ಚೀನಾ : ಬೃಹತ್ ಕಟ್ಟಡವೊಂದರಲ್ಲಿ ಭಾರಿ ಪ್ರಮಾಣದ ಅಗ್ನಿಅವಘಡ ನಡೆದಿದೆ. ಚೀನಾದ ಚಾಂಗ್ಶಾ ನಗರದಲ್ಲಿ ಈ ಘಟನೆ ಜರುಗಿದ್ದು, ದಟ್ಟ ಹೊಗೆ ಆಗಸದ ಎತ್ತರಕ್ಕೆ ಹಾರುತ್ತಿದ್ದು ಭಯ ಹುಟ್ಟಿಸುವಂತಿದೆ.
ಸಂಪೂರ್ಣ ಕಟ್ಟಡ ಬೆಂಕಿಯಲ್ಲಿ ಬೆಂದಂತೆ ಕಾಣುತ್ತಿದೆ. ಸದ್ಯ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಸಿಜಿಟಿಎನ್ ಮಾಧ್ಯಮ ವರದಿ ಮಾಡಿದೆ. ವಾಣಿಜ್ಯ ಕಟ್ಟಡವು 200 ಮೀಟರ್ಗಿಂತ ಹೆಚ್ಚು ಎತ್ತರವಾಗಿದೆ.
ಇದನ್ನೂ ಓದಿ: SCO ಶೃಂಗಸಭೆ 2022, ಪಿಎಂ ಮೋದಿ ಭಾಷಣ : ಆಹಾರ ಭದ್ರತೆ ಸಮಸ್ಯೆಗಳ ಬಗ್ಗೆ ಪ್ರಸ್ತಾಪ
— China in Pictures (@tongbingxue) September 16, 2022
ಪ್ರಸ್ತುತ ರಕ್ಷಣಾ ಕಾರ್ಯಾಚರಣೆಯೂ ನಡೆಯುತ್ತಿದೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಒಂದು ಡಜನ್ಗಿಂತಲೂ ಹೆಚ್ಚು ಮಹಡಿಗಳನ್ನು ಆವರಿಸಿರುವ ಬೆಂಕಿ, ಕಪ್ಪು ಹೊಗೆ ದಟ್ಟವಾದ ಮೋಡವು ಆಕಾಶಕ್ಕೆ ಏರುತ್ತಿದೆ. ವರದಿಗಳ ಪ್ರಕಾರ, ಉರಿಯುತ್ತಿರುವ ಕಟ್ಟಡ ಸರ್ಕಾರಿ-ಚಾಲಿತ ದೂರಸಂಪರ್ಕ ಕಂಪನಿ ಚೀನಾ ಟೆಲಿಕಾಂ ಒಡೆತನದದ್ದು ಎಂದು ಹೇಳಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.