಸಬಹುದು. ಆದರೆ, ಅದೇ ಕಾರು (car)980 ಪಟ್ಟು ಹೆಚ್ಚು ಸ್ಪೀಡ್‌ನಲ್ಲಿ ಚಿಮ್ಮಿ ಅಪ್ಪಳಿಸಿದರೆ, ಆಗುವ ವಿನಾಶ ಕಲ್ಪಿಸಲೂ ಸಾಧ್ಯವಿಲ್ಲ. ಆ ಸ್ಪೀಡಿನಲ್ಲಿ ಸಿಡಿಯುತ್ತದೆ ಬ್ರಹ್ಮೋಸ್ 2. 1000 ಕಿಲೋ ಮೀಟರ್ ದೂರದಲ್ಲಿ ಕುಳಿತಿರುವ ವೈರಿಯನ್ನು ಇದು ಹೊಡೆದುರುಳಿಸುತ್ತದೆ. ಅಂದರೆ, ಪಾಕಿಸ್ತಾನದ (Pakistan) ಯಾವ ಮೂಲೆಯನ್ನೂ ಬೇಕಾದರೂ ಕ್ಷಣಾರ್ಧದಲ್ಲಿ ಮುಟ್ಟಬಲ್ಲದು ಬ್ರಹ್ಮೋಸ್ 2. ಒಂದು ವೇಳೆ ಈ ಬ್ರಹ್ಮೋಸ್ ತುದಿಯಲ್ಲಿ ಅಣುಬಾಂಬ್ ಇದ್ದರೆ ಪರಿಣಾಮ ನೀವೇ ಊಹಿಸಿ.

ಇದನ್ನೂ ಓದಿ : ಆ ಒಂದು ಪೋನ್ ಕಾಲ್ ನಿಂದ ಬದಲಾಯಿತಾ ಭಾರತ-ಪಾಕ್ ನಡುವಿನ ಸಂಬಂಧ...?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News