Congo BSF Soldiers: ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯ ಅಡಿಯಲ್ಲಿ ಕಾಂಗೋದಲ್ಲಿ ನಿಯೋಜಿಸಲಾದ ಇಬ್ಬರು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಮಂಗಳವಾರ ಹುತಾತ್ಮರಾದರು. ಪಡೆಯ ವಕ್ತಾರರು ಈ ಮಾಹಿತಿ ನೀಡಿದ್ದಾರೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಇಬ್ಬರು ವೀರ ಯೋಧರನ್ನು ಕಳೆದುಕೊಂಡಿದ್ದಕ್ಕಾಗಿ ತೀವ್ರ ದುಃಖಿತನಾಗಿದ್ದೇನೆ ಎಂದು ಸಂತಾಪ ಸೂಚಿಸಿದ್ದಾರೆ. ಅತಿರೇಕದ ದಾಳಿ ನಡೆಸಿದ ದುಷ್ಕರ್ಮಿಗಳನ್ನು ಹೊಣೆಗಾರರನ್ನಾಗಿ ಮಾಡಿ ನ್ಯಾಯಾಂಗದ ಮುಂದೆ ತರಬೇಕು ಎಂದಿದ್ದಾರೆ.
ಇದನ್ನೂ ಓದಿ: Rishi Sunak Wife: ಬ್ರಿಟನ್ ರಾಣಿಗಿಂತ ಶ್ರೀಮಂತೆ ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ!
ಮೃತರ ಕುಟುಂಬಗಳಿಗೆ ಸಚಿವರ ಸಾಂತ್ವನ :
ಮೃತರ ಕುಟುಂಬಗಳಿಗೆ ಸಚಿವರು ಸಾಂತ್ವನ ಹೇಳಿದ್ದಾರೆ. ಇಬ್ಬರೂ ಸೈನಿಕರು ಕಾಂಗೋದಲ್ಲಿ ಯುಎನ್ ಶಾಂತಿಪಾಲನಾ ಕಾರ್ಯಾಚರಣೆಯ ಭಾಗವಾಗಿದ್ದರು. ಅಂತಾರಾಷ್ಟ್ರೀಯ ಮಾಧ್ಯಮಗಳ ಪ್ರಕಾರ, ಕಾಂಗೋದ ಪೂರ್ವ ನಗರವಾದ ಗೋಮಾದಲ್ಲಿ ಯುಎನ್ ಮಿಷನ್ ವಿರುದ್ಧದ ಪ್ರತಿಭಟನೆಯ ಎರಡನೇ ದಿನದಂದು ಕನಿಷ್ಟ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 50 ಜನರು ಗಾಯಗೊಂಡಿದ್ದಾರೆ.
Deeply grieved at the loss of lives of two valiant Indian peacekeepers of the BSF in the Democratic Republic of Congo. They were part of the MONUSCO.
The perpetrators of these outrageous attacks must be held accountable and brought to justice .
— Dr. S. Jaishankar (@DrSJaishankar) July 26, 2022
ಇದನ್ನೂ ಓದಿ: Viral: ಮಗು ರಕ್ಷಿಸಲು ಹಾವಿನೊಂದಿಗೆ ಇಲಿಯ ಕಾದಾಟ.. ಗೆದ್ದವರು ಯಾರು ನೋಡಿ?
ಸುಮಾರು 75 ಸೈನಿಕರನ್ನು ನಿಯೋಜಿಸಲಾಗಿತ್ತು:
ಜುಲೈ 26 ರಂದು, ಕಾಂಗೋದ ಬುಟೆಂಬೊದಲ್ಲಿ ನೆಲೆಸಿದ್ದ ಯುಎನ್ ಶಾಂತಿಪಾಲನಾ ಪಡೆಯ ಭಾಗವಾಗಿದ್ದ ಇಬ್ಬರು ಬಿಎಸ್‌ಎಫ್ ಸಿಬ್ಬಂದಿ ಹಿಂಸಾತ್ಮಕ ಸಶಸ್ತ್ರ ಪ್ರತಿಭಟನೆಯ ಸಂದರ್ಭದಲ್ಲಿ ಉಂಟಾದ ಗಾಯಗಳಿಗೆ ಬಲಿಯಾದರು" ಎಂದು ಪಡೆಯ ವಕ್ತಾರರು ತಿಳಿಸಿದ್ದಾರೆ. 70-74 ಬಿಎಸ್‌ಎಫ್ ಸಿಬ್ಬಂದಿಯ ಎರಡು ತುಕಡಿಗಳು ಈ ಪ್ರದೇಶದಲ್ಲಿ ಬೀಡುಬಿಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.