ತನ್ನ ಮಕ್ಕಳ ಸಂಖ್ಯೆ ಬಹಿರಂಗ ಪಡಿಸಲು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ನಕಾರ

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಒಂಟಿ ತಾಯಂದಿರ ಮಕ್ಕಳು ಬೆಳೆದ ಬಗ್ಗೆಯನ್ನು ವಿವರಿಸುತ್ತಾ 'ಕೆಟ್ಟದಾಗಿ ಬೆಳೆದ, ಅಜ್ಞಾನ, ಆಕ್ರಮಣಕಾರಿ ಮತ್ತು ನ್ಯಾಯ ಸಮ್ಮತವಲ್ಲದವರು' ಎಂದು ವಿವರಿಸುವ ಲೇಖನವನ್ನು ಬರೆದಿದ್ದಾರೆ.

Updated: Nov 30, 2019 , 02:33 PM IST
ತನ್ನ ಮಕ್ಕಳ ಸಂಖ್ಯೆ ಬಹಿರಂಗ ಪಡಿಸಲು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ನಕಾರ
file photo

ನವದೆಹಲಿ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಒಂಟಿ ತಾಯಂದಿರ ಮಕ್ಕಳು ಬೆಳೆದದ ಬಗ್ಗೆಯನ್ನು ವಿವರಿಸುತ್ತಾ 'ಕೆಟ್ಟದಾಗಿ ಬೆಳೆದ, ಅಜ್ಞಾನ, ಆಕ್ರಮಣಕಾರಿ ಮತ್ತು ನ್ಯಾಯ ಸಮ್ಮತವಲ್ಲದವರು' ಎಂದು ವಿವರಿಸುವ ಲೇಖನವನ್ನು ಬರೆದಿದ್ದಾರೆ. ಈ ಹಿನ್ನಲೆಯಲ್ಲಿ ಈಗ ಅವರ ವೈಯಕ್ತಿಕ ಜೀವನ ಮತ್ತು ಕುಟುಂಬ ಸಂಬಂಧಗಳ ಬಗ್ಗೆ ಪ್ರಶ್ನಿಸಲಾಗಿದೆ. 

ಶುಕ್ರವಾರ ಬ್ರಿಟಿಷ್ ರೇಡಿಯೊ ಸ್ಟೇಷನ್ ಎಲ್ಬಿಸಿಯಲ್ಲಿ ಕಾಣಿಸಿಕೊಂಡ ಜಾನ್ಸನ್ ಅವರು ಪ್ರೇಕ್ಷರಿಂದ ಈ ಪ್ರಶ್ನೆಯನ್ನು ಎದುರಿಸಿದರು, 1995 ರ ಸ್ಪೆಕ್ಟೇಟರ್ಗಾಗಿ ಬರೆದ ಲೇಖನವನ್ನು ಉಲ್ಲೇಖಿಸಿ ಮಾತನಾಡಿದ ರೂತ್ ಎನ್ನುವ ವ್ಯಕ್ತಿ ಪ್ರಧಾನ ಮಂತ್ರಿ ಜಾನ್ಸನ್ ಗೆ ಪ್ರಶ್ನಿಸುತ್ತಾ 'ಒಂಟಿ ತಾಯಂದಿರ ಬಗ್ಗೆ ನೀವು ಹೇಳಿದ್ದನ್ನು ತಾವು ಪ್ರಶಂಸಿಸುವುದಿಲ್ಲ' ಎಂದು ಸೇರಿಸುವ ಮೊದಲು ನಿಮ್ಮ ಕುಟುಂಬವನ್ನು ಚರ್ಚಿಸಲು ನೀವು ನಿರಾಕರಿಸಿದಾಗ ನನ್ನಂತಹ ಜನರನ್ನು ಟೀಕಿಸಲು ನೀವು ಯಾಕೆ ಉತ್ಸುಕರಾಗಿದ್ದಿರಿ? ಎಂದು ಜಾನ್ಸನ್ ರನ್ನು ಪ್ರಶ್ನಿಸಿದರು.

ಎರಡು ಬಾರಿ ಮದುವೆಯಾದ ಜಾನ್ಸನ್‌ಗೆ ನಾಲ್ಕು ಮಕ್ಕಳು - ಇಬ್ಬರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ - ಅವರ ಇತ್ತೀಚಿನ ಮಾಜಿ ಪತ್ನಿ ಮರೀನಾ ವೀಲರ್ ಅವರು 2018 ರಲ್ಲಿ ಬೇರ್ಪಟ್ಟರು. ಜಾನ್ಸನ್‌ಗೆ ವಿವಾವೇತರ ಸಂಬಂಧದಿಂದಾಗಿ ಐದನೇ ಮಗು ಇದೆ ಎಂದು ವದಂತಿಗಳು ಬ್ರಿಟನ್‌ನಲ್ಲಿ ಬಹಳ ಹಿಂದಿನಿಂದಲೂ ಹರಡಿವೆ. ಜಾನ್ಸನ್ ಅವರ ವೈಯಕ್ತಿಕ ಜೀವನವು ಬ್ರಿಟನ್ನಲ್ಲಿ ಪ್ರಮುಖ ಸುದ್ದಿಯಾಗಿ ಮಾರ್ಪಟ್ಟಿದೆ.

ಅಮೆರಿಕದ ಉದ್ಯಮಿ ಜೆನ್ನಿಫರ್ ಅರ್ಕುರಿಯೊಂದಿಗೆ ಜಾನ್ಸನ್ ಸಂಬಂಧ ಹೊಂದಿದ್ದನೆಂದು ಆರೋಪಿಸಲಾಗಿದೆ, ಇತ್ತೀಚೆಗೆ ರಾಷ್ಟ್ರೀಯ ದೂರದರ್ಶನದಲ್ಲಿ ಜಾನ್ಸನ್ 'ನಾನು ನನ್ನ ಮಕ್ಕಳನ್ನು ತುಂಬಾ ಪ್ರೀತಿಸುತ್ತೇನೆ ಆದರೆ ಅವರು ಈ ಚುನಾವಣೆಯಲ್ಲಿ ನಿಲ್ಲುತ್ತಿಲ್ಲ. ಆದ್ದರಿಂದ ನಾನು ಅವರ ಬಗ್ಗೆ ಪ್ರತಿಕ್ರಿಯಿಸಲು ಹೋಗುವುದಿಲ್ಲ' ಎಂದು ಜಾನ್ಸನ್ ಸಂದರ್ಶನದಲ್ಲಿ ಹೇಳಿದರು.